ಭಾನುವಾರ, ಏಪ್ರಿಲ್ 27, 2025
HomekarnatakaKPSC Exams 2024 : ಕೆಪಿಎಸ್‌ಸಿ ಮುಂದೂಡಿಕೆಯಾಗುತ್ತಾ : ಅಭ್ಯರ್ಥಿಗಳಲ್ಲಿ ಆತಂಕ

KPSC Exams 2024 : ಕೆಪಿಎಸ್‌ಸಿ ಮುಂದೂಡಿಕೆಯಾಗುತ್ತಾ : ಅಭ್ಯರ್ಥಿಗಳಲ್ಲಿ ಆತಂಕ

- Advertisement -

KPSC EXAMS 2024 : ಈಗಾಗಲೇ ಹಲವಾರು ಭಾರಿ ಮುಂದೂಡಿಕೆಯಾಗಿ ಪರೀಕ್ಷಾರ್ಥಿಗಳ ನೆಮ್ಮದಿ ಕೆಡಿಸಿ ಆಕ್ರೋಶಕ್ಕೆ ಗುರಿಯಾಗಿದ್ದು ಕೆಎಎಸ್ ಪೂರ್ವಭಾವಿ ಪರೀಕ್ಷೆ. ಸದ್ಯ ಇನ್ನೆರಡು ದಿನದಲ್ಲಿ ನಡೆಯಬೇಕಿರುವ ಪರೀಕ್ಷಾ ದಿನಾಂಕ ಮತ್ತೊಮ್ಮೆ ಮುಂದೂಡಿಕೆಯಾಗುವ ಭೀತಿ ಎದುರಾಗಿದೆ. ಈ ಭಾರಿ ಪರೀಕ್ಷಾ ದಿನಾಂಕಕ್ಕೆ ಅಭ್ಯರ್ಥಿಗಳಿಂದಲೇ ಆಕ್ಷೇಪ ಎದುರಾಗಿದ್ದು, ಬಹುತೇಕ ಪರೀಕ್ಷಾ ದಿನಾಂಕ ಬದಲಾವಣೆಯಾದರೂ ಅಚ್ಚರಿ ಏನಿಲ್ಲ.

KPSC Exams 2024 postponed Anxiety among candidates
Image Credit to Original Source

ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 27 ನಿಗದಿ ಪಡಿಸಲಾಗಿದೆ. ಅಂದಾಜು 2,10,910 ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಒಟ್ಟು 384 ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ನಡೆಯಬೇಕಿದೆ. ಈ‌ ಮೊದಲು ಆಗಸ್ಟ್ 25ರ ಭಾನುವಾರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ನಡೆಸುವುದಾಗಿ ಘೋಷಿಸಿತ್ತು.

ಇದನ್ನೂ ಓದಿ : 7th pay commission | ಸರಕಾರಿ ನೌಕರರಿಗೆ ವೇತನ ಹೆಚ್ಚಳ : ಕರ್ನಾಟಕ ಸರಕಾರದಿಂದ ಅಧಿಕೃತ ಆದೇಶ, ವೇತನದಲ್ಲಿ ಎಷ್ಟು ಹೆಚ್ಚಳ ?

ಆದರೆ ಅಂದು ಐಪಿಬಿಎಸ್ ಪರೀಕ್ಷೆಗಳು ಇರುವ ಕಾರಣ ಪರೀಕ್ಷಾ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಆಗಸ್ಟ್ 27ಕ್ಕೆ ಬದಲಾವಣೆ ಮಾಡಲಾಗಿದೆ. ಈಗ ಬದಲಾವಣೆ ಮಾಡಿರುವ ದಿನಾಂಕ ಕೂಡ ಅಭ್ಯರ್ಥಿಗಳಿಗೆ ನೂರೊಂದು ಸಮಸ್ಯೆ ಎದುರಿಸುವಂತೆ ಮಾಡಿದ್ದು, ರಜಾ ದಿನ ಬಿಟ್ಟು ವರ್ಕಿಂಗ್ ಡೇ ದಿನ ಪರೀಕ್ಷಾ ನಡೆಸುತ್ತಿರುವ ಆಯೋಗದ ವಿರುದ್ಧ ಅಭ್ಯರ್ಥಿಗಳು ಕೆಂಡಾಮಂಡಲರಾಗಿದ್ದಾರೆ.

ಸಾಮಾನ್ಯವಾಗಿ ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರಜಾ ದಿನಗಳಲ್ಲಿ, ಅದರಲ್ಲೂ ಹೆಚ್ಚಾಗಿ ಭಾನುವಾರ ನಡೆಸುವುದು ವಾಡಿಕೆ. ಆದರೆ ಈ ಭಾರಿ ಕೆಲಸದ ದಿನ ಅಂದ್ರೇ ಮಂಗಳವಾರ ನಡೆಸಲಾಗುತ್ತಿದೆ. ಹೀಗಾಗಿ ಈ ದಿನಾಂಕ ಬದಲಾವಣೆಗೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬಿಪಿಎಲ್‌ ಕಾರ್ಡ್‌ ಹೊಂದಿದವರಿಗೆ ಸಿಗಲಿದೆ 5 ಲಕ್ಷ ರೂ. ಯೋಜನೆ : ಅರ್ಜಿ ಸಲ್ಲಿಸುವುದು ಹೇಗೆ ?

ಆದರೆ ಇನ್ನೇನು ಪರೀಕ್ಷೆಗೆ ಎರಡೂ ದಿನ ಉಳಿದಿದ್ದರೂ ಮತ್ತೆ ಪರೀಕ್ಷೆ ದಿನಾಂಕ ಬದಲಾವಣೆ ಕುರಿತು ಕೆಪಿಎಸ್‌ಸಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಹಾಗಿದ್ದರೇ ಈ ಭಾರಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳ ಸಮಸ್ಯೆ ಏನೇನು ಅನ್ನೋದನ್ನು ನೋಡೋದಾದರೇ, ಆಯೋಗ 2017/18ರ ಬ್ಯಾಚಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿಗೆ ಅವಕಾಶವಿಲ್ಲ. ಅಲ್ಲದೇ 4/5 ವರ್ಷಗಳಿಂದ ಕನಸು ಕಟ್ಟಿಕೊಂಡು ಓದುತ್ತಾ ಇರೋ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ.

KPSC Exams 2024 postponed Anxiety among candidates
Image Credit to Original Source

ಅಲ್ಲದೇಮಂಗಳವಾರ ಖಾಸಗಿ / mnc ಕಂಪನಿ ಅವರಿಗೆ ರಜೆ ಇಲ್ಲ. ಇದಲ್ಲದೇ ವಾರದ ದಿನದಲ್ಲಿ ಪರೀಕ್ಷೆ ನಡೆಸುತ್ತಿರೋದರಿಂದ ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ರೈಟರ್ ಸಿಗೋದಿಲ್ಲ. ಪರೀಕ್ಷಾ ಸೆಂಟರ್ ಅಲ್ಲಿಯೂ ಕೂಡ ನೂರೊಂದು ಸಮಸ್ಯೆ.ಬೆಂಗಳೂರಿನ ಅಭ್ಯರ್ಥಿಗಳಿಗೆ ಚಿತ್ರದುರ್ಗ, ಬೆಳಗಾವಿ ಅಭ್ಯರ್ಥಿಗಳಿಗೆ ಮೈಸೂರು ಪರೀಕ್ಷೆ ಸೆಂಟರ್ .ಅಭ್ಯರ್ಥಿಗಳಿಗೆ 200/300 ಕಿಲೋಮೀಟರ್ ದೂರ ಸೆಂಟರ್ ಇಟ್ಟ ಆರೋಪ.

ಇದನ್ನೂ ಓದಿ : 3 ಲಕ್ಷ ಬಿಪಿಎಲ್ ಕಾರ್ಡ್ ರದ್ದು: ನಿಮ್ಮ ಪಡಿತರ ಚೀಟಿ ಚಾಲ್ತಿಯಲ್ಲಿದ್ಯಾ ಚೆಕ್ ಮಾಡಿ

ಟ್ರಾವೆಲ್ ಮಾಡೋ ಟೈಮ್, ಖರ್ಚು ಎಲ್ಲಾ ವೆಸ್ಟ್.ಬಡ ಕುಟುಂಬದವರಿಗೆ 2/3 ದಿನ ರಜೆ ಹಾಕಿ ದೂರದೂರಿಗೆ ಪ್ರಯಾಣ ಮಾಡೋ ಪರಿಸ್ಥಿತಿ.ಪರೀಕ್ಷೆ ದಿನಾಂಕ ಅನೌನ್ಸ್ ಆದ ಒಂದು ವಾರದಲ್ಲಿ ಪರೀಕ್ಷೆ ಪೇಪರ್ ತಯಾರು ಮಾಡಬೇಕು.ಒಂದು ತಿಂಗಳ ಮುಂಚಿತವಾಗಿ ಪರೀಕ್ಷೆ ಪೇಪರ್ ತಯಾರು ಮಾಡಿರುವ ಆರೋಪ
ದೇಶದ ಇತರ ನೇಮಕಾತಿ ಆಯೋಗ 6/7 ದಿನ ಮೊದಲು ಪೇಪರ್ ಸಿದ್ಧ ಮಾಡಿದೆ ಎನ್ನಲಾಗ್ತಿದೆ.

ಹೀಗಾಗಿ ತರಾತುರಿಯಲ್ಲಿ ಕೆಪಿಎಸ್ಸಿ ಪರೀಕ್ಷಾ ಸಿದ್ಧತೆ ಮಾಡ್ತಾ ಇರೋದನ್ನು ನೋಡಿದ್ರೆ ನೂರೊಂದು ಅನುಮಾನ ಅಂತಿದ್ದಾರೆ ಅಭ್ಯರ್ಥಿಗಳು. ಇದಲ್ಲದೇ ಮಂಗಳವಾರ NET ಪರೀಕ್ಷೆ ಕೂಡಾ ಈ ಮೊದಲೇ ನಿಗದಿ ಆಗಿದೆ .ಅದೇ ದಿನ ಪ್ರಿಲೀಮ್ಸ್ ಇದ್ದು ಎರಡೆರಡು ಪರೀಕ್ಷೆ ಬರೆಯೋದು ಹೇಗೆ ಅಂತ ಅಳಲು ತೋಡಿಕೊಳ್ತಿದ್ದಾರೆ.

ಈಗಾಗಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕೆಪಿಎಸ್ ಸಿ ಈ ತರಾತುರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಕೆಪಿಎಸ್ಸಿ ಮಾತ್ರ ಪರೀಕ್ಷೆ ನಡೆಸಲು ಪಣತೊಟ್ಟಿದ್ದು, ಪರೀಕ್ಷೆ ಮುಂದೂಡಿಕೆಯಾಗಬೇಕೆಂಬ ಆಗ್ರಹ ವಿದ್ಯಾರ್ಥಿಗಳಿಂದ ವ್ಯಕ್ತ ವಾಗಿದೆ.

KPSC Exams 2024 postponed Anxiety among candidates

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular