ಕನ್ನಡ ಡಿಜಿಟಲ್ (Kannada Digital) ಸುದ್ದಿಲೋಕದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿರುವ ನ್ಯೂಸ್‌ನೆಕ್ಸ್ಟ್ (News Next ) ಸುದ್ದಿ ಸಂಸ್ಥೆ ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಈಗಾಗಲೇ ನ್ಯೂಸ್ ನೆಕ್ಸ್ಟ್ ಡಿಜಿಟಲ್ ವಾಹಿನಿಯನ್ನು ಆರಂಭಿಸಿದ್ದು, ಇದೀಗ ಖ್ಯಾತ ಕಲಾವಿದ, ನಿರ್ದೇಶಕ ಕೆ.ಕೆ.ರಾಗು ರಟ್ಟಾಡಿ ನಿರ್ದೇಶನದಲ್ಲಿ ಕಿರಿಕ್ಕು ಗುರು ಕಾಮಿಡಿ ಶೋ (Kirikku Guru Kannada Comedy Show) ಆರಂಭಗೊಳ್ಳುತ್ತಿದೆ. ಅಗಸ್ಟ್ 15 ರಿಂದ ವಿಭಿನ್ನ ಹಾಸ್ಯ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.
ನ್ಯೂಸ್ ನೆಕ್ಟ್ ಸುದ್ದಿ ಸಂಸ್ಥೆ ಆರಂಭಗೊಂಡು ನಾಲ್ಕು ವರ್ಷಗಳನ್ನೇ ಕಳೆದಿದೆ. ಪ್ರಚಲಿತ ಸುದ್ದಿ, ಕ್ರೀಡೆ, ಉದ್ಯೋಗ, ಲೈಫ್ ಸ್ಟೈಲ್, ಆರೋಗ್ಯ, ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲಾ ಆಯಾಮಗಳಲ್ಲಿಯೂ ಸುದ್ದಿಯನ್ನು ಪ್ರಕಟಿಸುತ್ತಾ ಕೋಟ್ಯಾಂತರ ಮಂದಿಯ ಮನ ಗೆದ್ದಿದೆ. ನ್ಯೂಸ್ ನೆಕ್ಸ್ಟ್ ಸುದ್ದಿ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಓದುಗರಾದ ನಿಮ್ಮ ಸಹಕಾರ, ಹಾರೈಕೆ, ಆಶೀರ್ವಾದ ದೊಡ್ಡದು. ಕೋಟ್ಯಾಂತರ ಕನ್ನಡ ಓದುಗರಿಗೆ ನಾವು ಎಂದಿಗೂ ಆಭಾರಿಗಳು.
ಡಿಜಿಟಲ್ ಸುದ್ದಿಯ ಜೊತೆಗೆ ಡಿಜಿಟಲ್ ವಿಡಿಯೋಗಳ ಮೂಲಕ ನಿಮ್ಮನ್ನು ರಂಜಿಸಲು ನಾವು ನಿಮ್ಮ ಮುಂದೆ ಬರುತ್ತಿದ್ದೇವೆ. ಮಜಾ ಟಾಕೀಸ್ ಸೇರಿದಂತೆ ಹಲವು ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಪಡೆದಿರುವ ಖ್ಯಾತ ನಿರ್ದೇಶಕ ಕೆಕೆ ರಾಗು ರಟ್ಟಾಡಿ ಅವರ ನಿರ್ದೇಶನದಲ್ಲಿ ಕಿರಿಕ್ಕು ಗುರು ತೆರೆಯ ಮೇಲೆ ಮೂಡಿಬರಲಿದೆ.
ಇದನ್ನೂ ಓದಿ : Kundapura Kannada festival: ಬೆಂಗಳೂರಿನಲ್ಲಿ 2 ದಿನ ಕುಂದಾಪ್ರ ಕನ್ನಡ ಹಬ್ಬ
ಅರ್ಚ ಮೀಡಿಯ ಪ್ರೈವೇಟ್ ಲಿಮಿಟೆಡ್ ( Archa Media Pvt Ltd ) ನಿರ್ಮಾಣದ ಕಿರಿಕ್ಕು ಗುರು – ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ ಹಾಸ್ಯ ಕಾರ್ಯಕ್ರಮದಲ್ಲಿ ರಾಗು ರಟ್ಟಾಡಿ ಅವರ ನಟಿಸಿದ್ದು, ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಅರುಣ್ ಗುಂಡ್ಮಿ ಕಲ್ಪನೆಯಲ್ಲಿ ಅನಿಲ್ ಕಾಂಚನ್ ಗುಂಡ್ಮಿ ಹಾಗೂ ವಿಜಯ್ ವಡ್ಡರ್ಸೆ ಅವರ ಕ್ಯಾಮೆರಾ ಕೈಚಳವಿದೆ.
ರೇಷ್ಮಾ ಖಾರ್ವಿ ಸಂಕಲನದಲ್ಲಿ ಕಾರ್ಯಕ್ರಮ ಅದ್ಬುತವಾಗಿ ಮೂಡಿ ಬಂದಿದೆ. ಶರತ್ ಉಚ್ಚಿಲ ಶೀರ್ಷಿಕೆ ಸಂಗೀತ ವಿಭಿನ್ನವಾಗಿದೆ. ಗುರುಚರಣ್ ನೈಲಾಡಿ ಅವರು ಪ್ರೋಮೋ ಕ್ಯಾಮೆರಾ ಕಾರ್ಯ ನಿರ್ವಹಿಸಿದ್ದಾರೆ. ಕೆಕೆ ರಾಗು ರಟ್ಟಾಡಿ, ಶಿವಾನಂದ ರಟ್ಟಾಡಿ, ವಿವೇಕ್ ಕಟ್ಟಿನ ಮಕ್ಕಿ, ರಾಘವೇಂದ್ರ ಗೌಡ ಆಲೂರು, ಪೂರ್ಣಚಂದ್ರ ಕೋಣಿ, ವಿಘ್ನೇಶ್ ಆಲೂರು, ತನುಶ್ ಬೈಲೂರು ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ.
ಕಿರಿಕ್ಕು ಗುರು – ಕಾರ್ಯಕ್ರಮ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ನಮ್ಮ ವಾಹಿನಿಯನ್ನು Subscribe ಮಾಡಿ Like ಮಾಡಿ Share ಮಾಡಿ
https://www.youtube.com/@newsnextdigital
ಇದನ್ನೂ ಓದಿ : ಟೀಮ್ ಕುಂದಾಪುರಿಯನ್ಸ್ : ಸಿಲಿಕಾನ್ ಸಿಟಿಯಲ್ಲಿ ಮನಗೆದ್ದ ಆಸಾಡಿ ಹಬ್ಬ
Kirikku Guru Kannada Comedy Show On News Next Digital