ಬೆಂಗಳೂರು : ಪಂಚಮಶಾಲಿ ಸಮಾಜದ ಮೂರನೇ ಪೀಠ ( Panchamasali peeta controversy) ಸ್ಥಾಪನೆ ವಿಚಾರ ವಿವಾದಕ್ಕೆ ಕಾರಣವಾಗಿದ್ದು ಮೂರನೇ ಪೀಠ ಅಸ್ತಿತ್ವಕ್ಕೆ ತರಲು ಕಾರಣವಾದ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಪಂಚಮಶಾಲಿ ಪೀಠದ ಸ್ವಾಮೀಜಿಗಳು ಹಾಗೂ ಸಮಾಜದ ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಯ ಮೃತ್ಯುಂಜಯ ಶ್ರೀಗಳು ಮೂರನೇ ಪೀಠ ಸ್ಥಾಪನೆಗೆ ನನ್ನ ಬೆಂಬಲವಿದೆ ಎಂದು ನಿರಾಣಿ ಹೇಳಿದ್ದಾರೆ.
ಮುರುಗೇಶ್ ನಿರಾಣಿ ಮಾತಿನಿಂದ ನನಗೆ ತುಂಬ ಬೇಸರವಾಗಿದೆ ನಮ್ಮ ಪೀಠದ ಎಲ್ಲರನ್ನೂ ಒಟ್ಟಿಗೆ ಸೇರಿಕೊಂಡು ಹೋಗುತ್ತೇವೆ.ಆದರೆ ಈ ವರ್ತನೆಯಿಂದ ಸಮಾಜ ಒಡೆದು ಹೋಗುತ್ತದೆ. ನೀವು ಎಂಎಲ್ಎ ,ಸಿಎಂ ಆಗಬೇಕಾ, ಜಿಲ್ಲೆಗೊಂದು, ತಾಲೂಕಿಗೊಂದು, ಗ್ರಾಮ ಪಂಚಾಯತಿಗೊಂದ ಪೀಠ ಮಾಡಿಕೊಳ್ಳಿ ನಾನು ಬೇಡ ಎನ್ನುವುದಿಲ್ಲ ಎಂದು ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ನಿರಾಣಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಶ್ರೀಗಳು ಮನೆಗೊಂದೊಂದು ಪೀಠ ಮಾಡಿಕೊಳ್ಳಿ ಬೇಡ ಎನ್ನಲ್ಲ,ಆದ್ರೆ ನಿಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಳಸಿಕೊಳ್ಳಬೇಡಿ. ಯಾಕೆಂದರೆ ಸಮಾಜವನ್ನು ಒಗ್ಗೂಡಿಸಲು ನಾನು, ಯತ್ನಾಳ, ಕಾಶಪ್ಪನವರು ಹೋರಾಟ ಮಾಡಿದ್ದೇವೆ ಎಂದಿದ್ದಾರೆ.
ನಾವು ನಿರಂತರ ಹೋರಾಟ ಮಾಡಿದ್ದೇವೆ.ಮೀಸಲಾತಿ ಸಿಕ್ಕಿಬಿಟ್ಟರೇ ಜಯ ಮೃತ್ಯುಂಜಯ ಶ್ರೀಗಳಿಗೆ, ಕಾಶಪ್ಪನವರಿಗೆ, ಯತ್ನಾಳರಿಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಅವರಿಗೆ ಆತಂಕ ಶುರುವಾಗಿದೆ. ಅವರು ಭಾವಿಸಿರಬಹುದು ನಾನು, ಕಾಶಪ್ಪನವರು, ಯತ್ನಾಳ ಭಯ ಪಟ್ಟು ಹಿಂದೆ ಸರಿಯುತ್ತಾರೆ ಅಂತ ಮೂರನೇ ಪೀಠ ಸ್ಥಾಪನೆಗೆ ನಾವು ಹೆದರುತ್ತೇವೆ ಎಂದು ಅವರು ತಿಳಿದುಕೊಂಡಿದ್ದಾರೆ ಎಂದು ಸ್ವಾಮೀಜಿಗಳು ನೇರವಾಗಿ ಆರೋಪಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಜಯಮೃತ್ಯುಂಜಯ ಶ್ರೀಗಳು ಸಮಾಜ ಕುಗ್ಗಿಸುವ ಕೆಲಸ ಮಾಡಬೇಡಿ. ಸಮಾಜ ಕಟ್ಟುವ ಕೆಲಸ ನಾವು ಮಾಡ್ತೇವೆ.ನೀವು ಏನು ಬೇಕಾದರೂ ಮಾಡಿಕೊಳ್ಳಿಸರ್ಕಾರದ ಅನುದಾನವನ್ನ ವಾಪಸ್ ಕೊಟ್ಟಿದ್ದೇವೆ.ನಮಗೆ ಮೀಸಲಾತಿ ಮುಖ್ಯ ಎಂದು ಹೊರಟಿದ್ದೇವೆ.ನಿಮ್ಮಸ್ವಾರ್ಥಕ್ಕೆ ಮಠ ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದರು.
ಇದೇ ವೇಳೆ ಮಾತನಾಡಿದ ಪಂಚಮಶಾಲಿ ನಾಯಕ ವಿಜಯಾನಂದ ಕಾಶಪ್ಪನವರು, ಸಿಎಂ ಸ್ಥಾನಕ್ಕಾಗಿ ಸಚಿವ ನಿರಾಣಿ ಸಮಾಜವನ್ನು ಬಳಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆದರೆ ಮುಂದೇ ಅವರ ಸಚಿವ ಸ್ಥಾನವೇ ನಿಲ್ಲೋದಿಲ್ಲ. ಇನ್ನು ಸಿಎಂ ಆಗೋದು ಎಲ್ಲಿಂದ ಸಾಧ್ಯ ಎಂದಿದ್ದಾರೆ. ಇತ್ತೀಚಿಗಷ್ಟೇ ಸಚಿವ ನಿರಾಣಿ , ಮೂರನೇಪೀಠ ಸ್ಥಾಪನೆ ಮಾಡಿದ್ದು, ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದ್ದರು. ಈಗ ಈ ವಿಚಾರ ಪಂಚಮಶಾಲಿ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ : Former PM HD Deve Gowda : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆಸ್ಪತ್ರೆಗೆ ದಾಖಲು
ಇದನ್ನೂ ಓದಿ : ಬೆಂಗಳೂರಲ್ಲಿ ನೀರಿನ ದರ ಏರಿಕೆ ಶಾಕ್ : ಸರಕಾರಕ್ಕೆ ದರ ಏರಿಕೆ ಪ್ರಸ್ತಾಪ ಸಲ್ಲಿಸಿದ ಜಲಮಂಡಳಿ
( Panchamasali third Peeta controversy, minister Murugesh Nirani vs Basava Jaya Mruthyunjaya Swamiji )