ಕಾಂಗ್ರೆಸ್ ಎರಡನೇ ಪಟ್ಟಿ ಇಂದು ಬಿಡುಗಡೆ : ಸುರ್ಜೇವಾಲ

ನವದೆಹಲಿ : (Karnataka Election 2023 Congress) ರಾಜ್ಯ ರಾಜಕೀಯದಲ್ಲಿ ಸದ್ಯ ಟಿಕೇಟ್ ಲಿಸ್ಟ್ ಭರ್ಜರಿ ಸದ್ದು ಮಾಡುತ್ತಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ ಒಂದೊಂದು ಲಿಸ್ಟ್ ಬಿಡುಗಡೆ ಮಾಡಿ ಕುತೂಹಲ ತಣಿಸಿದ್ದಾರೆ. ಈ ಮಧ್ಯೆ ಮಹತ್ವದ ಕ್ಷೇತ್ರಗಳನ್ನು ಒಳಗೊಂಡಂತೆ ಕಾಂಗ್ರೆಸ್ ನ ಎರಡನೇ ಲಿಸ್ಟ್ (Congress second list) ಬಿಡುಗಡೆ ಮತ್ತೆ ಮುಂದೂಡಿಕೆಯಾಗಿದ್ದು, ಗುರುವಾರ ಬೆಳಗ್ಗೆ 11 ಕ್ಕೆ ಕಾಂಗ್ರೆಸ್ ಟಿಕೇಟ್ ಲಿಸ್ಟ್ ಪ್ರಕಟಿಸೋದಾಗಿ ಸುರ್ಜೇವಾಲ ಘೋಷಿಸಿದ್ದಾರೆ.

ಕಳೆದ ಎರಡು ದಿನದಿಂದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳ ಚಿತ್ರ ದೆಹಲಿಯತ್ತ ನೆಟ್ಟಿತ್ತು. ದೆಹಲಿಯಲ್ಲಿ ಸೆಂಟ್ರಲ್ ಎಲೆಕ್ಷನ್ ಕಮಿಷನ್ ಸಭೆ ಮೇಲೆ ಸಭೆ ನಡೆಸಿತ್ತು. ಎಲ್ಲ ಅಂದು ಕೊಂಡಂತೆ ಆಗಿದ್ದರೇ ಕಾಂಗ್ರೆಸ್ ನಾಯಕರು ಇಂದು 124 ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಆದರೆ ತಡರಾತ್ರಿಯವರೆಗೆ ಮೀಟಿಂಗ್ ನಡೆಸಿದ ಸಿಇಸಿ ಕಮಿಟಿ ಟಿಕೇಟ್ ಪಟ್ಟಿಯನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ರಿಲೀಸ್ ಮಾಡೋದಾಗಿ ಘೋಷಿಸಿದೆ. ಸಭೆಯ ಬಳಿಕ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ್, ಸಿಇಸಿ ಕಮಿಟಿ ಸಭೆ ನಡೆಯಲಿದೆ. ಆದರೆ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಗುರುವಾರ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ನ ಎರಡನೇ ಲಿಸ್ಟ್ ಅನೌನ್ಸ್ ಅಗಲಿದೆ ಎಂದಿದ್ದಾರೆ. ಇದನ್ನೂ ಓದಿ : ಸುದೀಪ್‌ ಬಿಜೆಪಿಯ ಸ್ಟಾರ್‌ ಪ್ರಚಾರಕ; ನಾನು ಬೊಮ್ಮಾಯಿ ಮಾಮ ಅವರಿಗೆ ಬೆಂಬಲ ಕೊಡ್ತೇನೆ : ನಟ ಕಿಚ್ಚ ಸುದೀಪ್‌

ನಾವು ಕೊಟ್ಟ ಮಾತಿನಂತೆ ಕರ್ನಾಟಕದಲ್ಲಿ (Karnataka Election 2023 Congress) ಎಲ್ಲ ಪಕ್ಷಗಳಿಗಿಂತ ಮೊದಲು 124 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಪಟ್ಟಿ (Congress second list) ಬಿಡುಗಡೆ ಮಾಡಿದ್ದೇವೆ. ಅದರೆ ಬಿಜೆಪಿ ಇದುವರೆಗೂ ಒಂದೇ ಒಂದು ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿಲ್ಲ. ಯಾಕೆಂದು ನಾನು ಕೇಳಲು ಬಯಸುತ್ತೇನೆ. ಯಾಕೆಂದರೇ ಬಿಜೆಪಿಯಲ್ಲಿ ಇನ್ನೂ ಸಿಎಂ ಸೇರಿದಂತೆ ಸಚಿವರು,ಶಾಸಕರಿಗೆ ಯಾರು ಎಲ್ಲಿ ನಿಲ್ಲಬೇಕೆಂಬುದೇ ನಿರ್ಧಾರವಾಗಿಲ್ಲ ಎಂದು ಟೀಕಿಸಿದರು. ಅಷ್ಟೇ ಅಲ್ಲ ಬೊಮ್ಮಾಯಿಯನ್ನು ಕರ್ನಾಟಕದ ಜನರು ಫೇಲ್ ಮಾಡಿದ್ದಾರೆ. ಇದನ್ನೂ ಓದಿ : ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗುರುವಪ್ಪ ನಾಯ್ಡು ಮನೆ ಮೇಲೆ ಐಟಿ ದಾಳಿ

ಹೀಗಾಗಿ ಬಿಜೆಪಿಗೆ ಜನರ ಬಳಿ ಹೋಗಲು ಯಾವುದೇ ಮುಖ ಇಲ್ಲ. ಹೀಗಾಗಿ ಬಿಜೆಪಿ ಸಿನಿಮಾ ನಟರ ಮೊರೆ ಹೋಗುತ್ತಿದೆ. ಆದರೆ ಕರ್ನಾಟಕದ ಎಲೆಕ್ಷನ್ ಒಂದು ಗಂಭೀರ ವಿಚಾರ. ಸಿನಿಮಾ ನಾಯಕರನ್ನು ಬಳಸಿಕೊಳ್ಳಲು ಇದು ಮೂರು ಗಂಟೆಯ ಸಿನಿಮಾ ಅಲ್ಲ ಎಂದು ಸುರ್ಜೇವಾಲ ಟೀಕಿಸಿದ್ದಾರೆ. ಅಲ್ಲದೇ ಪಿಎಸ್ ಐ ಹಗರಣ,ಮಾಡಾಳು ಪ್ರಕರಣ ಸೇರಿದಂತೆ ಹಲವು ಭ್ರಷ್ಟಾಚಾರ, 40% ಕಮೀಷನ್ ಸೇರಿದಂತೆ ಹಲವು ಆರೋಪ ಎದುರಿಸುತ್ತಿರುವ ಬಿಜೆಪಿ 40 ಸೀಟ್ ಕೂಡ ಗಳಿಸೋದಿಲ್ಲ ಎಂದು ಸುರ್ಜೇವಾಲ ಭವಿಷ್ಯ ನುಡಿದಿದ್ದಾರೆ.

Comments are closed.