ಬೆಂಗಳೂರು : (Ganeshotsav at Chamarajpet Idga) ಚಾಮರಾಜಪೇಟೆ ಈದ್ಗಾ ಮೈದಾನದ ಮಾಲಿಕತ್ವ ವಿವಾದ ಕೊನೆಗೊಂಡ ಬೆನ್ನಲ್ಲೇ, ಈಗ ಗಣೇಶೋತ್ಸವ ವಿವಾದ ಭುಗಿಲೆದ್ದಿದೆ. ಚಾಮರಾಜಪೇಟೆ ನಾಗರೀಕರ ಒಕ್ಕೂಟ ಗಣೇಶ ಸ್ಥಾಪನೆಗೆ ಅವಕಾಶ ಕೇಳಿದ್ದರೇ, ಸ್ಥಳೀಯ ಮುಸ್ಲಿಂ ಸಂಘಟನೆಗಳು ಹಾಗೂ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿವಾದ ಪ್ರತಿನಿತ್ಯ ಹೊಸ ಹೊಸ ತಿರುವು ಪಡೆಯುತ್ತಿದ್ದು, ಸರ್ಕಾರಕ್ಕೆ ಗಣೇಶೋತ್ಸವದ ಸಂಕಷ್ಟ ಕಾಡುತ್ತಿದೆ. ಈ ಮಧ್ಯೆ ಈಗ ಚಾಮರಾಜಪೇಟೆ ನಾಗರೀಕ ಒಕ್ಕೂಟದ ಗಣೇಶೋತ್ಸವ ಬೇಡಿಕೆಗೆ ಮತ್ತಷ್ಟು ಬಲಬಂದಿದ್ದು, ಗಣೇಶೋತ್ಸವಕ್ಕೆ ಅವಕಾಶ ನೀಡುವಂತೆ ಸಿಎಂಗೆ ಸಿ.ಟಿ.ರವಿ ಒತ್ತಾಯಿಸಿದ್ದಾರೆ.
ಈದ್ಗಾ ಮೈದಾನದ ಮಾಲಿಕತ್ವದ ವಿವಾದ ಜೋರಾಗಿತ್ತು. ಈ ವೇಳೆ ವಕ್ಪ್ ಬೋರ್ಡ್ ಮಾಲಿಕತ್ವದ ದಾಖಲೆ ಒದಗಿಸುವಲ್ಲಿ ವಿಫಲರಾಗಿದ್ದರಿಂದ ಬಿಬಿಎಂಪಿ ಈದ್ಘಾ ಮೈದಾನವನ್ನು ಕಂದಾಯ ಇಲಾಖೆಯ ಆಸ್ತಿ ಎಂದು ಘೋಷಿಸಿದೆ. ಇದರ ಬೆನ್ನಲ್ಲೇ, ಚಾಮರಾಜಪೇಟೆ ನಾಗರೀಕ ಒಕ್ಕೂಟ ಈದ್ಘಾ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿತ್ತು.ಆದರೆ ಇದಕ್ಕೆ ಸರಕಾರ ಅನುಮತಿ ನೀಡೋದು ಅನುಮಾನ ಎನ್ನಲಾಗ್ತಿದೆ.
ಯಾಕೆಂದರೇ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಾಗರೀಕರ ಒತ್ತಡಕ್ಕೆಮಣಿದು ಗಣೇಶೋತ್ಸವಕ್ಕೆ ಅವಕಾಶ ನೀಡಿದರೇ ರಾಜ್ಯದ ಎಲ್ಲೆಡೆಯೂ ಇದೇ ವಿವಾದ ತಲೆದೋರುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಗಣೇಶೋತ್ಸವಕ್ಕೆ ಅವಕಾಶ ನೀಡೋದು ಅನುಮಾನ ಎನ್ನಲಾಗ್ತಿದೆ. ಆದರೆ ಬೆಂಗಳೂರು ಗಣೇಶೋತ್ಸವ ಸಮಿತಿ, ಚಾಮರಾಜಪೇಟೆ ನಾಗರೀಕ ವೇದಿಕೆ,ಹಿಂದೂ ಸಂಘಟನೆಗಳು ಗಣೇಶೋತ್ಸವ ಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಆಗ್ರಹಿಸುತ್ತಿವೆ. ಈಗ ಹಿಂದೂ ಸಂಘಟನೆಗಳ ಒತ್ತಡಕ್ಕೆ ಮತ್ತಷ್ಟು ಬಲ ಬಂದಿದೆ.
ಬಿಜೆಪಿಯ ಹಿರಿಯ ನಾಯಕ ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ.ಟಿ.ರವಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕಲ್ಪಿಸುವಂತೆ ಸಿಎಂಗೆ ಪತ್ರ ಬರೆದಿದ್ದಾರೆ. ಚಾಮರಾಜಪೇಟೆ ನಾಗರೀಕ ಒಕ್ಕೂಟದ ಅಧ್ಯಕ್ಷರಾದ ರಾಮೇಗೌಡರು ಸಿ.ಟಿ.ರವಿಗೆ ಪತ್ರ ಬರೆದು ಗಣೇಶೋತ್ಸವಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಸಿ.ಟಿ.ರವಿ, ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶೋತ್ಸವ ನಡೆಸಲು ಅನುಮತಿ ಕೋರಿರುವ ರಾಮೇಗೌಡರ ಮನವಿಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಗಣೇಶೋತ್ಸವಕ್ಕೆ ಅವಕಾಶ ಕಲ್ಪಿಸಿ ಎಂದು ಸಿ.ಟಿ.ರವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಹೀಗಾಗಿ ಈಗ ಸರ್ಕಾರಕ್ಕೆ ಇಕ್ಕಟ್ಟಿನ ಸ್ಥಿತಿ ಎದುರಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಗಮನಿಸಬೇಕೋ ಅಥವಾ ಪಕ್ಷದ ವರಿಷ್ಠರ ಮಾತನ್ನು ಪರಿಗಣಿಸಬೇಕೋ ಎಂಬ ದ್ವಂದ್ವ ಸಿಎಂ ಬೊಮ್ಮಾಯಿಗೆ ಎದುರಾಗಿದೆ.
ಇದನ್ನೂ ಓದಿ : ಜನೋತ್ಸವ Vs ಕಾರ್ಯಕಾರಿಣಿ : ಮತ್ತೆ ಸಂಕಷ್ಟಕ್ಕೆ ಸಿಲುಕಿದ ಸಿಎಂ ಬೊಮ್ಮಾಯಿ
ಇದನ್ನೂ ಓದಿ : Siddaramaiah Private Security : ಮೊಟ್ಟೆ ಪ್ರಕರಣದ ಬಳಿಕ ಫುಲ್ ಅಲರ್ಟ್: ಖಾಸಗಿ ಭದ್ರತೆ ಪಡೆಯಲು ಸಿದ್ದರಾಮಯ್ಯ ಪ್ಲ್ಯಾನ್
Opportunity for Ganeshotsav at Chamarajpet Idga Maidan CT Ravi letter to CM