ಸೋಮವಾರ, ಏಪ್ರಿಲ್ 28, 2025
HomekarnatakaNalapad Sri Krishna : ನಾವಿಬ್ಬರೂ ಒಂದು ಕೇಸ್ ನಲ್ಲಿದ್ದೇವೆ: ನನಗೆ ಶ್ರೀಕಿ ಪರಿಚಯವಿದೆ...

Nalapad Sri Krishna : ನಾವಿಬ್ಬರೂ ಒಂದು ಕೇಸ್ ನಲ್ಲಿದ್ದೇವೆ: ನನಗೆ ಶ್ರೀಕಿ ಪರಿಚಯವಿದೆ – ಮೊಹಮ್ಮದ್‌ ನಲಪಾಡ್

- Advertisement -

ಬೆಂಗಳೂರು : ರಾಜ್ಯದಲ್ಲಿ ಬಿಟ್ ಕಾಯಿನ್ (Bitcoin) ಗಲಾಟೆ ಕಾವೇರಿಸಿಕೊಳ್ಳುತ್ತಿದೆ. ಕಾಂಗ್ರೆಸ್, ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವಾಗಲೇ ಕೈ (congress) ಯುವ ನಾಯಕ ಶ್ರೀಕಿ (Sri Krishna) ಜೊತೆ ನನಗೆ ಸ್ನೇಹವಿದೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಮೂರು ವರ್ಷಗಳ ಹಿಂದೆ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹಲ್ಲೆ ಪ್ರಕರಣದ ಆರೋಪಿ ಸ್ಥಾನದಲ್ಲಿರೋ (Nalapad Sri Krishna) ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ (Nalapad) ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ತಮ್ಮ ಹೇಳಿಕೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಹೆಸರನ್ನು ಉಲ್ಲೇಖಿಸಿದ್ದಾರೆ. ಶ್ರೀಕಿ ಈ ಹೇಳಿಕೆ ಸಂಚಲನಕ್ಕೆ ಕಾರಣವಾಗಿತ್ತು. ಈಗಾಗಲೇ ಬಿಜೆಪಿ ನಾಯಕರಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಕಾಂಗ್ರೆಸ್ಸಿಗರಿದ್ದಾರೆ ಎಂದು ಬಿಜೆಪಿ ಆರೋಪ ಮಾಡುತ್ತಲೇ ಇದೆ. ಹೀಗಿರುವಾಗಲೇ ನನಗೂ ಶ್ರೀಕಿಗೂ ಸ್ನೇಹವಿತ್ತು ಎಂದು ಸ್ವತಃ ಮೊಹಮ್ಮದ್ ನಲಪಾಡ್ ಹೇಳಿಕೊಂಡಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡುತ್ತ ನಲಪಾಡ್, ನನಗೆ ಶ್ರೀಕಿ ಪರಿಚಯವಿದೆ. ನನ್ನ ತಮ್ಮನ ಸ್ನೇಹಿತ ಮನೀಶ್ ಮೂಲಕ ನನಗೆ ಶ್ರೀಕಿ ಪರಿಚಯವಾಯಿತು.

ಆದರೆ ಫರ್ಜಿ ಕೆಫೆ ಘಟನೆ ಬಳಿಕ‌ ನನಗೂ ಶ್ರೀಕಿಗೂ ಸಂಬಂಧವಿಲ್ಲ. ಆ ಘಟನೆಯ ಕೇಸ್ ನಲ್ಲಿ ನಾವಿಬ್ಬರೂ ಇದ್ದೇವೆ ಎಂಬುದನ್ನು ಬಿಟ್ಟರೇ ಈಗ ನಮ್ಮನಡುವೆ ಯಾವುದೇ ಸಂಬಂಧವಿಲ್ಲ. ನಾವು ಯಾವತ್ತೂ ಬಿಟ್ ಕಾಯಿನ್ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ನಲಪಾಡ್ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ ಶ್ರೀಕಿ ಇದನ್ನೇ ತನ್ನ ಹೇಳಿಕೆಯಲ್ಲಿ ಹೇಳಿದ್ದಾನೆ. ಆದರೆ ಈ ವಿಚಾರವನ್ನು ಈಗ ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.‌ನಾನು ಎಂ ಎಲ್ ಎ ಮಗ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದು ನಲಪಾಡ್ ಆರೋಪಿಸಿದ್ದಾರೆ.

2018 ರಲ್ಲಿ ನಾನು ಒಂದು ತಪ್ಪು ಮಾಡಿದೆ. ಅದಕ್ಕಾಗಿ ನಾನು ಶಿಕ್ಷೆಯನ್ನು ಅನುಭವಿಸಿದ್ದೇನೆ.ಆದರೂ ಎಲ್ಲದರಲ್ಲೂ ನನ್ನನ್ನು ಸಿಲುಕಿಸಲಾಗುತ್ತದೆ. ನನ್ನ ತಂದೆಗೆ ನನ್ನಿಂದ ಮುಜುಗರ. ನಾನು ಮಗನಾಗಿರೋದೆ ಕಪ್ಪು ಚುಕ್ಕೆ ಯಾಗಿದೆ ಎಂದು ನಲಪಾಡ್ ನೋವಿನಿಂದ ಹೇಳಿದ್ದಾರೆ. ಒಟ್ಟಿನಲ್ಲಿ ದಿನ‌ದಿನದಿಂದ ದಿನಕ್ಕೆ ಬಿಟ್ ಕಾಯಿನ ಬಡಿದಾಟ ಜೋರಾಗುತ್ತಿದ್ದು ಕಾಂಗ್ರೆಸ್ ಯುವಾಯಕನ ಕೊರಳಿಗೆ ಉರುಳಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : BITCOIN CASE : ಬಿಟ್‌ ಕಾಯಿನ್‌ ಹಗರಣ : ಬೆಂಗಳೂರು ಪೊಲೀಸ್‌ ಆಯುಕ್ತರ ಸ್ಪಷ್ಟನೆ : ಅಷ್ಟಕ್ಕೂ ಯಾರು ಈ ಶ್ರೀಕಿ

ಇದನ್ನೂ ಓದಿ : Bitcoin Case : ಕುತೂಹಲ ಹೆಚ್ಚಿಸಿದೆ ಬಿಟ್‌ ಕಾಯಿನ್‌ ಪ್ರಕರಣ : ಅಷ್ಟಕ್ಕೂ ಆರೋಪಿಗಳು ಕೊಟ್ಟ ಹೇಳಿಕೆಯಲ್ಲೇನಿದೆ

( We are both in a case, I know Bitcoin Sri krishna Congress Leader Mohammed Nalapad )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular