ಬೆಂಗಳೂರು : ರಾಜ್ಯದಲ್ಲಿ ಮದ್ಯ ಪ್ರಿಯರಿಗೆ ಶಾಕ್ (No liquor ) ಕಾದಿದ್ದು, ಸರ್ಕಾರದ ನೀತಿ ಖಂಡಿಸಿ ಮದ್ಯ ಮಾರಾಟಗಾರರು ಕೆಸಿಬಿಸಿಎಲ್ ನಲ್ಲಿ ಮದ್ಯ ಖರೀದಿಸದೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಬಿಯರ್ ಸೇರಿದಂತೆ ಅಗತ್ಯ ಬ್ರ್ಯಾಂಡ್ ಗಳ ಮದ್ಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಇಂದಿನ ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ವ್ಯತ್ಯಯವಾಗಲಿದೆ.
ಸರಕಾರ ಹೊಸದಾಗಿ ಆರಂಭ ಮಾಡಿರುವ ಈ- ಇಂಡೆಂಟ್ ವ್ಯವಸ್ಥೆ ವಿರುದ್ದ ಮದ್ಯ ಖರೀದಿಗಾರರು ಮುಷ್ಕರಕ್ಕೆ ಸಿದ್ಧವಾಗಿದ್ದಾರೆ. ಈ ಮೊದಲು ಸರಳವಾಗಿದ್ದ ಮದ್ಯ ಸರಬರಾಜು ವ್ಯವಸ್ಥೆಯನ್ನು ಸರ್ಕಾರ ಆನ್ಲೈನ್ ಗೆ ಬದಲಾಯಿಸಿದೆ. ಏಪ್ರಿಲ್ 4 ರಿಂದ ಜಾರಿಯಾಗಿರುವ ವಿನೂತನ ವ್ಯವಸ್ಥೆಗೆ ಮದ್ಯ ಮಾರಾಟಗಾರರ ವಿರೋಧ ವ್ಯಕ್ತಪಡಿಸಿದ್ದರು.
ಈ ವ್ಯವಸ್ಥೆ ಪ್ರಕಾರ ಎಪ್ರಿಲ್ ನಾಲ್ಕರಿಂದ ಹೊಸ ಪದ್ಧತಿ ಪ್ರಕಾರ ವೆಬ್ ಸೈಟಿಗೆ ಹೋಗಿ ಬೇಕಾದ ಮದ್ಯಗಳ ವಿವರವನ್ನು ಅಪ್ಲೋಡ್ ಮಾಡಬೇಕು ಅದರಲ್ಲೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ಅಪ್ಲೋಡ್ ಮಾಡಲು ಅವಕಾಶವಿದೆ.ಇದೇ ಸಂದರ್ಭದಲ್ಲಿ ಸರ್ವರ್ ಕೈಕೊಟ್ಟರೆ ಸಮಸ್ಯೆ. ಈ ವ್ಯವಸ್ಥೆಯಿಂದ ಗ್ರಾಹಕರ ಬೇಡಿಕೆಯ ಮದ್ಯ ಗಳನ್ನು ಪಡೆಯಲು ಸನ್ನದು ದಾರರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಸದ್ಯ ಏಪ್ರಿಲ್-ಮೇ ತಿಂಗಳಲ್ಲಿ ಮದ್ಯಕ್ಕೆ ವಿಪರೀತ ಬೇಡಿಕೆ ಅನೇಕ ಶುಭಕಾರ್ಯಗಳು, ಪಾರ್ಟಿಗಳು, ಸಂಭ್ರಮಾಚರಣೆಗಳು ನಡೆಯುವುದರಿಂದ ಗ್ರಾಹಕರ ಬೇಡಿಕೆ ಹೆಚ್ಚಿದೆ.
ಹೊಸ ವ್ಯವಸ್ಥೆಯಿಂದ ಗ್ರಾಹಕರ ಬೇಡಿಕೆಗೆ ಸರಬರಾಜು ಆಗುವ ಮದ್ಯಕ್ಕೂ ತಾಳೆಯಾಗುವುದಿಲ್ಲ. ಜನರ ಬೇಡಿಕೆಯ ಮದ್ಯ ನೂತನ ವ್ಯವಸ್ಥೆಯಲ್ಲಿ ಸುಲಭವಾಗಿ ಸಿಗುತ್ತಿಲ್ಲ ರಾತ್ರಿಯಿಡೀ ಕಾದು ಕುಳಿತು ಹೊಸ ಇಂಡೆಂಟ್ ಹಾಕುವ ಸ್ಥಿತಿ ಇದೆ. ಇದೆಲ್ಲದರಿಂದ ಬೇಸತ್ತ ಮದ್ಯ ಮಾರಾಟಗಾರರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಶೇಕಡ 80ರಷ್ಟು ಸಣ್ಣ ಸನ್ನದುದಾರರು ತೊಂದರೆ ಅನುಭವಿಸುತ್ತಿದ್ದು ಮೇ 6 ನೇ ತಾರೀಖಿನಿಂದ ಹಂತಹಂತವಾಗಿ ಹೋರಾಟ ಆರಂಭಿಸಲು ನಿರ್ಧರಿಸಿದ್ದಾರೆ. ಮೇ 6ರಂದು ಗುಲ್ಬರ್ಗ ವಿಭಾಗದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ ಮೇ 10ರಂದು, ಹೊಸಪೇಟೆ ವಿಭಾಗದ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಮತ್ತು ಬೆಳಗಾವಿ ವಿಭಾಗದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ ,ಬಿಜಾಪುರ, ಧಾರವಾಡ, ಹಾವೇರಿ ಮೇ 12ರಂದು, ಮೈಸೂರು ವಿಭಾಗದ ಜಿಲ್ಲೆಗಳಾದ ಮೈಸೂರು ,ಚಿಕ್ಕಮಗಳೂರು, ಹಾಸನ ,ಮಂಡ್ಯ ,ಮತ್ತು ಮಂಗಳೂರು ವಿಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ,ಉಡುಪಿ, ಉತ್ತರಕನ್ನಡ ಜಿಲ್ಲೆಯಲ್ಲಿ ಮದ್ಯ ಸ್ಥಗಿತವಾಗಲಿದೆ.
ಇನ್ನು ಮೇ 17ರಂದು ಬೆಂಗಳೂರು ವಿಭಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಮೇ 19ರಂದು ಬೆಂಗಳೂರು ನಗರ ವಿಭಾಗದ ಕೆ ಎಸ್ ಬಿ ಸಿ ಎಲ್ ಡಿಪೋಗಳಲ್ಲಿ ಮಧ್ಯ ಖರೀದಿ ಸ್ಥಗಿತ ಹೀಗೆ ಮೇ 19 ರ ವರೆಗೂ ವಿವಿಧ ಜಿಲ್ಲೆಗಳಲ್ಲಿ ವಿಭಾಗವಾರು ಮದ್ಯ ಖರೀದಿ ಸ್ಥಗಿತ ಮಾಡಲಾಗುತ್ತಿದೆ ಎಂದು ಮದ್ಯ ಮಾರಾಟ ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ಸಿಗರೇ ಬಂಧನಕ್ಕೊಳಗಾಗುತ್ತಿದ್ದಾರೆ : ಸಿಎಂ ಬೊಮ್ಮಾಯಿ
ಇದನ್ನೂ ಓದಿ : ಹ್ಯುಬ್ಲೋಟ್ ವಾಚ್ ಹಿಂದಿನ ಕತೆ ಹೇಳಿದ ಸಿದ್ದರಾಮಯ್ಯ
No liquor available in the Karnataka state from today onwards