ಕೋಲಾರ : ಬೆಸ್ಕಾಂ ಇಲಾಖೆಗೆ ಸೇರಿದ ಪವರ್ ಸ್ಟೇಷನ್ ನಲ್ಲಿ ಟ್ರಾನ್ಸ್ ಫಾರ್ಮರ್ ಸ್ಟೋಟಗೊಂಡು ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ಕೋಲಾರ ನಗರದ ಎಂಬಿ ರಸ್ತೆಯ ಪಕ್ಕದಲ್ಲಿ ನಡೆದಿದೆ. ಅವಘಡದಲ್ಲಿ 5 ಕೋಟಿಗೂ ಅಧಿಕ ನಷ್ಟ ಸಂಭವಿಸಿದ್ದು, 7 ಗಂಟೆಗೂ ಅಧಿಕ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.
ಶನಿವಾರ ಮದ್ಯಾಹ್ನ 2,15 ಕ್ಕೆ ಟ್ರಾನ್ಸ್ ಫಾರ್ಮರ್ ನಲ್ಲಿ ಬುಷಿಂಗ್ ಮಷಿನ್ ನಲ್ಲಿ 2 ಬಾರಿ ಸ್ಪೋಟ ಸಂಭವಿಸಿದ್ದು, ಅದರ ಪರಿಣಾಮ ವಾಗಿ ಟ್ಯಾಂಕರ್ ನಲ್ಲಿದ್ದ ಆಯಿಲ್ ಸೋರಿಕೆಯಾಗಿ ಬೆಂಕಿ ದಗದಗನೇ ಹೊತ್ತಿ ಉರಿದಿದೆ. ಅಪಾರ ಪ್ರಮಾಣದಲ್ಲಿ ಆಯಿಲ್ ಸೋರಿಕೆಯಾದ ಬೆನ್ನಲ್ಲೆ ಬೆಂಕಿಯ ಕೆನ್ನಾಲಿಗೆ ಸುತ್ತ ಮುತ್ತಲಿನ ಪ್ರದೇಶದಲ್ಲಿನ ಜನರಲ್ಲಿ ಆತಂಕ ಉಂಟುಮಾಡಿತ್ತು. 220 ಕೆವಿ ಸಾಮರ್ಥ್ಯ ದ ಪವರ್ ಸ್ಟೇಷನ್ ಇದಾಗಿದ್ದು, 100 ಎಮ್‌ಎ ಟ್ರಾನ್ಸ್ ಪಾರ್ಮ್ನಲ್ಲಿದ್ದ 1 ಲಕ್ಷ ಲೀಟರ್ ಆಯಿಲ್ ಶೇಖರಿಸುವ ಸಾದ್ಯವಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ, ಐದು ಅಗ್ನಿಶಾಮಕ ದಳ ತಂಡದಿಂದ ಸತತ ಎರಡೂವರೆ ಗಂಟೆಗಳ ಕಾಲ ಕಾರ್ಯಾ ಚರಣೆ ನಡೆಸಿ ಬೆಂಕಿಯನ್ನ ನಂದಿಸಿದ್ದಾರೆ. ಅಗ್ನಿ ಅವಘಡ ದಿಂದ ಬೃಹತ್ ಟ್ರಾನ್ಸ್ ಪಾರ್ಮರ್ ಸುಟ್ಟು ಹೊಗಿದ್ದು, 5 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ.
ಟ್ರಾನ್ಸ್ ಪಾರ್ಮರ್ ಸ್ಪೋಟ ಹಿನ್ನಲೆ ಕೋಲಾರ ನಗರದಲ್ಲಿ ವಿದ್ಯುತ್ ಕಡಿತವಾಗಿದ್ದು, ಕೋಲಾರ, ಮುಳಬಾಗಿಲು, ಬಂಗಾರಪೇಟೆ ತಾಲೂಕಿನ 10ಕ್ಕೂ ಹೆಚ್ಚು ಹೋಬಳಿ ಗಳಲ್ಲಿ ಮಧ್ಯಾಹ್ನ 2.15 ರಿಂದ ರಾತ್ರಿ 7.30 ರವರೆಗೂ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಲಾಕ್ ಡೌನ್ ನಿಂದಾಗಿ ಟ್ರಾನ್ಸ್ ಪಾರ್ಮರ್ ನಿರ್ವಹಣೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.