ಬೆಂಗಳೂರು : ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪಿಎ ರಾಜಣ್ಣ ಸಿಸಿಬಿ ವಿಚಾರಣೆ ಮುಗಿಸಿ ಹೊರಗೆ ಬಂದಿದ್ದಾರೆ.
ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಿಸಿಬಿಗೆ ದೂರು ನೀಡಿದ್ದರು. ಅಲ್ಲದೇ ಈ ಕುರಿತು ಅವ್ಯವಹಾರದ ಆಡಿಯೋ ಬಯಲಾಗಿದೆ. ಇದರ ಬೆನ್ನಲ್ಲೇ ರಾಜಣ್ಣ ಅವರನ್ನು ಬಂಧಿಸಲಾಗಿತ್ತು.
ಸಚಿವ ಶ್ರೀರಾಮುಲು ಮನೆಯಲ್ಲಿಯೇ ರಾಜಣ್ಣ ಅವರನ್ನು ಬಂಧಿಸಿ ದ್ದರು. ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ಸಿಸಿಬಿ ಅಧಿಕಾರಿ ಗಳು ಪಿಎ ರಾಜಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಅವ್ಯವಹಾರ ಕ್ಕೆ ಸಂಬಂಧಿಸಿದಂತೆ ಮೊಬೈಲ್ ನಲ್ಲಿ ಮೂರು ಆಡಿಯೋ ಗಳು ಸಿಕ್ಕಿವೆ ಎನ್ನಲಾಗುತ್ತಿದೆ.
ಆದರೆ ಸಿಸಿಬಿ ಪೊಲೀಸರ ವಿಚಾರಣೆ ಮುಗಿಸಿ ಹೊರ ಬಂದ ರಾಜಣ್ಣ ಹಣಕ್ಕೆ ಡೀಲ್ ಮಾಡಿರುವ ಆಡಿಯೋ ನನ್ನದಲ್ಲ ಎಂದಿದ್ದಾರೆ. ಆದರೆ ಸಿಸಿಬಿ ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗ ಬೇಕೆಂದು ಸೂಚನೆಯನ್ನು ನೀಡಿ ಬಿಟ್ಟು ಕಳುಹಿಸಿ ದ್ದಾರೆ ಎನ್ಬಲಾಗುತ್ತಿದೆ