ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಸಾವಿರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಮಾತ್ರವಲ್ಲ ಓಮಿಕ್ರಾನ್ ಪ್ರಕರಣಗಳು ಐದುನೂರರ ಗಡಿಯಲ್ಲಿದೆ. ಈ ಮಧ್ಯೆ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದ್ದು, ಜನರ ಆಕ್ರೋಶಕ್ಕೆ ತುತ್ತಾಗಿತ್ತು. ರಾಜಕೀಯ ನಾಯಕರಿಗೆ ಇಲ್ಲದ ರೂಲ್ಸ್ ಜನಸಾಮಾನ್ಯರಿಗೆ ಮಾತ್ರ ಯಾಕೆ ಎಂದು ಜನ ಪ್ರಶ್ನಿಸುತ್ತಿರುವಾಗಲೇ ಸರ್ಕಾರ ಮತ್ತೆ ರೆಸಾರ್ಟ್ ಗಳ ವಿಚಾರದಲ್ಲಿ ನಿಯಮ ಸಡಿಲಿಸಿ (Curfew Relaxation) ಮತ್ತೆ ನಗೆಪಾಟೀಲಿಗೀಡಾದಿದೆ.
ವೀಕೆಂಡ್ ಕರ್ಪ್ಯೂ ಹೆಸರಲ್ಲಿ ರಾಜ್ಯ ಸರ್ಕಾರ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಓಡಾಟ ಸೇರಿದಂತೆ ಎಲ್ಲವನ್ನು ನಿರ್ಬಂಧಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಇನ್ನೇನು ನೈಟ್ ಕರ್ಪ್ಯೂ ಜಾರಿಗೆ ಗಂಟೆಗಳು ಬಾಕಿ ಇರುವಾಗಲೇ ಆದೇಶವನ್ನು ಸರ್ಕಾರ ಮಾರ್ಪಡಿಸಿದೆ. ಕೊವೀಡ್ ಕಠಿಣ ನಿರ್ಬಂಧ ಗಳಲ್ಲಿ ಸಡಿಲಿಕೆ ಮಾಡಿರುವ ಸರ್ಕಾರ, ಪ್ರವಾಸಿ ತಾಣಗಳಲ್ಲಿ ಬುಕ್ ಮಾಡಿದವರಿಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.
ಮಾತ್ರವಲ್ಲ ವೀಕೆಂಡ್ ಕರ್ಫ್ಯೂ ನಲ್ಲಿ ಬುಕ್ ಮಾಡಿದ ಪ್ರವಾಸಿಗರು,ವಾರಾಂತ್ಯದ ಬುಕ್ಕಿಂಗ್ ದಾಖಲೆ ತೋರಿಸಿ ಓಡಾಡಲು ಅವಕಾಶ ಕಲ್ಪಿಸುವುದಾಗಿ ಘೋಷಿಸಿದೆ. ರೆಸಾರ್ಟ್ ನಲ್ಲಿ ಬುಕ್ಕಿಂಗ್ ಮಾಡಿದವರು ಕಾರು, ಟ್ಯಾಕ್ಸಿ ಹಾಗೂ ಇತರೆ ವಾಹನಗಳಲ್ಲಿ ಓಡಾಡಲು ಅವಕಾಶ ನೀಡಲಾಗಿದೆ. ಹೋಟೆಲ್, ರೆಸಾರ್ಟ್ ಗಳಲ್ಲಿ ತಂಗಿರುವ ಅತಿಥಿಗಳಿಗೆ ಯಾವುದೇ ನಿರ್ಬಂಧವಿಲ್ಲ. ಮಾತ್ರವಲ್ಲಹೋಟೆಲ್ ನಲ್ಲಿ ತಂಗುವ ಅತಿಥಿಗಳಿಗೆ ಎಲ್ಲಾ ಸೌಲಭ್ಯ ಒದಗಿಸಲು ಅನುಮತಿಯನ್ನು ನೀಡಲಾಗಿದೆ.
ಅಲ್ಲದೇ ಬುಕ್ಕಿಂಗ್ ಮಾಡಿರುವ ಅತಿಥಿಗಳು ಚೆಕ್ ಇನ್, ಚೆಕ್ ಔಟ್ ಮಾಡಲು ಅವಕಾಶವಿದ್ದು, ಕೊವೀಡ್ ಮಾರ್ಗಸೂಚಿ ಅನ್ವಯ ಸಫಾರಿಗಳಿಗೂ ಅವಕಾಶವಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದು ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿಗೆ ಸರ್ಕಾರ ಸ್ಪಂದಿಸಲು ಕೈಗೊಂಡ ತೀರ್ಮಾನ ಎನ್ನಲಾಗುತ್ತಿದ್ದು, ಡಿಕೆಶಿ ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ರೆಸಾರ್ಟ್ ಹಾಗೂ ಹೊಟೇಲ್, ರೆಸ್ಟೋರೆಂಟ್ ಬುಕ್ಕಿಂಗ್ ಮೇಲಿನ ನಿರ್ಬಂಧವನ್ನು ತೆರವುಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.

ಮೇಕೆದಾಟು ಪಾದಯಾತ್ರೆ ಯಲ್ಲಿ ಪಾಲ್ಗೊಳ್ಳುವ ನಾಯಕರಿಗಾಗಿ ಡಿಕೆಶಿ, ಕನಕಪುರದ ಸಂಗಮ ಅರಣ್ಯದಲ್ಲಿ ರೆಸಾರ್ಟ್ ಹೋಟೆಲ್ ಬುಕ್ ಮಾಡಿದ್ದರು. ಆದರೆ ವೀಕೆಂಡ್ ಕರ್ಪ್ಯೂ ದಿಂದ ಅವುಗಳಿಗೆ ರಾಮನಗರ ಡಿಸಿ ನಿರ್ಬಂಧ ಹೇರಿದ್ದರು. ಹೀಗಾಗಿ ನಿನ್ನೆ ಸಿಎಂ ಬೊಮ್ಮಾಯಿಗೆ ಪತ್ರ ಬರೆದು ಮನವಿ ಮಾಡಿದ್ದ ಡಿಕೆಶಿಗೆ ಬೊಮ್ಮಾಯಿ ಸ್ಪಂದಿಸಿದ್ದು ಆದೇಶದಲ್ಲಿ ಸಡಿಲಿಕೆಮಾಡಿದೆ. ಹೀಗಾಗಿ ಜನ ಸಾಮಾನ್ಯರು ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಒಂದು ನಿಯಮ ಜನಸಾಮಾನ್ಯರಿಗೆ ಒಂದುನೀತಿ ಎಂದು ಟೀಕಿಸುತ್ತಿದೆ.
ಇದನ್ನೂ ಓದಿ : ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳ ಬಗ್ಗೆ ಆತಂಕ ಹೊರಹಾಕಿದ ತಜ್ಞರು
ಇದನ್ನೂ ಓದಿ : ಕರ್ನಾಟಕದಲ್ಲಿಂದು 8,449 ಕೊರೊನಾ ಕೇಸ್ : ಬೆಂಗಳೂರು, ದ.ಕ., ಮೈಸೂರು, ಉಡುಪಿಯಲ್ಲಿ ಕೊರೊನಾರ್ಭಟ
(weekend curfew relaxation, The government allowed the resort and restaurant)