ಹಾವೇರಿ : ಉಕ್ರೇನ್ ನಲ್ಲಿ ಶಿಕ್ಷಣ ಪಡೆಯಲು ತೆರಳಿ ರಷ್ಯಾ ದಾಳಿಯಲ್ಲಿ ಸಾವನ್ನಪ್ಪಿದ ಹಾವೇರಿ ಮೂಲದ ನವೀನ್ (Naveen death Ukraine) ಮೃತದೇಹ ಮುಂದಿನ ಎರಡು ದಿನಗಳಲ್ಲಿ ಭಾರತಕ್ಕೆ ಬರಲಿದೆ ಎಂದು ಸಂಸದ ಶಿವಕುಮಾರ್ ಉದಾಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ಖಾರ್ಖಿವ್ ಪ್ರದೇಶಕ್ಕೆ ತೆರಳಿದ್ದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಮಗನ ಬರುವಿಕೆಗಾಗಿ ಕಾದಿದ್ದ ಕುಟುಂಬಸ್ಥರು ಮಗನ ಸಾವಿನ ಸುದ್ದಿ ಯಿಂದ ಕಂಗಲಾಗಿದ್ದಾರೆ.
ಈ ಸುದ್ದಿ ತಿಳಿದಾಗಿನಿಂದ ಕಣ್ಣೀರಿಡುತ್ತಿರುವ ನವೀನ್ ಕುಟುಂಬಸ್ಥರು, ನನ್ನ ಪುತ್ರನಂತೂ ಸುರಕ್ಷಿತವಾಗಿ ಕರೆ ತರಲಿಲ್ಲ. ಕನಿಷ್ಠ ಆತನ ಮೃತದೇಹವನ್ನಾದರೂ ತರಿಸಿಕೊಡಿ ಎಂದು ರಾಜಕಾರಣಿಗಳು, ಸರ್ಕಾರದ ಮುಂದೇ ಮನವಿ ಮಾಡಿದ್ದಾರೆ. ನವೀನ್ (Naveen death Ukraine) ಕುಟುಂಬಸ್ಥರ ಬೇಡಿಕೆಗೆ ಸ್ಪಂದಿಸಿದ ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಬುಧವಾರ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಿದ್ದಾರೆ.
ಭೇಟಿ ನಡೆಸಿ ನವೀನ್ ಮೃತದೇಹವನ್ನು ಭಾರತಕ್ಕೆ ತರಿಸಿಕೊಡುವಂತೆ ಮನವಿ ಮಾಡಿದ್ದಾರೆ. ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆಮಾತನಾಡಿದ ಸಂಸದ ಶಿವಕುಮಾರ್ ಉದಾಸಿ, ಮಂಗಳವಾರ ನಾನುನವೀನ್ ಕುಟುಂಬವನ್ನು ಭೇಟಿ ಮಾಡಿದ್ದೆ. ಈ ವೇಳೆ ನವೀನ್ ಕುಟುಂಬಸ್ಥರು ಮೃತದೇಹವನ್ನು ತರಿಸಿ ಕೊಡುವಂತೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ನಾನು ವಿದೇಶಾಂಗ ಸಚಿವರನ್ನು ಭೇಟಿಮಾಡಿ ಮನವಿ ಮಾಡಿದ್ದೇನೆ. ಜೈಶಂಕರ್ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಉಕ್ರೇನ್ ಮತ್ತು ರಷ್ಯಾ ಎರಡೂ ಕಡೆಯಿಂದಲೂ ಪ್ರಯತ್ನ ಮಾಡುವ ಭರವಸೆ ನೀಡಿದ್ದಾರೆ. ಹೇಗೆ ತರಬಹುದು ಎಂಬುದರ ಬಗ್ಗೆ ರಾಯಭಾರ ಕಚೇರಿ ಬಳಿ ಚರ್ಚೆ ನಡೆಸಿದ್ದಾರೆ. ಒಂದೆರಡು ದಿನಗಳಲ್ಲಿ ಮೃತದೇಹ (Naveen death Ukraine)ತರುವ ಸಾಧ್ಯತೆ ಇದೆ ಎಂದಿದ್ದಾರೆ.
ನವೀನ್ ಬಾಂಬ್ ದಾಳಿಯಲ್ಲಿ ಸತ್ತಿಲ್ಲ. ಹಾಗೆ ಸತ್ತಿದ್ದರೇ ಅವರ ಮೃತದೇಹ ಚೂರು ಚೂರಾಗಿರುತ್ತಿತ್ತು. ಆದರೆ ಶೆಲ್ ದಾಳಿ ವೇಳೆ ಯಾವುದೋ ಬಲವಾದ ಮೆಟಲ್ ಬಡಿದಿರುವ ಸಾಧ್ಯತೆ ಇದೆ. ಅದರಿಂದಲೇ ಸಾವು ಸಂಭವಿಸಿರಬೇಕು ಎಂದು ರಾಯಭಾರ ಕಚೇರಿಯ ಅಧಿಕಾರಿಗಳು ಸಚಿವಜೈಶಂಕರ್ ಅವರಿಗೆ ತಿಳಿಸಿದ್ದಾರೆ. ಈ ವಿಷಯವನ್ನು ಜೈಶಂಕರ್ ಅವರು ನಮ್ಮೊಂದಿಗೆ ಹಂಚಿಕೊಂಡರು ಎಂದು ಶಿವಕುಮಾರ್ ಉದಾಸಿ ಮಾಹಿತಿ ನೀಡಿದ್ದಾರೆ. ಅಲ್ಲದೇ ರಸ್ತೆ ಮಾರ್ಗವಾಗಿ ಗಡಿ ಪ್ರದೇಶಕ್ಕೆ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಬಸ್ ನಲ್ಲಿ ವಿದ್ಯಾರ್ಥಿಗಳು ತೆರಳುತ್ತಿರುವ ವೇಳೆ ದಾಳಿ ನಡೆಸದಂತೆ ರಷ್ಯಾಗೆ ಮನವಿ ಮಾಡಲಾಗಿದೆ ಎಂದು ಉದಾಸಿ ಮಾಹಿತಿ ನೀಡಿದ್ದಾರೆ.
ಇಂದು ನವದೆಹಲಿಯಲ್ಲಿ, ಭಾರತದ ವಿದೇಶಾಂಗ ಸಚಿವರಾದ ಶ್ರೀ @DrSJaishankar ಅವರನ್ನು @BJP4India ದ ವಿದೇಶಾಂಗ ವಿಭಾಗದ ಉಸ್ತುವಾರಿಗಳಾದ ಶ್ರೀ @vijai63 ಅವರೊಂದಿಗೆ ಭೇಟಿ ಮಾಡಿ, ರಷ್ಯಾ – ಉಕ್ರೇನ್ ಸಂಘರ್ಷದಲ್ಲಿ ಮೃತನಾದ ನಮ್ಮ ಹಾವೇರಿ ಜಿಲ್ಲೆಯ ನವೀನ್ ಗ್ಯಾನಗೌಡ್ರ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಂದು
— Shivkumar Udasi (@shivkumarudasi) March 2, 2022
1/ pic.twitter.com/LOxRnzzC9R
ಇದನ್ನೂ ಓದಿ : ಹಾಸ್ಯನಟನಾಗಿದ್ದ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಅಧ್ಯಕ್ಷರಾದರು! ಇವರು ಸಾಮಾಜಿಕ ಜಾಲತಾಣದಿಂದಲೇ ಮತಗಿಟ್ಟಿಸಿದ ಗಟ್ಟಿಗಾರ
ಇದನ್ನೂ ಓದಿ : ಭಾರತೀಯರು ವೈದ್ಯಕೀಯ ಶಿಕ್ಷಣಕ್ಕೆ ಉಕ್ರೇನ್ ನನ್ನೇ ಆಯ್ಕೆ ಮಾಡ್ತಿರೋದ್ಯಾಕೆ ! ಇಲ್ಲಿದೆ ಉತ್ತರ
(Naveen death Ukraine body to be returned home in two days: MP Sivakumar Udasi)