ಸೋಮವಾರ, ಏಪ್ರಿಲ್ 28, 2025
HomekarnatakaHeavy Rainfall in Karnataka : ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆಯಾಗುವ ಸಾಧ್ಯತೆ

Heavy Rainfall in Karnataka : ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆಯಾಗುವ ಸಾಧ್ಯತೆ

- Advertisement -

ಬೆಂಗಳೂರು : ಕಳೆದ ಏಪ್ರಿಲ್‌ ತಿಂಗಳಿಂದ ಬೇಸಿಗೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಳೆರಾಯನ (Heavy Rainfall in Karnataka) ಆಗಮನಕ್ಕಾಗಿ ಕಾಯುತ್ತಿದ್ದಾರೆ. ಇನ್ನು ರೈತರು ಮುಂದಿನ ವರ್ಷದ ಬೆಳೆಗಾಗಿ ಬಿತ್ತನೆ ಕೆಲಸವನ್ನು ಸದ್ಯದಲ್ಲೇ ಪ್ರಾರಂಭಿಸಲಿದ್ದು, ವರುಣನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಅದರಲ್ಲೂ ಬಂಗಾಳಕೊಲ್ಲಿಯಲ್ಲಿ ಮೋಚಾ ಚಂಡಮಾರುತದ ಅಲೆ ಎದ್ದಿದ್ದು, ಪರಿಣಾಮ ರಾಜ್ಯದ ಹಲವೆಡೆ ಸೈಕ್ಲೋನ್‌ ಭೀತಿಯೂ ಕೂಡ ಕಾಡುತ್ತಿದೆ. ಅಲ್ಲದೆ ಮುಂದಿನ (Mocha Cyclone Effect) ಮೇ 14ರವರೆಗೂ ಭಾರಿ ಮಳೆ ಆಗುವ ಸಾಧ್ಯೆತೆಯಿದೆ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ಬೆಂಗಳೂರು, ಉಡುಪಿ, ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬೀದರ್, ಕೊಪ್ಪಳ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 3 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹುಣಸೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ, ರಾಮನಗರ, ಮಾಲೂರು, ಹೊಸಕೋಟೆ, ಕನಕಪುರ, ರಾಯಚೂರು, ಸರಗೂರು, ಪರಶುರಾಂಪುರ, ಕೃಷ್ಣರಾಜಸಾಗರ, ಸೈದಾಪುರ, ಹಾಸನ, ಕುಣಿಗಲ್, ಕೆಐಎಎಲ್​, ಖಜೂರಿ, ತಿರುಮಲ, ಚಾಮರಾಜನಗರ, ಕೃಷ್ಣರಾಜಪೇಟೆ, ಬೀದರ್, ಗೋಣಿಕೊಪ್ಪಲು, ಹರದನಹಳ್ಳಿ, ಶ್ರೀರಂಗಪಟ್ಟಣ, ಚಿಕ್ಕನಹಳ್ಳಿ, ಬೆಳ್ಳೂರು, ಮೈಸೂರಿನಲ್ಲಿ ಮಳೆಯಾಗಲಿದೆ.

ಇದನ್ನೂ ಓದಿ : ಮೈಸೂರು ದಸರಾದಲ್ಲಿ 14‌ ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಆನೆ ಇನ್ನಿಲ್ಲ

ಮೋಚಾ ಚಂಡಮಾರುತದ ಸೃಷ್ಟಿ ಮತ್ತು ನಂತರ ಅದರ ಪ್ರಭಾವ ತೀವ್ರಗೊಂಡಿದ್ದು, ವ್ಯಾಪಕವಾದ ಗುಡುಗು ಸಹಿತ ಮಳೆಗೆ ಕಾರಣವಾಗಲಿದೆ. ಹವಾಮಾನ ತಜ್ಞರ ಪ್ರಕಾರ, ಆಗ್ನೇಯ ಬಂಗಾಳದಲ್ಲಿ ಶೀಘ್ರದಲ್ಲೇ ಚಂಡಮಾರುತದ ಪರಿಚಲನೆ ರಚನೆಯಾಗುವ ಸಾಧ್ಯತೆ ಇದೆ. ಇದರ ಪ್ರಭಾವದಿಂದ ಮೇ 7ರ ಸುಮಾರಿಗೆ ಇದೇ ಪ್ರದೇಶದಲ್ಲಿ ಅಪಾರ ಮಳೆಯಾಗುವ ಸಾಧ್ಯತೆ ಇದೆ. ಇದು ಮೇ 8 ರ ಸುಮಾರಿಗೆ ಇದು ಇನ್ನಷ್ಟು ಮಳೆ ಆಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ತಾಪಮಾನ ಏರಿಕೆಯ ಹೊರತಾಗಿಯೂ, ಮುಂದಿನ ವಾರದವರೆಗೆ ಈ ರಾಜ್ಯಗಳಲ್ಲಿ ಶಾಖದ ಅಲೆಯು ಕಡಿಮೆ ಇರಲಿದೆ. ಮೇ ತಿಂಗಳ ಎರಡನೇ ವಾರದಿಂದ ಹವಾಮಾನವು ಸಂಪೂರ್ಣವಾಗಿ ಬದಲಾಗುತ್ತದೆ. ಜನರು ಆಗಾಗ ಬಿಸಿಲಿನ ತಾಪವನ್ನು ಎದುರಿಸಬೇಕಾಗುತ್ತದೆ.

Mocha Cyclone Effect : Heavy Rainfall in Karnataka: There is a possibility of heavy rainfall in the state for the next 3 days

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular