Karnataka MLC Election 2024: ವಿಧಾನ ಪರಿಷತ್‌ ಚುನಾವಣೆ : ನೈರುತ್ಯ ಶಿಕ್ಷಕರ ಕ್ಷೇತ್ರ ಎಸ್‌ಎಲ್‌ ಭೋಜೆಗೌಡ ಗೆಲುವು, 11 ಮಂದಿ ಅವಿರೋಧ ಆಯ್ಕೆ

Karnataka MLC Election 2024:ಮೈಸೂರು : ವಿಧಾನ ಪರಿಷತ್‌ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಅಭ್ಯರ್ಥಿ ಎಸ್‌ಎಲ್‌ ಭೋಜೆಗೌಡ (SL Boje Gowda) ಅವರು ಬಾರೀ ಗೆಲುವು ಸಾಧಿಸಿದ್ದಾರೆ

Karnataka MLC Election 2024:ಮೈಸೂರು : ವಿಧಾನ ಪರಿಷತ್‌ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಅಭ್ಯರ್ಥಿ ಎಸ್‌ಎಲ್‌ ಭೋಜೆಗೌಡ (SL Boje Gowda) ಅವರು ಬಾರೀ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರು ಎರಡನೇ ಬಾರಿಗೆ ವಿಧಾನ ಪರಿಷತ್‌ ಪ್ರವೇಶಿಸಿದ್ದಾರೆ.  ಜೆಡಿಎಸ್‌ನ ಎಸ್‌ಎಲ್‌ ಭೋಜೆಗೌಡ ಅವರು, 5,267 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Karnataka MLC Election 2024 JDS SL Bhoje Gowda Wins South-West Teachers Constituency, 11 Elected Unopposed Karnataka Legislative Council
Image Credit to Original Source

ಭೋಜೆಗೌಡ ಅವರು 9,829 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದುಕೊಂಡಿದ್ರೆ, ಕಾಂಗ್ರೆಸ್‌ ಅಭ್ಯರ್ಥಿ ಕೆಕೆ ಮಂಜುನಾಥ್‌ ಕುಮಾರ್‌ (KK Manjunath Kumar) 4563  ಮತಗಳನ್ನು ಪಡೆದುಕೊಂಡಿದ್ದರು. ಶಿಕ್ಷಕರ ಕ್ಷೇತ್ರದಿಂದ ಒಟ್ಟು 19,479 ಮತಗಳು ಚಲಾವಣೆ ಆಗಿದ್ದು, ಇದರಲ್ಲಿ 821 ಮತಗಳು ಅಸಿಂಧುವಾಗಿವೆ.

ಎಸ್‌ಎಲ್‌ ಭೋಜೆಗೌಡ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಈ ಬಾರಿ ಜೆಡಿಎಸ್‌ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಎಸ್‌ಎಲ್‌ ಭೋಜೆಗೌಡ ಅವರು ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ ಪಕ್ಷದಿಂದ ಕಣಕ್ಕೆ ಇಳಿದಿದ್ದರು.

ಇದನ್ನೂ ಓದಿ : ಭಾರತದಲ್ಲಿ 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ : ಎನ್‌ಡಿಎ ಸರಕಾರಕ್ಕೆ ನಿತೀಶ್‌ ಕುಮಾರ್‌, ಚಂದ್ರಬಾಬು ನಾಯ್ಡು ಬೆಂಬಲ

ಇನ್ನು ನೈರುತ್ಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆಯ ಕಾರ್ಯ ಮುಂದುವರಿದಿದ್ದು, ಮೊದಲ ಹಂತದ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಮೊದಲ ಸುತ್ತಿನಲ್ಲಿ ಒಟ್ಟು 18 ಸಾವಿರ ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಇದರಲ್ಲಿ ಒಟ್ಟು 1,093 ಮತಗಳು ತಿರಸ್ಕಾರಗೊಂಡಿವೆ.

Karnataka MLC Election 2024 JDS SL Bhoje Gowda Wins South-West Teachers Constituency, 11 Elected Unopposed Karnataka Legislative Council
Image Credit to Original Source

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಾ.ಧನಂಜಯ ಸುರ್ಜಿ (Dr. Dhanjaya Surji)  ಅವರು ಮುನ್ನಡೆ ಪಡೆದು ಕೊಂಡಿದ್ದಾರೆ. ಧನಂಜಯ ಸುರ್ಜಿ ಅವರು 6,718  ಮತಗಳನ್ನು ಪಡೆದುಕೊಂಡಿದ್ರೆ, ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ರಘುಪತಿ ಭಟ್‌ (K Raghupathi Bhat)  ಅವರು 3,218 ಮತಗಳನ್ನು ಪಡೆದಿದ್ದಾರೆ. ಇನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ  ಆಯನೂರು ಮಂಜುನಾಥ್ ( Ayanooru Manjunath) ಅವರು 2,434 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ‌

ಇದನ್ನೂ ಓದಿ : Noni Juice : ನೋನಿ ಜ್ಯೂಸ್‌ ಕುಡಿಯೋದು ಅಪಾಯಕಾರಿ : ಮಧುಮೇಹ ನಿಯಂತ್ರಣಕ್ಕೆ ಬರೋದು ನಿಜನಾ ?

ವಿಧಾನ ಪರಿಷತ್‌ಗೆ 11 ಮಂದಿ ಅವಿರೋಧ ಆಯ್ಕೆ 

ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯ ಸಿಟಿ ರವಿ (CT Ravi), ಎನ್‌. ರವಿಕುಮಾರ್‌ (N Ravi Kumar), ಮುಳೆ ಮಾರುತಿ ರಾವ್‌, ಕಾಂಗ್ರೆಸ್‌ನ ಬಲ್ಕೀಸ್‌ ಬಾನು, ಡಾ. ಯತೀಂದ್ರ (Yathindra), ಐವನ್‌ ಡಿಸೋಜಾ, ಕೆ. ಗೋವಿಂದ ರಾಜು, ಎನ್‌.ಎಸ್.‌ ಬೋಸರಾಜು, ಜಗದೇವ್‌ ಗುತ್ತೇದಾರ್‌, ಹಾಗೂ ಜೆಡಿಎಸ್‌ ಪಕ್ಷದಿಂದ ಟಿ.ಎನ್.‌ ಜವರಾಯಿ ಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Karnataka MLC Election 2024: JDS SL Bhoje Gowda Wins South-West Teachers Constituency, 11 Elected Unopposed Karnataka Legislative Council

Comments are closed.