Muda scandal : ಬೆಂಗಳೂರು : ಮೂಡಾ ಹಗರಣ ಇದೀಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah ) ಕೊರಳಿಗೆ ಉರುಳಾಗಿ ಪರಿಣಮಿಸಿದೆ. ಮೂಡ ತನಿಖೆಗೆ ರಾಜ್ಯಪಾಲರು ಸಮ್ಮತಿ ಸೂಚಿಸಿದ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಒಂದೊಮ್ಮೆ ಹೈಕೋರ್ಟ್ ಕೂಡ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದ್ರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಏರುವಾಗ ಎದುರಾಗಿದ್ದ ಸವಾಲುಗಳು ಒಂದಲ್ಲ ಎರಡಲ್ಲ. ಒಂದೆಡೆ ಡಿಕೆ ಶಿವಕುಮಾರ್ ವಿರುದ್ದ ಗೆದ್ದು ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು. ಯಾವುದೇ ಆರೋಪವಿಲ್ಲದೇ ರಾಜಕಾರಣ ಮಾಡುತ್ತೇನೆ ಅಂತಾ ಪ್ರತಿಜ್ಞೆ ಸ್ವೀಕಾರ ಮಾಡಿದ್ದ ಸಿದ್ದರಾಮಯ್ಯಗೆ ವಾಲ್ಮೀಕಿ ನಿಗಮದ ಹಗರಣದ ಬೆನ್ನಲ್ಲೇ ಇದೀಗ ಮೂಡ ಹಗರಣ ಕೊರಳಿಗೆ ಸುತ್ತಿಕೊಂಡಿದೆ.
ಮೂಡ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನುಣುಚಿಕೊಳ್ಳೋದಕ್ಕೆ ಯತ್ನಿಸಿದ್ದರೂ ಕೂಡ ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಈ ಹಿಂದೆ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಕಟ್ಟಿ ಬೆಳೆಸಿದ್ದ ಬಿಎಸ್ ಯಡಿಯೂರಪ್ಪ ಅವರಿಗೆ ಬಂದೊದಗಿದ್ದ ಸ್ಥಿತಿಯೇ ಸಿದ್ದರಾಮಯ್ಯಗೂ ಎದುರಾಗಲಿದೆ ಅನ್ನೋ ಕುರಿತು ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಇನ್ನೊಂದೆಡೆಯಲ್ಲಿ ಪ್ರಕರಣದಲ್ಲಿ ತನಿಖೆ ನಡೆದ್ರೆ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯವೇ ಮುಗಿದು ಹೋಗುತ್ತಾ ಅನ್ನೋ ಕುತೂಹಲವೂ ವ್ಯಕ್ತವಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ 2 ದಿನ ಪವರ್ ಕಟ್ : ಯಾವ ಏರಿಯಾದಲ್ಲಿ ಇರಲ್ಲ ಕರೆಂಟ್
ಮೂಡಾ ಹಗರಣದಲ್ಲಿ ಮೇಲ್ನೋಟಕ್ಕೆ ಸಿದ್ದರಾಮಯ್ಯ ಅವರು ತಪ್ಪು ಎಸಗಿರುವುದು ಕಂಡು ಬರುತ್ತಿದೆ. ಈಗಾಗಲೇ ದೂರುದಾರರು ಕೂಡ ರಾಜ್ಯಪಾಲರಿಗೆ ಎಲ್ಲಾ ದಾಖಲೆಗಳನ್ನು ಒದಗಿಸಿದ್ದಾರೆ. ರಾಜ್ಯಪಾಲರಿಗೂ ಮೂಡ ಹಗರಣದಲ್ಲಿ ಸಿಎಂ ಬಾಗಿಯಾಗಿರೋದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಇದೇ ಕಾರಣದಿಂದಲೇ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ದ ತನಿಖೆಗೆ ಆದೇಶ ಹೊರಡಿಸಿದ್ದರು.
ಮೂಡ ಹಗರಣದ ತನಿಖೆಯನ್ನು ಎದುರಿಸುವುದನ್ನು ಹೇಗಾದ್ರೂ ಮಾಡಿ ತಪ್ಪಿಸಿಕೊಳ್ಳಬೇಕು ಅನ್ನೋ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಘಟಾನುಘಟಿ ವಕೀಲರನ್ನು ಕಾಂಗ್ರೆಸ್ ಪಾಳಯ ಕರ್ನಾಟಕಕ್ಕೆ ಕರೆಯಿಸಿಕೊಂಡಿದೆ. ಇನ್ನೊಂದೆಡೆಯಲ್ಲಿ ರಾಜ್ಯಪಾಲರ ನಡೆಯ ವಿರುದ್ದ ಕಾಂಗ್ರೆಸ್ ಬೀದಿಗೆ ಇಳಿದಿದೆ. ಆದರೆ ಈ ಪ್ರಕರಣಕ್ಕೆ ಕಾಂಗ್ರೆಸ್ ಪಾಳಯಕ್ಕೆ ಅಷ್ಟೊಂದು ಸುಲಭದಲ್ಲ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 4000 ರೂ. ಯಾವಾಗ ಸಿಗುತ್ತೆ ? ಇಲ್ಲಿದೆ ಬಿಗ್ ಅಪ್ಟೇಟ್ಸ್
ರಾಜ್ಯಪಾಲರ ನಡೆಯ ವಿರುದ್ದ ಸಿಡಿದು ನಿಂತಿರುವ ಕಾಂಗ್ರೆಸ್ ಪಕ್ಷ ಸದ್ಯ ಹೈಕೋರ್ಟ್ ಕದತಟ್ಟಿದೆ. ಅಭಿಷೇಕ್ ಮನು ಸಿಘ್ವಿ, ರವಿವರ್ಮ ಕುಮಾರ್ ಅವರಂತಹ ಘಟನಾನುಘಟಿ ವಕೀಲರು ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಲಿದ್ದಾರೆ. ಇನ್ನೊಂದೆಡೆಯಲ್ಲಿ ರಾಜ್ಯಪಾಲರ ಪರವಾಗಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ವಾದ ಮಂಡಿಸಲಿದ್ದಾರೆ.

ಮೂಡಾ ಹಗರಣದ ಕುರಿತು ಈಗಾಗಲೇ ಖಾಸಗಿ ದೂರು ದಾಖಲಾಗಿದೆ. ಇನ್ನೊಂದೆಡೆಯಲ್ಲಿ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಹೋರಾಟ ನಡೆಸುತ್ತಿವೆ. ರಾಜ್ಯಪಾಲರ ನಡೆಯನ್ನು ಬಿಜೆಪಿ ಜೆಡಿಎಸ್ ಸ್ವಾಗತಿಸಿದ್ದು, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿವೆ. ಒಂದೊಮ್ಮೆ ಹೈಕೋರ್ಟ್ ಕೂಡ ತನಿಖೆಗೆ ಸಮ್ಮತಿಸಿದ್ರೆ ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರುವುದು ಖಚಿತ.
ಇದನ್ನೂ ಓದಿ : ಕರ್ನಾಟಕದಲ್ಲಿ20 ಲಕ್ಷ ಬಿಪಿಎಲ್ ಕಾರ್ಡ್ ರದ್ದು ! ಜಾರಿಯಾಯ್ತು ಹೊಸ ರೂಲ್ಸ್
ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದುಕೊಂಡು ತನಿಖೆಯನ್ನು ಎದುರಿಸುವುದು ಸರಿಯಲ್ಲ. ಹೀಗಾಗಿ ಸಿದ್ದರಾಮಯ್ಯ ಸಿಎಂ ಹುದ್ದೆಗೆ ರಾಜೀನಾಮೆ ನೀಡಲೂ ಬಹುದು. ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರು ತಮ್ಮ ವಿರುದ್ದ ಆರೋಪ ಕೇಳಿಬಂದ ಸಂದರ್ಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದರು. ಅಂದು ಬಿಎಸ್ ಯಡಿಯೂರಪ್ಪ ಅವರು ಎದುರಿಸಿದ್ದ ಸಂಕಷ್ಟವನ್ನೇ ಇಂದು ಸಿದ್ದರಾಮಯ್ಯ ಎದುರಿಸುತ್ತಿದ್ದಾರೆ. ಒಂದೆಡೆ ವಯಸ್ಸು ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯಕ್ಕೆ ಅಡ್ಡಗಾಲು ಹಾಕಿದ್ರೆ, ಮೂಡಾ ಹಗರಣ ಸಿದ್ದರಾಮಯ್ಯ ಅವರನ್ನು ರಾಜಕೀಯದಿಂದಲೇ ದೂರ ಇಡುತ್ತಾ ಅನ್ನೋ ಕುತೂಹಲ ಹುಟ್ಟುಹಾಕಿದೆ.
Muda scandal: Can CM Siddaramaiah resign after High Court Order ?