ಬೆಂಗಳೂರು : ರಾಜ್ಯ ಸರಕಾರ ಬಡ ಹಾಗೂ ಮಧ್ಯಮ ವರ್ಗದವರಿಗೆ ಗುಡ್ ಕೊಟ್ಟಿದೆ. ಮಹತ್ವಾಕಾಂಕ್ಷಿಯ ಸಪ್ತಪದಿ ಯೋಜನೆಯನ್ನು ಮತ್ತೆ ಆರಂಭಿಸಲು ಮುಂದಾಗಿದೆ.

ಸಪ್ತಪದಿ ಯೋಜನೆಯಡಿಯಲ್ಲು ವಿವಾಹ ಜೋಡಿಗೆ ಸರ್ಕಾರದಿಂದ 55,000 ರೂಪಾಯಿ ಖರ್ಚು ಮಾಡಲಾಗುತ್ತದೆ. ವಿವಾಹವಾಗುವ ವಧುವಿಗೆ 40,000 ರೂ ವೆಚ್ಚದ 8 ಗ್ರಾಂ ತೂಕದ ಚಿನ್ನದ ತಾಳಿ, ಎರಡು ಚಿನ್ನದ ಗುಂಡು, ವರನಿಗೆ ಐದು ಸಾವಿರ ವೆಚ್ಚದಲ್ಲಿ ಶರ್ಟ, ಶಲ್ಯ, ಪಂಚೆ ಹಾಗೂ ಹೂವಿನ ಹಾರ, ಖರೀದಿಸಲು ಹಾಗೂ ವಧುವಿಗೆ 10 ಸಾವಿರ ರೂ. ನೀಡಲಾಗುತ್ತಿತ್ತು.

ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸಪ್ತಪದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೀಗ ಮತ್ತೆ ಸಪ್ತಪದಿ ಯೋಜನೆಯನ್ನು ಜಾರಿಗೆ ತರುತ್ತಿದೆ ಎನ್ನಲಾಗುತ್ತಿದೆ.
ನವೆಂಬರ್ ನಲ್ಲಿ19 ಮತ್ತು 27 ಹಾಗೂ ಡಿಸೆಂಬರ್ ನಲ್ಲಿ 2, 7 ಮತ್ತು 10ರಂದು ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎನ್ನಲಾಗುತ್ತಿದೆ.