ಹಾವೇರಿ : ಬಸ್ ನಲ್ಲಿ ಪ್ರಯಾಣದ ವೇಳೆ ಸಾಮಾನ್ಯವಾಗಿ ದೊಡ್ಡವರು ಮಕ್ಕಳಿಗೆ ಕೈ ಹೊರಗಡೆ ಹಾಕಬಾರದು ಅಂತಾ ಎಚ್ಚರಿಸುತ್ತೇವೆ. ಆದ್ರಲ್ಲೂ ಪ್ರಯಾಣದ ವೇಳೆಯಲ್ಲಿ ಎಚ್ಚು ಎಚ್ಚರವಾಗಿದ್ರೂ ಕಡಿಮೆನೇ. ಯಾಕೆಂದ್ರ ಬಸ್ ಪ್ರಯಾಣದ ವೇಳೆಯಲ್ಲಿ ನಿದ್ದೆ ಮಾಡಿದ ತಪ್ಪಿಗೆ ಪ್ರಯಾಣಿಕನೋರ್ವ ತನ್ನ ಕೈಯಲ್ಲೇ ಕಳೆದುಕೊಂಡಿದ್ದಾನೆ.
ಹಾವೇರಿ ಜಿಲ್ಲೆಯ ಹಿರೆಕೆರೂರಿನ ನಿವಾಸಿ ನದೀಮ್ (28 ವರ್ಷ ) ಎಂಬಾತನೇ ಕೈ ಕಳೆದುಕೊಂಡ ಪ್ರಯಾಣಿಕ. ಅಂಕೋಲಾದಿಂದ ಶಿರಸಿಗೆ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ. ಈ ವೇಳೆಯಲ್ಲಿ ನದೀಮ್ ನಿದ್ದೆಗೆ ಜಾರಿದ್ದಾರೆ.
ಇದನ್ನೂ ಓದಿ:Petrol Tanker Accident : ಚಾರ್ಮಾಡಿ ಘಾಟಿಯಲ್ಲಿ ಪಲ್ಟಿ : ತಪ್ಪಿದ ಭಾರೀ ದುರಂತ
ನಿದ್ದೆಯ ಮಂಪರಿನಲ್ಲಿ ಕಿಟಕಿಯಿಂದ ಹೊರಗೆ ಕೈ ಚಾಚಿದ್ದು, ಎದುರಿನಿಂದ ವೇಗವಾಗಿ ಬಂದ ಲಾರಿ ಕೈಗೆ ತಾಗಿದ್ದರಿಂದ ಕೈ ಭಾಗ ಕಟ್ ಆಗಿದೆ. ಗಂಭೀರವಾಗಿ ಗಾಯಗೊಂಡ ನದೀಮ್ ನನ್ನುಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
(A passenger who lost his hand in sleep)