ಮೈಸೂರು : ನಿಜಕ್ಕೂ ಇದು ಅಪರೂಪದಲ್ಲೇ ಅಪರೂಪದ ಕೃತಿ. ಇಂತಹದ್ದೊಂದು ಸ್ಟೋರಿ ಪುಸ್ತಕ ರೂಪವನ್ನು ತಾಳುತ್ತೆ ಅಂತಾ ಕಲ್ಪನೆ ಮಾಡಿಕೊಳ್ಳುವುದೇ ಕಷ್ಟ. ದುಬಾರೆ ಆನೆ ಶಿಬಿರದಲ್ಲಿರೋ ಕುಶಾ ಆನೆಯ ಪ್ರೇಮ ಕಹಾನಿಯನ್ನು ಪುಸ್ತಕ ರೂಪದಲ್ಲಿ ತರುವ ಪ್ರಯತ್ನ ಮಾಡಿದ್ದಾರೆ ಖ್ಯಾತ ಹಿರಿಯ ಪತ್ರಕರ್ತರ ರಮೇಶ್ ಉತ್ತಪ್ಪ.
ವಿಜಯ ಕರ್ನಾಟಕ ಪತ್ರಿಕೆಯ ಮೈಸೂರಿನ ಮುಖ್ಯ ವರದಿಗಾರರಾಗಿರುವ ಐತಿಚಂಡ ರಮೇಶ್ ಉತ್ತಪ್ಪ ಅವರು ಆನೆಗಳ ಕುರಿತು ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. `ಕುಶಾ ಕೀ ಕಹಾನಿ- A True Love Story’ ಅನ್ನೋ ಕೃತಿಗಳು ಅಕ್ಟೋಬರ್ ಮೊದಲ ವಾರ ನಡೆಯಲಿರುವ ವನ್ಯಜೀವಿ ಸಪ್ತಾಹದಲ್ಲಿ ಲೋಕಾರ್ಪಣೆಯಾಗಲಿದೆ.
ಈ ಕೃತಿಗಳಲ್ಲಿ ಪ್ರಮುಖ ಆಕರ್ಷಣೆಯಾಗಿರೋದು ಕುಶಾ ಕೀ ಕಹಾನಿ – A True Love Story. ಹೌದುಮ ದುಬಾರೆ ಆನೆ ಶಿಬಿರದ ಸದಸ್ಯನಾಗಿದ್ದ ಕುಶಾ ಆನೆಯ ಲವ್ ಸ್ಟೋರಿಯನ್ನು ಆಧಾರಿಸಿ ಪತ್ರಕರ್ತ ರಮೇಶ್ ಉತ್ತಪ್ಪ ಅವರು ಕೃತಿಯನ್ನು ರಚಿಸಿದ್ದಾರೆ. ಪ್ರೇಮಕವಿ ಎಂದೇ ಖ್ಯಾತರಾಗಿರುವ ಸಿನಿಮಾ ಸಾಹಿತಿ ಹಾಗೂ ಖ್ಯಾತ ನಿರ್ದೇಶಕ ಕವಿರಾಜ್ ಆಕರ್ಷಕ ಮುನ್ನುಡಿ ಬರೆದಿದ್ದಾರೆ. ಇಂತಹ ಕೃತಿಯೊಂದು ಬರಬಹುದು ಎಂದು ನಿರೀಕ್ಷಿಸಿರಲಿಲ್ಲ. ಪ್ರಾಣಿಗಳು ಕೂಡ ಪ್ರೀತಿಸುತ್ತವೆ, ಅವುಗಳಿಗೆ ಮನಸ್ಸಿದೆ ಎನ್ನುವುದನ್ನು ಕೃತಿಯಲ್ಲಿ ಆಕರ್ಷಕವಾಗಿ ಚಿತ್ರಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿರುವ ಅವರು ಕೃತಿಯನ್ನು ಬಹುವಾಗಿ ಮೆಚ್ಚಿದ್ದಾರೆ. `ಇದೊಂದು ಥೇಟ್ ಸಿನಿಮಾ ಕಥೆಯಾಗಬಹುದು’ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನೋದ ಕುಮಾರ್ ನಾಯಕ್ ಕೃತಿಯನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಪ್ರಾಣಿ ವಿಜ್ಞಾನದ ಕೌತುಕʼ. ಇದೊಂದು ಅಪರೂಪದ ಕೃತಿ. ನನ್ನ ಮನಸ್ಸುನ್ನು ಕಲಕಿದೆ. ಓದಿ ಕಣ್ಣೀರು ಬಂತು. ಇದು ಪುಸ್ತಕ ಲೋಕದಲ್ಲಿ ಹೊಸ ದಾಖಲೆ ಸೃಷ್ಟಿಸಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಕುಶಾ ಕೀ ಕಹಾನಿ – A True Love Story ಬಿಡುಗಡೆಗೂ ಮುನ್ನ ಕೃತಿಯನ್ನು ಓದಿದವರು ಅಚ್ಚರಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಾಣಿಪ್ರಿಯರಲ್ಲಿ ತೀವ್ರ ಆಸಕ್ತಿ ಕೆರಳಿಸಿದೆ.
ಕುಶಾ ಕೀ ಕಹಾನಿ- ಏನಿದು ಲವ್ ಸ್ಟೋರಿ ?
ಇದೊಂದು ಮನ ಮಿಡಿಯುವ ಪ್ರೇಮ ಕಥೆ. ದುಬಾರೆ ಆನೆ ಶಿಬಿರದ ಸದಸ್ಯ ಕುಶ ಕಾಡಿನಲ್ಲಿ ಸಂಗಾತಿಯನ್ನು ಹುಡುಕಿಕೊಳ್ಳುತ್ತಾನೆ. ನಂತರ ಕದ್ದುಮುಚ್ಚಿ ಪ್ರೇಮ ಸಲ್ಲಾಪ ನಡೆಯುತ್ತದೆ. ನಂತರ ಅವರಿಬ್ಬರು ಓಡಿ ಹೋಗುತ್ತಾರೆ. ಅವರದ್ದೇ ಪ್ರತ್ಯೇಕ ಲೋಕ. ಸುಂದರ ಬದುಕು. ಆದರೆ, ಅಷ್ಟರಲ್ಲಿ ವಿಲನ್ ಎಂಟ್ರಿಯಾಗತ್ತಾನಾ..? ಅವರ ಪ್ರೇಮದ ಸಂಕೇತದ ಕುಡಿ ಮೊಳಕೆಯೊಡೆಯುತ್ತದಾ..? ಆತನ ಪ್ರೇಮ ದಡ ಸೇರುತ್ತದಾ, ಕೊನೆಗೆ ಅವರಿಬ್ಬರೂ ಒಂದಾಗಿಯೇ ಇರುತ್ತಾರಾ…? ಪ್ರೀತಿಗೆ ಜಯವಾಯಿತೇ ಅಥವಾ ಸೋತು ಹೋಗಿತೇ..? ಇದು ಕಥೆಯ ಕ್ಲೈ ಮ್ಯಾಕ್ಸ್. ಇದು ಕಲ್ಪನೆಯ ಕಥೆಯಲ್ಲ. ಬದಲಾಗಿ ಕುಶನ ಬದುಕಿನಲ್ಲಿ ನಡೆದ A True Love Story’. ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಕೃತಿಯನ್ನು ಪ್ರಕಟಿಸುತ್ತಿದೆ. ಈ ಕೃತಿ ಮುಂದಿನ ವಾರ ನಿಮ್ಮ ಕೈ ಸೇರಲಿದೆ. ಪುಸ್ತಕವನ್ನು ಖರೀದಿ ಮಾಡುವವರು ( ಮೊಬೈಲ್ ಸಂಖ್ಯೆ: 9483049005) ಐತಿಚಂಡ ರಮೇಶ್ ಉತ್ತಪ್ಪ ಅವರನ್ನು ಸಂಪರ್ಕಿಸಬಹುದಾಗಿದೆ.
(Written by senior journalist Aitichunda Ramesh Uttappa, Kusha Ki Kahani – A True Love Story will be released next week )