ಸೋಮವಾರ, ಏಪ್ರಿಲ್ 28, 2025
HomekarnatakaBrahmanda Guruji Narendra Babu Sharma : ಕರ್ನಾಟಕ ಮೂರು ಭಾಗ, 3 ಮುಖ್ಯಮಂತ್ರಿ,3 ರಾಜ್ಯಪಾಲರು...

Brahmanda Guruji Narendra Babu Sharma : ಕರ್ನಾಟಕ ಮೂರು ಭಾಗ, 3 ಮುಖ್ಯಮಂತ್ರಿ,3 ರಾಜ್ಯಪಾಲರು : ಬ್ರಹ್ಮಾಂಡ ಗುರೂಜಿ ಭವಿಷ್ಯ

- Advertisement -

ಹಾಸನ : (Brahmanda Guruji Narendra Babu Sharma) ಕರ್ನಾಟಕ ರಾಜ್ಯ ಮುಂದಿನ 31 ವರ್ಷದ ಒಳಗೆ ಮೂರು ಭಾಗವಾಗುತ್ತೆ. ಅಲ್ಲದೇ ಮೂವರು ಮುಖ್ಯಮಂತ್ರಿ, ಮೂವರು ರಾಜ್ಯಪಾಲರಾಗುತ್ತಾರೆ. ದೇವರ ಸತ್ಯವಾಗಿಯೂ ಹೇಳುತ್ತಿದ್ದೇನೆ. ಶಿವನ ಆಣೆಗೂ ಸತ್ಯ ಎಂದು ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮ ಅವರು ಭವಿಷ್ಯ ನುಡಿದಿದ್ದಾರೆ.

ಹಾನಸಕ್ಕೆ ಭೇಟಿ ನೀಡಿದ ಅವರು ಹಾಸನಾಂಬೆಯ ದರ್ಶನ ಪಡೆದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ಅಂತ್ಯಕ್ಕೆ ಐದು ಗ್ರಹಗಳು ಒಟ್ಟಿಗೆ ಬರುತ್ತದೆ. ಎರಡು ಗ್ರಹಣಗಳು ಒಟ್ಟಿಗೆ ಬರಬಾರದು. ಇದರಿಂದ ಜನರಿಗೆ ನೀರಿನ ಅಭಾವ, ಬೆಂಕಿ, ಗಲಾಟೆ, ಘರ್ಷಣೆ, ಸೇರಿದಂತೆ ಒಡಹುಟ್ಟಿದವರ ಜೊತೆ ಘರ್ಷಣೆಯಾಗುತ್ತದೆ. ದೇವರ ಸತ್ಯವಾಗಿ ಹೇಳುತ್ತಿದ್ದೇನೆ. ಯಾರೂ ಕೂಡ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಮುಂದಿನ 31 ವರ್ಷಗಳ ಒಳಗಾಗಿ ಕರ್ನಾಟಕ ಮೂರು ಭಾಗವಾಗುತ್ತದೆ. ಕರ್ನಾಟಕದಲ್ಲಿ ಮೂವರು ಮುಖ್ಯಮಂತ್ರಿಗಳು, ಮೂವರು ರಾಜ್ಯಪಾಲರು ಇರುತ್ತಾರೆ ಎಂದಿದ್ದಾರೆ.

ಕೇವಲ ಕರ್ನಾಟಕ ಮಾತ್ರವಲ್ಲ ಭಾರತ ಎರಡು ದೇಶವಾಗಲಿದೆ. ಇಬ್ಬರು ರಾಷ್ಟ್ರಪತಿಗಳು ಆಗುವುದು ಸತ್ಯ. ಭವಿಷ್ಯದಲ್ಲಿ ಹೀಗೆ ಆಗಲಿದೆ ಎಂದು ನಾನು ಹೇಳುತ್ತಿಲ್ಲ. ಬದಲಾಗಿ ವೀರ ಬ್ರಮ್ಮಯ್ಯ, ಕೈವಾರ ತಾತಯ್ಯ, ಮಂಟೆ ಸ್ವಾಮಿಗಳು ಶಾಸನ ಬರೆದು ಇಟ್ಟಿದ್ದಾರೆ, ಇದು ನಡೆಯುವುದು ನಿಜ ಅಲ್ಲದೇ ಸತ್ಯ ಎಂದಿದ್ದಾರೆ.

ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಸಮ್ಮಿಶ್ರ ಸರಕಾರದ ಬರಲಿದೆ. ಮುಖ್ಯಮಂತ್ರಿ ಯಾರು ಆಗಬೇಕು ಅನ್ನೋ ಕುರಿತು ಸಾಕಷ್ಟು ಗೊಂದಲಗಳು ಏರ್ಪಡಲಿವೆ ಎಂದಿರುವ ಬ್ರಹ್ಮಾಂಡ ಗುರೂಜಿ, ಪಾರ್ಲಿಮೆಂಟ್ ಕಟ್ಟಡದ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ತ್ರಿಕೋನಾತ್ಮಿಕ ದೀಪಿಕ ಯಾವುದೇ ಪಾರ್ಲಿಮೆಂಟ್ ಕಟ್ಟಡವಾಗಿರಬಾರು. ಅದು ಚೌಕವಾಗಿರಬೇಕು. ಇಲ್ಲಕುಜನಾಂಶವಾಗಿರಬೇಕು. ತ್ರಿಕೋನ ಮಾಡಿದಾಗ ಉಗ್ರವಾಗಿರುತ್ತದೆ. ದೇಶದ ಜನರು ಹಾಗೂ ದೇಶದ ಮೇಲೆ ಒತ್ತಾಯ ಹಾಗೂ ಒತ್ತಡಗಳು ಕೂಡ ಜಾಸ್ತಿಯಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ : murugha shri:ಮುರುಘಾ ಶ್ರೀಗಳಿಗೆ ಹೊಸ ಸಂಕಷ್ಟ : ಶ್ರೀಗಳ ವಿರುದ್ಧ ಮತ್ತೆ ದಾಖಲಾಯ್ತು ಲೈಂಗಿಕ ದೌರ್ಜನ್ಯ ಪ್ರಕರಣ

ಇದನ್ನೂ ಓದಿ : Gyanvapi Case:ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ಹಿನ್ನಡೆ : ಶಿವಲಿಂಗದ ಕಾರ್ಬನ್​ ಡೇಟಿಂಗ್​ ಮಾಡಲು ಕೋರ್ಟ್ ನಕಾರ

ಇದನ್ನೂ ಓದಿ : Shami replaces Bumrah: ಟಿ20 ವಿಶ್ವಕಪ್: ಬುಮ್ರಾ ಬದಲು ಶಮಿ ಆಯ್ಕೆ, ಬಿಸಿಸಿಐ ಅಧಿಕೃತ ಘೋಷಣೆ

Karnataka will be divided into three parts says brahmanda guruji narendra babu sharma

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular