ಮೈಸೂರು : ನಗರದ ವಾಣಿಜ್ಯ ತೆರಿಗೆ ಇಆಖೆಯ ಜಂಟಿ ಆಯುಕ್ತರ ಕಚೇರಿಗೆ ಹುಸಿ ಬಾಂಬ್ ಕರೆ ಬಂದಿದ್ದು, ಮಾಹಿತಿಯನ್ನು ಆಧರಿಸಿ ಬಾಂಬ್ ನಿಷ್ಕ್ರೀಯ ದಳದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಾತ್ರವಲ್ಲ ಕೆಲ ಕಾಲ ಆತಂಕ ಸ್ಥಿತಿ ನಿರ್ಮಾಣವಾಗಿತ್ತು.
ಇಂದು ಬೆಳಿಗ್ಗೆ 11.30ರ ಸುಮಾರಿಗೆ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯಲ್ಲಿ ಸಭೆಯೊಂದು ನಡೆಯುತ್ತಿತ್ತು. ಈ ವೇಳೆಯಲ್ಲಿ ಕಚೇರಿಗೆ ಬಂದ ಪೊಲೀಸರು ಕಚೇರಿಯಲ್ಲಿ ಬಾಂಬ್ ಇರಿಸಿರುವ ಕುರಿತು ಮಸೇಜ್ ಬಂದಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ವಿಳಾಸವನ್ನು ಖಚಿತ ಪಡಿಸಿಕೊಂಡು ಬಾಂಬ್ ನಿಷ್ಕ್ರೀಯ ದಳದ ಅಧಿಕಾರಿಗಳನ್ನು ಕರೆಯಿಸಿ ತಪಾಸಣೆ ನಡೆಸಿದ್ದಾರೆ.
ಹುಸಿ ಬಾಂಬ್ ಮೆಸೇಜ್ ಕೆಲ ಕಾಲ ಆತಂಕವನ್ನು ಸೃಷ್ಟಿಸಿತ್ತು. ಇನ್ನು ಪೊಲೀಸರು ಬರುವ ಹೊತ್ತಲ್ಲಿ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದು, ಸುಮಾರು 80ಕ್ಕೂ ಅಧಿಕ ಮಂದಿ ಕಚೇರಿಯಲ್ಲಿದ್ದರು. ಪೊಲೀಸರು ಮಾಹಿತಿ ತಿಳಿಸುತ್ತಲೇ ಎಲ್ಲರೂ ಹೊರಗೆ ಬಂದಿದ್ದೇವೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಮಂಜುನಾಥ್ ತಿಳಿಸಿದ್ದಾರೆ.
ಕಚೇರಿಯ ತುಂಬೆಲ್ಲಾ ಹುಡುಕಾಟ ನಡೆಸಿದ್ರೂ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಮಸೇಜ್ ಅನ್ನೋದು ಪೊಲೀಸರಿಗೆ ಖಚಿತವಾಗಿತ್ತು.
ಇದನ್ನೂ ಓದಿ : ಗೀತ ಗೋವಿಂದಂ ಸ್ಟೈಲ್‌ನಲ್ಲಿ ಬಸ್ಸಿನಲ್ಲಿ ಕಿಸ್ : ಬಳ್ಳಾರಿ ಮೂಲದ ಇಂಜಿನಿಯರ್ ಅರೆಸ್ಟ್
ಇದನ್ನೂ ಓದಿ : ಹೈಟೆಕ್ ವೇಶ್ಯಾವಾಟಿಕೆ ಜಾಲ ಬಯಲು : ಸುರಂಗದಲ್ಲಿ ಅವಿತಿದ್ದರು ಸುಂದರಿಯರು
(Mysore : fake Bomb Threaten commercial tax office )