Nandini Milk Price Hike : ಬೆಂಗಳೂರು : ಕರ್ನಾಟಕದಲ್ಲಿ KMF ನಂದಿನ ಹಾಲಿನ ಬೆಲೆ ಏರಿಕೆಗೆ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದಲೇ ಕರ್ನಾಟಕದಲ್ಲಿ ಪರಿಷ್ಕೃತ ದರ ಜಾರಿಗೆ ಬರಲಿದೆ. ಹಾಲಿನ ದರ ಏರಿಕೆಯ ಹಿನ್ನೆಲೆಯಲ್ಲಿ ಪ್ರತೀ ಲೀಟರ್ ಹಾಲಿನ ಬೆಲೆಯಲ್ಲಿ 4 ರೂಪಾಯಿ ಏರಿಕೆ ಆಗಲಿದೆ.
ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆ ಮಾಡುವ ಕುರಿತು ಸರಕಾರ ಈ ಹಿಂದೆಯೇ ಮುನ್ಸೂಚನೆಯನ್ನು ನೀಡಿತ್ತು. ವಿಧಾನಸಭಾ ಅಧಿವೇಶನದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಹಾಲಿನ ದರ (Nandini Milk Price Hike ) ಏರಿಕೆಗೆ ಒಪ್ಪಿಗೆ ಸೂಚಿಸಿದೆ. ಹಾಲಿನ ದರ ಏರಿಕೆಯ ನಂತರ ಕರ್ನಾಟಕದಲ್ಲಿ ಹಾಲಿನ ಪರಿಷ್ಕೃತ ದರ ಇಲ್ಲಿದೆ.
Also Read : PhonePe, Paytm, Google Pay: ಏಪ್ರಿಲ್ 1 ರಿಂದ UPI ನಿಯಮದಲ್ಲಿ ಬದಲಾವಣೆ

ಗ್ರೀನ್ ಹಾಲಿನ ಪ್ರಸ್ತುತದರ 52ರೂ. ಇದ್ದು ಪರಿಷ್ಕೃತ ದರ 56 ರೂಪಾಯಿಗೆ ಏರಿಕೆ ಆಗಲಿದೆ. ಇನ್ನು ಗ್ರೀನ್ ಸ್ಪೆಷಲ್ ಹಾಲಿನ ದರ 54 ರೂಪಾಯಿಯಿಂದ 58ಕ್ಕೆ ಏರಿಕೆ ಆಗಲಿದೆ. ಸಮೃದ್ದಿ ಹಾಲಿನ ದರ ಪ್ರತೀ ಲೀಟರ್ ಗೆ 56 ರೂಪಾಯಿ ಇದ್ದು, 60 ರೂಪಾಯಿಗೆ ಏರಿಕೆ ಆಗಲಿದೆ. ಆರೆಂಜ್ ಹಾಲಿನ ದರ 54 ರೂಪಾಯಿ ಇದ್ದು, ಪರಿಷ್ಕೃತ ದರ 58 ರೂಪಾಯಿ ಆಗಲಿರಲಿದೆ. ಇನ್ನು ನೀಲಿ ಪ್ಯಾಕೇಟ್ ಹಾಲಿನ ದರ 44 ರೂಪಾಯಿಯಿಂದ 48 ರೂಪಾಯಿಗೆ ಏರಿಕೆ ಆಗಲಿದೆ.
Also Read : 50 ರೂ. ಹೂಡಿಕೆ ಮಾಡಿ 35 ಲಕ್ಷ ರೂ. ಪಡೆಯಿರಿ : ಅಂಚೆ ಇಲಾಖೆಯ ಗ್ರಾಮ ಸುರಕ್ಷಾ ಯೋಜನೆ
ವಿದ್ಯುತ್ ಶಾಕ್ ಕೊಡಲು ಸಿದ್ದವಾಯ್ತು ಸರಕಾರ ?
ಕರ್ನಾಟಕದಲ್ಲಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ಗ್ರಾಹಕರಿಗೆ ಸರಕಾರ ವಿದ್ಯುತ್ ಶಾಕ್ ಕೊಡಲು ಮುಂದಾಗಿದೆ. ಇಂದು ಸಂಜೆಯೇ ವಿದ್ಯುತ್ ದರ ಏರಿಕೆ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಪ್ರತೀ ಯೂನಿಟ್ ವಿದ್ಯುತ್ ದರದಲ್ಲಿ 36 ಪೈಸೆ ಏರಿಕೆ ಆಗಲಿದೆ.

ವಿದ್ಯುತ್ ದರ ಏರಿಕೆ ಮಾಡುವಂತೆ ಕೋರಿ ಎಸ್ಕಾಂಗಳು ಕೆಇಆರ್‌ಸಿ ಮನವಿ ಮಾಡಿದ್ದವು. ಇಂದು ಹೊಸ ದರ ಘೋಷಣೆ ಆದ್ರೂ ಕೂಡ ಎಪ್ರೀಲ್ 1 ರಿಂದಲೇ ಪರಿಷ್ಕೃತ ದರ ಜಾರಿಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
Karnataka Nandini Milk Price Hike 4 rs per liter and Electricity price hike Kannada News