ಬೆಂಗಳೂರು : ರಾಜ್ಯದಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವ ಸರಕಾರಿ ನೌಕರರಿಗೆ ಆಹಾರ ಇಲಾಖೆ ಬಿಗ್ ಶಾಕ್ ಕೊಟ್ಟಿದೆ. ಅನರ್ಹ ಬಿಪಿಎಲ್ ಕಾರ್ಡ್‌ದಾರರನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿದೆ. ಒಂದೊಮ್ಮೆ ಅನರ್ಹ ಬಿಪಿಎಲ್ ಕಾರ್ಡ್ ಹಿಂದಿರುಗಿಸದೇ ಇದ್ರೆ ಭಾರೀ ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನು ನೀಡಿದ.ೆ
ಈಗಾಗಲೇ ಆಧಾರ್ ಜೊತೆಗೆ ಬಿಪಿಎಲ್ ಕಾರ್ಡ್‌ಗಳನ್ನು ಲಿಂಕ್ ಮಾಡಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸೂಚನೆಯನ್ನು ನೀಡಿದ್ದು, ಪಡಿತರ ಕಾರ್ಡ್ ಜೊತೆ ಆಧಾರ್ ಲಿಂಕ್ ಕಾರ್ಯ ರಾಜ್ಯದಾದ್ಯಂತ ನಡೆಯುತ್ತಿದೆ. ಈ ಕಾರ್ಯ ಮುಗಿದ ನಂತರದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ಪಟ್ಟಿ ಸಿದ್ದವಾಗಲಿದೆ.
ಒಂದೊಮ್ಮೆ ಸರ್ಕಾರಿ ಅನರ್ಹರರು ಬಿಪಿಎಲ್ ಕಾರ್ಡ್ ಹೊಂದಿದಿದ್ದರೆ ಅಂತವರ ವಿರುದ್ದ ಕಠಿಣ ಕ್ರಮ ಜರುಗಿಸಲು ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಬಿಪಿಎಲ್ ಕಾರ್ಡ್ ನಿಂದ ಎಷ್ಟು ವರ್ಷಗಳಿಂದ ರೇಷನ್ ಪಡೆದಿದ್ದಾರೋ ಅಷ್ಟೂ ವರ್ಷಗಳ ಆಹಾರ ಸಾಮಾಗ್ರಿಯ ಮೌಲ್ಯದ ದಂಡ ಕಟ್ಟಬೇಕಾಗುತ್ತದೆ. ಅಲ್ಲದೇ ಅನರ್ಹ ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಬದಲಾವಣೆಯಾಗಲಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : FREE PAN Card : 10 ನಿಮಿಷದಲ್ಲಿ ಉಚಿತವಾಗಿ ಸಿಗುತ್ತೆ ಪಾನ್‌ಕಾರ್ಡ್ : ದಾಖಲೆ ಇಲ್ಲದೇ ಪಾನ್ ಪಡೆಯೋದು ಹೇಗೆ ಗೊತ್ತಾ ?
ಇದನ್ನೂ ಓದಿ : ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಕಾರ್ಖಾನೆ ವಿಭಿನ್ನ ಸಾಧನೆ: ಸಂಪೂರ್ಣ ವ್ಯವಸ್ಥೆ ಮಹಿಳಾಮಯ
(Karnataka If government employees have BPL cards, they will be fined )