ಬಳ್ಳಾರಿ : Rahul Gandhi on tanning : ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ತಿದೆ ಎಂಬ ಕಹಿಸತ್ಯವನ್ನು ಅರಿತಿರುವ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಮೂಲಕ ಎಲ್ಲೆಡೆ ಪಾದಯಾತ್ರೆಯನ್ನು ಮಾಡಿ ಕಾಂಗ್ರೆಸ್ ಪಕ್ಷದ ಬಗ್ಗೆ ಜನರಲ್ಲಿ ಮತ್ತೆ ವಿಶ್ವಾಸವನ್ನು ಮೂಡಿಸುವ ಪ್ರಯತ್ನವನ್ನು ಮಾಡ್ತಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯ ರಾಹುಲ್ ಗಾಂಧಿ ಕರ್ನಾಟಕದಲ್ಲಿಯೇ ಠಿಕಾಣಿ ಹೂಡಿದ್ದು ಭಾರತ್ ಜೋಡೋ ಯಾತ್ರೆಯಲ್ಲಿ ಮುಂದಾಳತ್ವ ವಹಿಸಿದ್ದಾರೆ. ನಿನ್ನೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆಗೆ ವಿರಾಮವನ್ನು ನೀಡಲಾಗಿತ್ತು. ಆದರೆ ಇಂದು ಈ ಭಾರತ್ ಜೋಡೋ ಯಾತ್ರೆ ಮತ್ತೆ ಕಿಕ್ಸ್ಟಾರ್ಟ್ ಪಡೆದುಕೊಂಡಿದೆ.
ಭಾರತ್ ಜೋಡೋ ಯಾತ್ರೆ ಅಂದಮೇಲೆ ಬಿಸಿಲು ಗಾಳಿ ಎನ್ನದೇ ಪಾದಯಾತ್ರೆಯಲ್ಲಿ ಭಾಗಿಯಾಗಬೇಕು. ಇದೇ ರೀತಿ ಪಾದಯಾತ್ರೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರಾಹುಲ್ ಗಾಂಧಿಗೆ ಸ್ಥಳೀಯರು ನೀವು ಬಿಸಿಲಿನಿಂದ ಟ್ಯಾನ್ ಆಗೋದನ್ನು ಹೇಗೆ ತಪ್ಪಿಸಿಕೊಳ್ತೀರಿ ಎಂದು ಕೇಳಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ನಾನು ಯಾವುದೇ ರೀತಿಯ ಸನ್ಸ್ಕ್ರೀನ್ ಬಳಕೆ ಮಾಡುವುದಿಲ್ಲ. ನನ್ನ ತಾಯಿ ಪಾದಯಾತ್ರೆಗೆ ಹೊರಡುವ ಮುನ್ನ ನನಗೆ ಸನ್ಸ್ಕ್ರೀನ್ ನೀಡಿದ್ದರು. ಆದರೆ ಅವುಗಳನ್ನು ನಾನು ಬಳಸುತ್ತಿಲ್ಲ ಎಂದು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸ್ಥಳೀಯರೊಬ್ಬರು ನೀವು ಯಾವ ಸನ್ಸ್ಕ್ರೀನ್ ಬಳಸುತ್ತೀರಿ ಎಂದು ಕೇಳಿದರ ಜೊತೆಯಲ್ಲಿ ನಿಮ್ಮ ಮುಖ ಕೂಡ ಶೈನ್ ಆಗಿದೆ ಎಂದು ಹೊಗಳುತ್ತಿರೋದನ್ನು ಕಾಣಬಹುದಾಗಿದೆ.
Mr @RahulGandhi :
— Supriya Bhardwaj (@Supriya23bh) October 17, 2022
I don’t use sunscreen…
मेरी माँ ने मेरे लिए Sunscreen भेजी है लेकिन मैं इस्तेमाल नही करता pic.twitter.com/VTNTWHLHiZ
ರಾಹುಲ್ ಗಾಂಧಿ ಪ್ರಸ್ತುತ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಪಕ್ಷದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿಯೇ ಇದ್ದ ರಾಹುಲ್ ಗಾಂಧಿ ಬಳ್ಳಾರಿಯಲ್ಲಿ ಮತ ಚಲಾವಣೆ ಮಾಡಿದ್ದರು. ಬರೋಬ್ಬರಿ 24 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬಕ್ಕೆ ಸೇರದ ಓರ್ವ ವ್ಯಕ್ತಿ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.
ಇದನ್ನೂ ಓದಿ : Diwali Bonus For Central Govt Employees : ದೀಪಾವಳಿಯ ಗಿಫ್ಟ್ : ಸರಕಾರಿ ನೌಕರರ ತುಟ್ಟಿಭತ್ಯೆ ಶೇ.38ಕ್ಕೆ ಏರಿಕೆ
My mother sent me sunscreen, but I don’t use it: Rahul Gandhi on tanning