ಸೋಮವಾರ, ಏಪ್ರಿಲ್ 28, 2025
HomeCoastal Newsಮಂಗಳೂರಲ್ಲಿ ಸಿಟಿ ಬಸ್ ಚಾಲಕನ ಅಟ್ಟಹಾಸ : ಇಂಜಿನಿಯರ್ ಸಾವು, ಸಾರ್ವಜನಿಕರ ಆಕ್ರೋಶ

ಮಂಗಳೂರಲ್ಲಿ ಸಿಟಿ ಬಸ್ ಚಾಲಕನ ಅಟ್ಟಹಾಸ : ಇಂಜಿನಿಯರ್ ಸಾವು, ಸಾರ್ವಜನಿಕರ ಆಕ್ರೋಶ

- Advertisement -

ಮಂಗಳೂರು : (Engineer Megha Ranjith Pai Death) ಇನ್ನೇನು ಆಕೆ ಮದುವೆಯ ದಶಮಾನೋತ್ಸವದ ಸಂಭ್ರಮಾಚರಣೆಯನ್ನು ಆಚರಿಸಬೇಕಾಗಿತ್ತು. ಬೆಂಗಳೂರಿನಲ್ಲಿ ಪತಿಯೊಂದಿಗೆ ಸುಂದರ ಸಂಸಾರವನ್ನು ನಡೆಸುತ್ತಿದ್ದರು. ಖಾಸಗಿ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿ ಹಲವು ಕನಸುಗಳನ್ನು ಕಂಡಿದ್ದರು. ಮಂಗಳೂರಿನಲ್ಲಿರುವ (Mangalore) ತಾಯಿಯ ಮನೆಗೆ ಬಂದಿದ್ದ ಆಕೆ ರಸ್ತೆ ದಾಟುವ ವೇಳೆಯಲ್ಲಿ ಖಾಸಗಿ ಬಸ್ ಚಾಲಕನ ಓವರ್ ಟೇಕ್ (Overtake – urgent) ಹುಚ್ಚಿಗೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿ ಇಂಜಿನಿಯರ್ ಮೇಘ ರಂಜಿತ್ ಪೈ (34 ವರ್ಷ) ಎಂಬವರೇ ಮೃತ ದುರ್ದೈವಿ. ಮಂಗಳೂರು ಮೂಲದ ಮೇಘ ರಂಜಿತ್ ಪೈ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತಿಯ ಜೊತೆಗೆ ಬೆಂಗಳೂರಿನ ಜೆಪಿ ನಗರದ‌ ಬೇಗೂರಿನಲ್ಲಿ ವಾಸವಾಗಿದ್ದರು. ಮೊನ್ನೆಯಷ್ಟೇ ತನ್ನ ತಾಯಿಯ ಮನೆಗೆ ಬಂದಿದ್ದರು. ನಗರದ ಕೊಟ್ಟಾರ ಚೌಕಿಯ ಕಲ್ಲುರ್ಟಿ ದೇವಸ್ಥಾನದ ಎದುರಿನಲ್ಲಿ ಮೇಘ ಅವರು ರಸ್ತೆ ದಾಟುತ್ತಿದ್ದ ವೇಳೆಯಲ್ಲಿ, ದ್ವಿಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಬಂದ ಗೋಲ್ಡನ್ ಹೆಸರಿನ ಬಸ್ಸು ಢಿಕ್ಕಿ ಹೊಡೆದಿದೆ. ಇದರಿಂದಾಗಿ ಮೇಘ ಪೈ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ತುರ್ತು ನಿಗಾ ಘಟಕದಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರೂ ಕೂಡ ಮೇಘ ರಂಜಿತ್ ಪೈ ( Megha Ranjith Pai) ಅವರು ಚಿಕಿತ್ಸೆ ಫಲಕಾರಿಯಾಗದೇ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಘಟನೆಗೆ ಚಾಲಕ ಶ್ರವಣ್ ಕುಮಾರ್ ನಿರ್ಲಕ್ಷ್ಯವೇ ಹಾಗೂ ಅಜಾಗರೂಕತೆಯೇ ಕಾರಣ ಎಂದು ಮೇಘ ಪೈ ಅವರ ಪತಿ ರಂಜಿತ್ ಪೈ (Ranjith Pai)ಅವರು ಪಾಂಡೇಶ್ವರದ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಂಗಳೂರು ನಗರದಲ್ಲಿ ಸಿಟಿ ಬಸ್ ಚಾಲಕರ ಅತೀ ವೇಗದ ಚಾಲನೆಗೆ ಜನರು ಬಲಿಯಾಗುತ್ತಿದ್ದಾರೆ. ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಹಾಗೂ ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಅವರಿಗೂ ಟ್ವೀಟ್ ಮಾಡುತ್ತಿದ್ದಾರೆ.

ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಅಮಾಯಕರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿರುವ ಬಸ್ ಚಾಲಕರು ಹಾಗೂ ಮಾಲೀಕರ ವಿರುದ್ದ ಪೊಲೀಸ್ ಇಲಾಖೆ ಕಠಿಣ ಕ್ರಮವನ್ನು ಕೈಗೊಂಡ್ರೆ ಮಾತ್ರ ಇಂತಹ ಘಟನೆ ಮರುಕಳಿಸದಂತೆ ಮಾಡಬಹುದು ಅನ್ನೋದು ಸಾರ್ವಜನಿಕರ ಅಭಿಪ್ರಾಯ. ಈ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತರು ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.

ಇದನ್ನೂ ಓದಿ : Traffic Rules : ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲು ಮಂಗಳೂರು ನಗರ ಪೊಲೀಸರ ಹೊಸ ತಂತ್ರ

ಇದನ್ನೂ ಓದಿ : ಟ್ರ್ಯಾಕ್ಟರ್‌ ಪಲ್ಟಿ: 6 ಮಂದಿ ಸಾವು, 20 ಮಂದಿಗೆ ಗಾಯ

Mangalore City Bus Driver Negligence Engineer Megha Ranjith Pai Death Publics Outrage

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular