ಬೆಂಗಳೂರು: KSRTC Money offer: ದೇಶದಲ್ಲೇ ಅತ್ಯುತ್ತಮ ಸಾರಿಗೆ ಸೇವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆಎಸ್ ಆರ್ ಟಿಸಿ ನಿಗಮ ತನ್ ವ್ಯಾಪ್ತಿಗೆ ಹೊಸ ಹೊಸ ಬಸ್ ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಜೊತೆಗೆ ಆಗೊಮ್ಮೆ ಈಗೊಮ್ಮೆ ಸೌಲಭ್ಯಗಳಲ್ಲೂ ಪ್ರಗತಿ ನೀಡಿ ಪ್ರಯಾಣಿಕರನ್ನು ಖುಷಿಪಡಿಸುತ್ತಲೇ ಇರುತ್ತದೆ. ಅಂತೆಯೇ ಇದೀಗ ಮತ್ತೊಮ್ಮೆ ಕೆಎಸ್ ಆರ್ ಟಿಸಿ ನಿಗಮ 2 ಹೊಸ ಬಸ್ ಗಳನ್ನು ಪರಿಚಯಿಸುತ್ತಿದೆ. ಜೊತೆಗೆ ಇದರ ಜೊತೆ ಹಣ ಗೆಲ್ಲುವ ಅವಕಾಶವನ್ನೂ ಜನರಿಗೆ ನೀಡಿದೆ.
ಹೊಸ ಎರಡು ಬಸ್ ಗಳನ್ನು ಪರಿಚಯಿಸಲಿರುವ ಕೆಎಸ್ ಆರ್ ಟಿಸಿ ನಿಗಮವು ಪ್ರಯಾಣಿಕರು ಈ ಬಸ್ ಗಳಿಂದ ಸುರಕ್ಷಿತವಾಗಿಯೂ ಮತ್ತು ಸುಖಕರವಾಗಿಯೂ ಪ್ರಯಾಣ ಬೆಳೆಸಬಹುದು ಎಂದು ಹೇಳಿದೆ.
ಆದರೆ ಈ ಬಸ್ ಗಳ ವಿಶೇಷತೆ ಬೇರೆಯದ್ದೇ ಇದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೊಸದಾಗಿ ಆರಂಭಿಸುತ್ತಿರುವ ಮಲ್ಟಿ ಆಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನಗಳಿಗೆ ಸಾರ್ವಜನಿಕರು ಮತ್ತು ಪ್ರಯಾಣಿಕರಿಂದ ಬ್ರಾಂಡ್ ಹೆಸರು, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ಸ್ ಗಳನ್ನು ನಿಗಮ ಆಹ್ವಾನಿಸಿದೆ. ಪ್ರತಿ ಮಾದರಿಯ ವಾಹನಗಳಿಗೆ ಉತ್ತಮ ಬ್ರ್ಯಾಂಡ್ ನೇಮ್ ಸೂಚಿಸುವಂತೆ ನಿಗಮ ಹೇಳಿದೆ. ಉತ್ತಮ ಹೆಸರನ್ನು ಸೂಚಿಸಿದ ವಿಜೇತರಿಗೆ 10 ಸಾವಿರ ರೂ. ನಗದು ಬಹುಮಾನ, ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ 25 ಸಾವಿರ ರೂ, ಬಹುಮಾನ ಘೋಷಿಸಲಾಗಿದೆ. ಬ್ರ್ಯಾಂಡ್ ಹೆಸರನ್ನು ಸೂಚಿಸಲು ಡಿಸೆಂಬರ್ 5 ಕೊನೆಯ ದಿನವಾಗಿದೆ.
ಕೆ.ಎಸ್.ಆರ್.ಟಿ.ಸಿ.ಯ ನೂತನ ವಾಹನ ಸೇವೆಗಳಗೆ
— KSRTC (@KSRTC_Journeys) November 28, 2022
ಬ್ರಾಂಡಿಂಗ್ ಪರಿಕಲ್ಪನೆ pic.twitter.com/21gfRLGSWw
ಇದನ್ನೂ ಓದಿ: ದತ್ತಾತ್ರೇಯ ಪೀಠದಲ್ಲಿ ದತ್ತಜಯಂತಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಯಾರು ಕೂಡಾ ಬ್ರ್ಯಾಂಡ್ ನೇಮ್, ಗ್ರಾಫಿಕ್ಸ್, ಟ್ಯಾಗ್ ಲೈನ್ ನೀಡಲು ಅವಕಾಶವಿದೆ. ನಿಮ್ಮ ಬ್ರ್ಯಾಂಡ್ ಐಡಿಯಾಗಳನ್ನು cpro@ksrtc.org ಮೇಲ್ ಗೆ ಅಥವಾ ಕೆಎಸ್ ಆರ್ ಟಿಸಿ ನಿಗಮದ ಫೇಸ್ ಬುಕ್ ಅಥವಾ ಟ್ವಿಟರ್ ಖಾತೆಗೆ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ಮಣಕುಲ ದೇಗುಲದ ಲಕ್ಷ್ಮಿ ಆನೆ ವಿಧಿವಶ: ಭಕ್ತರಿಂದ ಅಂತಿಮ ನಮನ
KSRTC Money offer: This is a bumper offer Give an idea to KSRTC and win 35 thousand Rupees