ಭಾನುವಾರ, ಏಪ್ರಿಲ್ 27, 2025
HomeCinemaಧರ್ಮಸ್ಥಳಕ್ಕೆ ಕಾಂತಾರ ನಟ ರಿಷಬ್ ಶೆಟ್ಟಿ ಭೇಟಿ : ವೀರೆಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದ...

ಧರ್ಮಸ್ಥಳಕ್ಕೆ ಕಾಂತಾರ ನಟ ರಿಷಬ್ ಶೆಟ್ಟಿ ಭೇಟಿ : ವೀರೆಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದ ದಂಪತಿ

- Advertisement -

ಧರ್ಮಸ್ಥಳ : Kantara Rishab Shetty Dharamsthala : ಜಗತ್ತಿನಾದ್ಯಂತ ಇರುವ ಸಿನಿಪ್ರಿಯರ ಮೆಚ್ಚುಗೆ ಗಳಿಸಿರೋ ಕಾಂತಾರಾ ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಈ ಮಧ್ಯೆ ಗಳಿಕೆಯಲ್ಲೂ ಕಾಂತಾರ ಹೊಸ ಹೊಸ ದಾಖಲೆ ಬರೆಯುತ್ತ ಸಾಗುತ್ತಿದೆ. ಹೀಗಿರುತ್ತಿರುವಾಗಲೇ ಸಿನಿಮಾದ ಯಶಸ್ಸಿನ‌ ಹಿನ್ನೆಲೆಯಲ್ಲಿ ನಟ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ ಧರ್ಮಸ್ಥಳಕ್ಕೆ ಪತ್ನಿ ಸಮೇತ ಭೇಟಿ ನೀಡಿದ್ದು ಹೆಗ್ಗಡೆಯವರ ಆರ್ಶಿವಾದ ಪಡೆದಿದ್ದಾರೆ.

ಕಾಂತಾರ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಟ ರಿಷಬ್ ಶೆಟ್ಟಿ (Kantara Rishab Shetty Dharamsthala) ಭೇಟಿ ನೀಡಿದ್ದಾರೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪತ್ನಿ ಪ್ರಗತಿ ಶೆಟ್ಟಿ ಜೊತೆಗೆ ಧರ್ಮಸ್ಥಳಕ್ಕೆ ಆಗಮಿಸಿದ ರಿಷಬ್ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಿಶಬ್ ಶೆಟ್ಟಿ ಹಾಗೂ ಸಿನಿಮಾ ತಂಡದ ಇತರ ಸದಸ್ಯರು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ದಂಪತಿಗಳನ್ನು ಭೇಟಿ ಮಾಡಿ ಹೂವಿನ ಹಾರ ಹಾಕಿ ಗೌರವಿಸಿ ಹೆಗ್ಗಡೆ ದಂಪತಿಗಳ ಕಾಲಿಗೆ ಬಿದ್ದು ಆಶಿರ್ವಾದ ಪಡೆದುಕೊಂಡರು.

ಈ ವೇಳೆ ರಿಶಬ್ ದಂಪತಿಗಳಿಗೆ ಆಶಿರ್ವಾದ ಮಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಸಿನಿಮಾದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ರಿಶಬ್ ದಂಪತಿಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆಯವರ ಜೊತೆಗೂ ಚರ್ಚೆ ನಡೆಸಿದರು.

ಧರ್ಮಸ್ಥಳ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಿಶಬ್ ಶೆಟ್ಟಿ, ಸಿನಿಮಾ ಮಾಡುವ ಮುನ್ನ ಹೆಗ್ಗಡೆಯವರನ್ನ ಭೇಟಿ ಮಾಡಿದ್ದೆ.ಆ ಬಳಿಕ ಟ್ರೇಲರ್ ರಿಲೀಸ್ ಆದ ಬಳಿಕ ಮತ್ತೆ ಬಂದಿದ್ದೆ.ಸಿನಿಮಾ ರಿಲೀಸ್ ಬಳಿಕ ಹೆಗ್ಗಡೆಯವರ ಭೇಟಿಗೆ ಸಾಕಷ್ಟು ಸಲ ಬರಬೇಕು ಅಂದುಕೊಂಡಿದ್ದೆ.ಆದರೆ ಇದೀಗ ಕಾಲ ಕೂಡಿ ಬಂತು, ಬಂದು ಆಶೀರ್ವಾದ ಪಡೆದೆವು.ಸಿನಿಮಾ 30 ದಿನ ದಾಟಿ ಯಶಸ್ವಿಯಾಗಿ ಓಡ್ತಾ ಇದೆ ಎಂದರು.

youtube link : ಧರ್ಮಸ್ಥಳಕ್ಕೆ ಕಾಂತಾರ ನಟ ರಿಷಬ್ ಶೆಟ್ಟಿ ಭೇಟಿ : ವೀರೆಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದ ದಂಪತಿ

ಕೆಲ‌ ದಿನಗಳ ಹಿಂದೆಯಷ್ಟೇ ವಿರೇಂದ್ರ ಹೆಗ್ಗಡೆ ದಂಪತಿ ಮಂಗಳೂರಿನ ಮಾಲ್ ನಲ್ಲಿ ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾ ವೀಕ್ಷಿಸಿದ್ದರು. ಅಲ್ಲದೇ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ವೇಳೆ ಗ್ಲೋಬಲ್ ಇನವೆಸ್ಟ್ ಮೀಟ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಗರದ ಗರುಡಾ ಮಾಲ್ ನಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Rambha and her children injured:ಬಹುಭಾಷಾ ನಟಿ ರಂಭಾ ಕಾರು ಅಪಘಾತ : ನನ್ನ ಮಗಳಿಗಾಗಿ ನೀವೆಲ್ಲ ಪ್ರಾರ್ಥಿಸಿ ಎಂದು ಬೇಡಿದ ನಟಿ

ಇದನ್ನೂ ಓದಿ : Rakshit Shetty : ರಕ್ಷಿತ್‌ ಶೆಟ್ಟಿ ನಿರ್ಮಾಣದಲ್ಲಿ “ಹಚ್ಚೇವು ಕನ್ನಡದ ದೀಪ” ಹಾಡು ರೀ ಕ್ರಿಯೆಟ್‌

Kantara Actor Visits Dharmasthala Actor Rishab Shetty his wife Pragathi Shetty meet Virendra Heggade |News Next Kannada

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular