ಬೆಂಗಳೂರು : ನಾಡಹಬ್ಬ ದಸರಾಕ್ಕಾಗಿ ಕರುನಾಡು ಸಿದ್ದವಾಗುತ್ತಿದೆ. ಅರಮನೆ ನಗರಿ ಮೈಸೂರಲ್ಲಿ ದಸರಾಕ್ಕಾಗಿ ಸಿದ್ದತೆಗಳು ಜೋರಾಗಿವೆ. ಈ ನಡುವಲ್ಲೇ ಕರ್ನಾಟಕ ಸರಕಾರ ದಸರಾ ರಜೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ದಸರಾ ರಜೆಯ ಅವಧಿಯಲ್ಲಿ ಬದಲಾವಣೆಯನ್ನು ಮಾಡಿದೆ. ಕರ್ನಾಟಕದಲ್ಲಿ ದಸರಾ ರಜೆ ಯಾವ ದಿನಾಂಕದಿಂದ ಆರಂಭಗೊಂಡು ಎಲ್ಲಿಯ ವರೆಗೆ ಇರಲಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

2024-25ನೇ ಶೈಕ್ಷಣಿಕ ಸಾಲಿನ ಕರ್ನಾಟಕ ರಾಜ್ಯದ ಖಾಸಗಿ, ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಲಾಗಿದೆ. ರಾಜ್ಯದ ಎಲ್ಲಾ ಶಾಲೆಗಳಿಗೂ ಏಕರೂಪದ ಮಾರ್ಗಸೂಚಿ ಪ್ರಕಟವಾಗಿದೆ.
ಇದನ್ನೂ ಓದಿ : ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬು : ವೈರಲ್ ಆಯ್ತು ಲ್ಯಾಬ್ ರಿಪೋರ್ಟ್
ಕಳೆದ ವರ್ಷಗಳಲ್ಲಿ ಕರ್ನಾಟಕದ ಕರಾವಳಿ ಭಾಗಕ್ಕೆ ನೀಡುವ ರಜೆಯಲ್ಲಿ ಮಾರ್ಪಾಡು ಮಾಡಲಾಗುತ್ತಿತ್ತು. ಕಳೆದ ಬಾರಿ ಬೆಂಗಳೂರು, ಮೈಸೂರು, ಮಂಗಳೂರಿನ ಶಾಲೆಗಳಿಗೆ ರಜೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಆದರೆ ಈ ಬಾರಿ ಯಾವುದೇ ಮಾರ್ಪಾಡು ಮಾಡಿಲ್ಲ. ಹೀಗಾಗಿ ರಾಜ್ಯದಾದ್ಯಂತ ಏಕರೂಪದ ದಸರಾ ರಜೆ ಮಾರ್ಗಸೂಚಿ ಪ್ರಕಟಿಸಲಾಗಿದೆ.
ದಸರಾ ರಜೆಯು ಈ ಬಾರಿ ಅಕ್ಟೋಬರ್ 3 ರಿಂದ ಆರಂಭಗೊಂಡು 20ರ ವರೆಗೆ ಇರಲಿದೆ. ಒಟ್ಟು 17 ದಿನಗಳ ಕಾಲ ದಸರಾ ರಜೆ ಲಭ್ಯವಾಗಲಿದೆ. ರಾಜ್ಯದಾದ್ಯಂತ ಅಕ್ಟೋಬರ್ 21ರಿಂದ 2ನೇ ಅವಧಿಯ ಶೈಕ್ಷಣಿಕ ಚಟುವಟಿಕೆಯು ಆರಂಭಗೊಳ್ಳಲಿದೆ. ಎರಡನೇ ಅವಧಿಯ ಶೈಕ್ಷಣಿಕ ವರ್ಷವು 2025ರ ಏಪ್ರಿಲ್ 10 ರ ತನಕ ನಡೆಯಲಿದೆ.
ಇದನ್ನೂ ಓದಿ : ಬಸ್ ಚಲಾಯಿಸುವ ವೇಳೆ ಚಾಲಕನಿಗೆ ಹೃದಯಾಘಾತ ..! ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು 45 ಪ್ರಯಾಣಿಕರ ಜೀವ

ದಸರಾ ರಜೆಯ ಹಿನ್ನೆಲೆಯಲ್ಲಿ ಈ ಬಾರಿ ಕೇವಲ 11 ದಿನಗಳ ಪಠ್ಯ ಚಟುವಟಿಕೆಗಳು ನಡೆಯಲಿದೆ. ಇನ್ನು ಕ್ರೈಸ್ತ ಆಡಳಿತ ಮಂಡಳಿಯ ಶಾಲೆಗಳು ಕ್ರಿಸ್ಮಸ್ ರಜೆಯನ್ನು ನೀಡುವ ಹಿನ್ನೆಲೆಯಲ್ಲಿ ದಸರಾ ರಜೆಯಲ್ಲಿ ಕಡಿತ ಮಾಡಲಾಗುತ್ತಿದೆ. ದಸರಾ ರಜೆಯಲ್ಲಿ ಕಡಿತವಾಗಿರುವ ರಜೆಯನ್ನು ಡಿಸೆಂಬರ್ ತಿಂಗಳಲ್ಲಿ ನೀಡಲಾಗುತ್ತಿದೆ.
ಕರ್ನಾಟಕದಲ್ಲಿ 2024ರ ಶೈಕ್ಷಣಿಕ ಚಟುವಟಿಕೆ ಮೇ 29 ರಿಂದ ಆರಂಭವಾಗಲಿದೆ. ಮೊದಲ ಅವಧಿಯು ಅಕ್ಟೋಬರ್ 2ರ ತನಕ ಇರಲಿದೆ. ಸಪ್ಟೆಂಬರ್ 23ರಿಂದ ಮಧ್ಯ ವಾರ್ಷಿಕ ಪರೀಕ್ಷೆಗಳು ಆರಂಭಗೊಂಡಿದೆ. ಗಾಂಧಿ ಜಯಂತಿಯ ಮರು ದಿನದಿಂದಲೇ ಶಾಲೆಗಳಿಗೆ ಬೇಸಿಗೆ ರಜೆಯನ್ನು ನೀಲಾಗುತ್ತಿದೆ.
Karnataka School Dasara Holiday New Guidlines Announced