ಭಾನುವಾರ, ಏಪ್ರಿಲ್ 27, 2025
Homekarnatakaಕಾರ್ಕಳ ಹಿಂದೂ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಖಂಡನೀಯ : ಶಾಸಕ ಸುನಿಲ್‌ ಕುಮಾರ್‌...

ಕಾರ್ಕಳ ಹಿಂದೂ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಖಂಡನೀಯ : ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ

- Advertisement -

Karkala Gang Rape Case : ಕಾರ್ಕಳ : ಹಿಂದೂ ಯುವತಿಗೆ ಅಮಲು ಪದಾರ್ಥಗಳನ್ನು ನೀಡಿ ಮತ್ತು ಬರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಕಾರ್ಕಳದಲ್ಲಿ ನಡೆದಿದ್ದು, ಘಟನೆಯನ್ನು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಅವರು ಖಂಡಿಸಿದ್ದಾರೆ. ಬೋವಿ ಸಮುದಾಯದ ಬಡ ಯುವತಿಯೋರ್ವಳಿಗೆ ಅಮಲು ಪದಾರ್ಥಗಳನ್ನು ನೀಡಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವುದು ಅತ್ಯಂತ ಪೈಶಾಚಿಕ ಕೃತ್ಯವಾಗಿದೆ ಎಂದಿದ್ದಾರೆ.

ಅಮಾಯಕ ಯುವತಿಯನ್ನು ಪುಸಲಾಯಿಸಿ ಆಕೆಗೆ ಅಮಲು ಪದಾರ್ಥಗಳನ್ನು ನೀಡಿ ಕಾರಿನಲ್ಲಿ ದೂರದ ಪಳ್ಳಿಯ ಹಾಡಿಗೆ ಕರೆದೊಯ್ದು ಇಂತಹ ನೀಚ ಕೃತ್ಯವನ್ನು ಎಸಗಿದ್ದಾರೆ ಅಂದ್ರೆ ಊಹಿಸೋದಕ್ಕೂ ಕೂಡ ಸಾಧ್ಯವಿಲ್ಲ. ಇದು ಪೂರ್ವನಿಯೋಜಿತ ಕೃತ್ಯ. ಪೊಲೀಸ್‌ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸುವ ಮೂಲಕ ಘಟನೆಯ ಹಿಂದಿರುವ ಶಕ್ತಿಗಳನ್ನು ಪತ್ತೆ ಹೆಚ್ಚಬೇಕಾಗಿದೆ ಎಂದಿದ್ದಾರೆ.

https://fb.watch/u9guvRC9nK

ಆರೋಪಿಗಳು ಈ ಹಿಂದೆಯೂ ಇಂತಹದ್ದೇ ಕೃತ್ಯವನ್ನು ಎಸಗಿರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿಯೂ ತನಿಖೆ ನಡೆಯಬೇಕಾಗಿದೆ. ರಾಜ್ಯ ಸರಕಾರ ಸಂತ್ರಸ್ತ ಯುವತಿಯ ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕು. ಅಲ್ಲದೇ ಜಿಲ್ಲಾಡಳಿತ ಕೂಡ ಯುವತಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆಯನ್ನು ನೀಡುವ ಜೊತೆಗೆ ಸಂತ್ರಸ್ತ ಯುವತಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯವನ್ನು ಮಾಡಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಕಾರ್ಕಳ : ಹಿಂದೂ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ಆಲ್ತಾಪ್‌ ಸೇರಿ ಇಬ್ಬರು ಅರೆಸ್ಟ್‌

Karkala Gang Rape Case Big Updates MLA Sunil Kumar Reactions
Image Credit to Original Source

ಕಾರ್ಕಳ ಸಾಮೂಹಿಕ ಅತ್ಯಾಚಾರ ಪ್ರಕರಣ : ಎಸ್‌ಪಿ ಡಾ.ಅರುಣ್‌ ಕುಮಾರ್‌ ಹೇಳಿದ್ದೇನು ?

ಕಾರ್ಕಳದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಉಡುಪಿ ಎಸ್‌ಪಿ ಡಾ.ಅರುಣ್‌ ಕುಮಾರ್‌ ಅವರು ಪ್ರತಿಕ್ರೀಯೆ ನೀಡಿದ್ದಾರೆ. ಕಾರ್ಕಳ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಕುರಿತು ದೂರು ಬಂದಿದೆ. ಸಂತ್ರಸ್ತೆಗೆ ಆರೋಪಿ ಮೂರು ತಿಂಗಳಿನಿಂದ ಪರಿಚಿತವಾಗಿದ್ದ. ಶುಕ್ರವಾರ ಆರೋಪಿ ಆಲ್ತಾಪ್‌ ಕರೆ ಮಾಡಿ ಸಂತ್ರಸ್ತೆಗೆ ಬರಲು ಹೇಳಿದ್ದ.

ಇದನ್ನೂ ಓದಿ : ಕಾರ್ಕಡ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಪತ್ನಿ ಕೊಲೆಗೈದು ರಾತ್ರಿಯಿಡಿ ಮನೆಯಲ್ಲೇ ಕುಳಿತಿದ್ದ ಪತಿ !

ಆಕೆ ಬರುತ್ತಿದ್ದಂತೆಯೇ ಅಲ್ಲಿಂದ ಅಪಹರಿಸಿ ಮಧ್ಯಪಾನದಲ್ಲಿ ಅಮಲು ಬರುವ ವಸ್ತುಗಳನ್ನು ಬೆರೆಸಿ ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಆರೋಪಿಗೆ ಬಿಯರ್‌ ಬಾಟಲಿ ತಂದು ಕೊಟ್ಟಿದ್ದ ಇಬ್ಬರ ಪೈಕಿ ಸುಬೇರ್‌ ಎಂಬಾತವನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಕೃತ್ಯಕ್ಕೆ ಬಳಕೆ ಮಾಡಿದ್ದ ವಾಹನಗಳನ್ನು ಸೀಜ್‌ ಮಾಡಲಾಗಿದೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಮುಂಗಾರು, ನವಭಾರತ ಪತ್ರಿಕೆಯ ಹಿರಿಯ ಪತ್ರಕರ್ತ ಸಿದ್ದಕಟ್ಟೆ ಹಿ೦ಗಾಣಿ ಚಂದ್ರಶೇಖರ್ ಎರ್ಮಾಳ್ ವಿಧಿವಶ

Karkala Gang Rape Case Big Updates MLA Sunil Kumar Reactions

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular