ಮಂಗಳವಾರ, ಏಪ್ರಿಲ್ 29, 2025
HomekarnatakaKarnataka CET Result: ಸಿಇಟಿ ಫಲಿತಾಂಶ ಪ್ರಕಟ: 5 ವಿಭಾಗದಲ್ಲಿ ರ್ಯಾಂಕ್ ಪಡೆದ ಮೈಸೂರಿನ ವಿದ್ಯಾರ್ಥಿನಿ...

Karnataka CET Result: ಸಿಇಟಿ ಫಲಿತಾಂಶ ಪ್ರಕಟ: 5 ವಿಭಾಗದಲ್ಲಿ ರ್ಯಾಂಕ್ ಪಡೆದ ಮೈಸೂರಿನ ವಿದ್ಯಾರ್ಥಿನಿ ಮೇಘನ್ ಎಚ್.ಕೆ.

- Advertisement -

ರಾಜ್ಯದ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶಕ್ಕಾಗಿ ರಾಜ್ಯದಲ್ಲಿ 2020 -21 ನೇ ಸಾಲಿನ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫಲಿತಾಂಶ ಪ್ರಕಟಿಸಿದ್ದಾರೆ.

ಇದೇ ಅಗಸ್ಟ್ 28,29 ಹಾಗೂ 30 ರಂದು ನಡೆದಿದ್ದ ಸಿಇಟಿ ಪರೀಕ್ಷೆಗೆ  ಲಕ್ಷಾಂತರ ವಿದ್ಯಾರ್ಥಿಗಳು ಹಾಜರಾಗಿದ್ದು, ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಪರೀಕ್ಷೆ ಎದುರಿಸಿದ್ದರು.

ಮೈಸೂರಿನ ಪ್ರಮಥಿ ಹಿಲ್ ವೀವ್ ಅಕಾಡೆಮಿಯ ವಿದ್ಯಾರ್ಥಿನಿ ಮೇಘನ್ ಎಚ್.ಕೆ. ಇಂಜೀನಿಯರಿಂಗ್ ಸೇರಿದಂತೆ ಎಲ್ಲ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ. ಬಿ ಫಾರ್ಮಾ, ಕೃಷಿ,ವಿಜ್ಞಾನ,ಪಶುವೈದ್ಯಕೀಯ,ನ್ಯಾಚೋರಪತಿ,ಯೋಗ ವಿಭಾಗದಲ್ಲೂ ಮೇಘನ್ ಎಚ್.ಕೆ. ರ್ಯಾಂಕ್ ಪಡೆದಿದ್ದಾರೆ.

ವಿದ್ಯಾರ್ಥಿಗಳು ರಿಸಲ್ಟ್ ನೋಡುವುದಕ್ಕಾಗಿ kea.kar.nic.in ಭೇಟಿ ನೀಡಬಹುದಾಗಿದ್ದು, KCET result 2021 ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟರ್ ನಂಬರ್ ಹಾಕಿ ಸಬ್ ಮಿಟ್ ಬಟನ್ ಪ್ರೆಸ್ ಮಾಡಿದರೇ ಸ್ಕ್ರಿನ್ ಮೇಲೆ ಫಲಿತಾಂಶ ಕಾಣಿಸಲಿದೆ. ಬಳಿಕ ಫಲಿತಾಂಶವನ್ನು ಡೌನ್ ಲೋಡ್ ಹಾಗೂ ಸೇವ್ ಮಾಡಿಕೊಳ್ಳಬಹುದಾಗಿದೆ.

(karnataka common entrance test cet results 2021 announced)

RELATED ARTICLES

Most Popular