ಕಾರವಾರ : ತಾಯಿಯ ತಿಥಿ ಕಾರ್ಯವನ್ನು ಮುಗಿಸಿ ಪೂನಾಕ್ಕೆ ಹೊರಟ್ಟಿದ್ದ ಉದ್ಯಮಿಯೋರ್ವರನ್ನು ದುಷ್ಕರ್ಮಿಗಳು ಮನೆಯಲ್ಲಿಯೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣದಲ್ಲಿ (Karawar Hankon) ನಡೆದಿದೆ. ಉದ್ಯಮಿ ಪತ್ನಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಪಿಗಳು ಎಸ್ಕೇಪ್ ಆಗಿದ್ದು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಕಾರವಾರದ ಹಣಕೋಣ್ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆಯೇ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು. ಮುಂಜಾನೆ 5 ಗಂಟೆಯ ಸುಮಾರಿಗೆ ರಾಜು ನಾಯ್ಕ್ (52 ವರ್ಷ) (Raju Naik ) ಎಂಬವರ ಮನೆಗೆ ದುಷ್ಕರ್ಮಿಗಳ ತಂಡ ಎಂಟ್ರಿ ಕೊಟ್ಟಿತ್ತು. ಪೂನಾಕ್ಕೆ ತೆರಳಲು ಕಾರಿಗೆ ಬ್ಯಾಗ್ ಜೋಡಿಸುತ್ತಿರುವ ವೇಳೆಯಲ್ಲಿ ದುಷ್ಕರ್ಮಿಗಳ ತಂಡ ರಾಜು ನಾಯ್ಕ್ ಮೇಲೆ ದಾಳಿಗೆ ಮುಂದಾಗಿದೆ. ಈ ವೇಳೆಯಲ್ಲಿ ರಾಜು ನಾಯ್ಕ್ ಮನೆಯ ಒಳಗೆ ಓಡಿದ್ದಾರೆ. ಆದರೆ ಬೆನ್ನಟ್ಟಿ ಬಂದ ದುಷ್ಕರ್ಮಿಗಳ ತಂಡ ಮನೆಯ ಒಳಗೆ ಮಾರಕಾಸ್ತ್ರಗಳಿಂದ ರಾಜು ನಾಯ್ಕ್ ಅವರನ್ನು ಕಡಿದು ಹಾಕಿದೆ.
ಇದನ್ನೂ ಓದಿ : ಸ್ನಾನ ಮಾಡಿದ ತಕ್ಷಣವೇ ಟವೆಲ್ ಸುತ್ತಿಕೊಳ್ಳಬೇಡಿ ! ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ
ಅಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಳು ಶೌಚಾಲಯದಲ್ಲಿದ್ದ ರಾಜು ನಾಯ್ಕ್ ಪತ್ನಿ ವೈಶಾಲಿ ಅವರ ಮೇಲೂ ಹಲ್ಲೆ ನಡೆಸಿ ಸ್ಥಳದಿಂದ ಎಸ್ಕೇಪ್ ಆಗಿದೆ. ಘಟನೆ ನಡೆಯುತ್ತಿದ್ದಂತೆಯೇ ವೈಶಾಲಿ ಅವರು ಸಂಬಂಧಿಕರಿಗೆ ಕರೆ ಮಾಡಿದ್ದಾರೆ. ಕೂಡಲೇ ವೈಶಾಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಾಯಿಯ ತಿಥಿ ಕಾರ್ಯಕ್ಕಾಗಿ ರಾಜು ನಾಯ್ಕ್ ಹಾಗೂ ಪತ್ಬಿ ವೈಶಾಲಿ ಅವರು ಊರಿಗೆ ಆಗಮಿಸಿದ್ದರು. ಕಾರ್ಯಕ್ರಮವನ್ನು ಮುಗಿಸಿಕೊಂಡು ಇಂದು ಪೂನಾಕ್ಕೆ ತೆರಳುವವರಿದ್ದರು ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಚಿತ್ತಾಕುಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಸ್ಥಳಕ್ಕೆ ಉತ್ತರ ಕನ್ನಡ ಎಸ್‌ಪಿ ನಾರಾಯಣ ಅವರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಡಿವೈಎಸ್‌ಪಿ ಗಿರೀಶ್ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಆದರೆ ಯಾವ ಕಾರಣಕ್ಕೆ ಕೊಲೆ ನಡೆದಿದೆ ಅನ್ನೋದು ತಿಳಿದು ಬಂದಿಲ್ಲ.
ಇದನ್ನೂ ಓದಿ : ಬಸ್ ಚಲಾಯಿಸುವ ವೇಳೆ ಚಾಲಕನಿಗೆ ಹೃದಯಾಘಾತ ..! ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು 45 ಪ್ರಯಾಣಿಕರ ಜೀವ
ರಾಜು ನಾಯ್ಕ್ ಹಾಗೂ ವೈಶಾಲಿ ದಂಪತಿಗಳ ಮಗ ವಿನಾಯಕ ನಾಯ್ಕ್ ಅಮೇರಿಕಾದಲ್ಲಿ ಎಂಎಸ್ ಮಾಡುತ್ತಿದ್ದಾನೆ. ಹೀಗಾಗಿ ದಂಪತಿಗಳು ಮಾತ್ರವೇ ಊರಿಗೆ ಬಂದಿದ್ದರು. ರಾಜು ನಾಯ್ಕ್ ಅವರಿಗೆ ಊರಿನಲ್ಲಿ ಯಾವುದೇ ವ್ಯವಹಾರ ಕೂಡ ಇರಲಿಲ್ಲ. ವೈಯಕ್ತಿಕ ಕಾರಣಕ್ಕೆ ಕೊಲೆ ನಡೆದಿದ್ಯೋ ಇಲ್ಲಾ, ವ್ಯವಹಾರದ ಕಾರಣಕ್ಕೆ ಈ ಹತ್ಯೆಯಾಗಿದೆಯೋ ಅನ್ನೋದು ಪೊಲೀಸರ ತನಿಖೆಯ ನಂತರವಷ್ಟೇ ತಿಳಿದು ಬರಬೇಕಾಗಿದೆ.
ಇದನ್ನೂ ಓದಿ : ಶಾಲೆಗಳ ದಸರಾ ರಜೆಗೆ ಹೊಸ ಮಾರ್ಗಸೂಚಿ : ಎಷ್ಟು ದಿನ ರಜೆ ? ಇಲ್ಲಿದೆ ಸಂಪೂರ್ಣ ಮಾಹಿತಿ
Karawar Hankon Businessman Raju Naik Murder case Big Updates