ಬೆಂಗಳೂರೂ : ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka MLA Election 2023) ಸಜ್ಜಾಗಿರುವ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯೋ ಕನಸಿನಲ್ಲಿರೋ ಬಿಜೆಪಿಗೆ ಮಾತ್ರ ಇನ್ನೂ ಮೊದಲ ಪಟ್ಟಿ ಬಿಡುಗಡೆಗೂ ಮುಹೂರ್ತ ಕೂಡಿಬಂದಿಲ್ಲ. ಮೂಲಗಳ ಮಾಹಿತಿ ಪ್ರಕಾರ ಬಿಜೆಪಿಯಲ್ಲಿ ಟಿಕೇಟ್ ಹಂಚಿಕೆ ಬಿಕ್ಕಟ್ಟು ತಲೆದೋರಿದೆ. ಸುಮಾರು 75ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ 2ರಿಂದ 5ಕ್ಕೂ ಹೆಚ್ಚು ಆಕಾಂಕ್ಷಿಗಳು ಹೈಕಮಾಂಡ್ ಪಾಲಿಗೆ ತಲೆನೋವಾಗಿದ್ದಾರಂತೆ.
ಹೌದು ಬಿಜೆಪಿಗೆ (Karnataka MLA Election 2023) ಟಿಕೇಟ್ ಪ್ರಕಟಿಸಿದರೇ ಅಸಮಧಾನ ಭುಗಿಲೇಳುವ ಭೀತಿ ಎದುರಾಗಿದೆ. ಹಾಗಿದ್ದರೇ ಬಿಜೆಪಿಯ ಯಾವ ಯಾವ ಕ್ಷೇತ್ರದಲ್ಲಿ ಟಿಕೇಟ್ ಫೈಟ್ ಗರಿಗೆದರಲಿದೆ ಅನ್ನೋದನ್ನು ನೋಡೋದಾದರೇ,
ಇದನ್ನೂ ಓದಿ : Madal Virupakshappa Arrest : ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ
- ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಹಾಲಿ ನಡುವೆ ಫೈಟ್ ಇದೆ. ಇದರ ಮಧ್ಯೆ ವಿಧಾನಪರಿಷತ್ ಸದಸ್ಯ ಅಯನೂರು ಮಂಜುನಾಥ್, ಹೆಸರಾಂತ ವೈದ್ಯ ಧನಂಜಯ್ ಸರ್ಜಿ ಕೂಡ ಟಿಕೇಟ್ ಮೇಲೆ ಕಣ್ಣಿಟ್ಟಿದ್ದಾರೆ.
- ಸೊರಬ: ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ಕೊಡಬಾರದೆಂದು ಬಿಜೆಪಿಯವರೇ ಒತ್ತಡ ಹಾಕಿದ್ದು, ಈ ಕ್ಷೇತ್ರದಿಂದ ಮೇಘರಾಜ್ ಪ್ರಬಲ ಆಕಾಂಕ್ಷಿ.
- ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ತಮ್ಮ ಪುತ್ರಿಗೆ ಟಿಕೆಟ್ ಕೊಡಿಸಲು ಲಾಭಿ
- ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದಿಂದ ಹೂಡಿ ವಿಜಯ್‍ಕುಮಾರ್ ಹಾಗೂ ಮಂಜುನಾಥ್ ಗೌಡ ನಡುವೆ ಟಿಕೆಟ್‍ಗಾಗಿ ಜಿದ್ದಾಜಿದ್ದಿನ ಸ್ಪರ್ಧೆ.
- ಚಾಮರಾಜನಗರ ಜಿಲ್ಲೆಯಿಂದ krdcl ಅಧ್ಯಕ್ಷ ಎಂ.ರುದ್ರೇಶ್ ಹಾಗೂ ಮಲ್ಲಿಕಾರ್ಜುನಪ್ಪ ಆಕಾಂಕ್ಷಿಗಳು. ಇಬ್ಬರೂ ಬಿಎಸ್ವೈ ಆಪ್ತರು ಅನ್ನೋದು ವಿಶೇಷ.
- ಹನೂರು ಕ್ಷೇತ್ರದಿಂದ ಮಾಜಿ ಸಚಿವ ದಿ.ನಾಗಪ್ಪ ಅವರ ಪುತ್ರ ಪ್ರೀತಮ್ ನಾಗಪ್ಪ ಆಕಾಂಕ್ಷಿಯಾಗಿದ್ದು, ಸೋಮಣ್ಣ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.
- ತುಮಕೂರು: ಹಾಲಿ ಶಾಸಕ ಜ್ಯೋತಿ ಗಣೇಶ್ ತಮಗೆ ಟಿಕೆಟ್ ಗ್ಯಾರಂಟಿ ಎಂಬ ಭರವಸೆಯೊಂದಿಗೆ ಪ್ರಚಾರ ಆರಂಭಿಸುತ್ತಿದ್ದು, ಮಾಜಿ ಸಚಿವ ಸೊಗಡು ಶಿವಣ್ಣ ಇದು ನನ್ನ ಕೊನೆಯ ಚುನಾವಣೆ ಎಂದು ಪ್ರಚಾರ ನಡೆಸುತ್ತಾ ಟಿಕೆಟ್‍ಗಾಗಿ ಲಾಬಿ ನಡೆಸಿದ್ದಾರೆ.
- ದಾವಣಗೆರೆ: ಬಿಜೆಪಿಗೆ ತೀವ್ರ ಮುಜುಗರ ತಂದಿರೋ ಹಾಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಈ ಬಾರಿ ಚನ್ನಗಿರಿಯಿಂದ ಟಿಕೆಟ್ ಕೈತಪ್ಪುವ ಸಾಧ್ಯತೆ ಇದ್ದು, ಅಲ್ಲಿ ಮಾಡಾಳು ಪುತ್ರ ಮಲ್ಲಿಕಾರ್ಜುನ್ ಹಾಗೂ ತುಮ್ಕೋಸ್ ಅಧ್ಯಕ್ಷ ಶಿವಕುಮಾರ್ ನಡುವೆ ಟಿಕೇಟ್ ಗಾಗಿ ಫೈಟ್ ಜೋರಾಗಿದೆ.
- ಮಾಗಡಿಯಿಂದ ಜೇಡರಹಳ್ಳಿ ಕೃಷ್ಣಪ್ಪ ಹಾಗೂ ಪ್ರಸನ್ನ ಗೌಡ , ಕೃಷ್ಣಪ್ಪ ನಡುವೆ ಸ್ಪರ್ಧೆ ಏರ್ಪಟ್ಟಿದೆ.
- ಬೆಳಗಾವಿಯ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಮಹೇಶ್ ಕುಮಟಹಳ್ಳಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕೂಡ ಕಣದಲ್ಲಿದ್ದಾರೆ.
- ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಪ್ರತಾಪ್ ಗೌಡ ಪಾಟೀಲ್‍ಗೆ ಕ್ಷೇತ್ರದಲ್ಲಿ ಸ್ವಪಕ್ಷೀಯರೇ ಮುಳುವಾಗಿದ್ದಾರೆ. ಇದಲ್ಲದೇ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲೂ ಬಿಜೆಪಿ ಪಾಲಿಗೆ ಟಿಕೇಟ್ ಹಂಚಿಕೆ ಕಗ್ಗಂಟಾಗಿದೆ.
ಇದನ್ನೂ ಓದಿ : BJP worker killed: ಬಿಜೆಪಿ ಕಾರ್ಯಕರ್ತನ ಮೇಲೆ ಬಾಂಬ್ ಎಸೆದು ಕೊಲೆ : ಭಯಾನಕ ವೀಡಿಯೊ ವೈರಲ್