ಹಾವೇರಿ : 10 ವರ್ಷದ ಬಾಲಕನೋರ್ವ ಆಟವಾಡುತ್ತಿದ್ದ ವೇಳೆಯಲ್ಲಿ ಮೊಬೈಲ್ ಬ್ಯಾಟರಿ ಸ್ಪೋಟಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.

ಕಾರ್ತಿಕ್ ( 10 ವರ್ಷ) ಎಂಬಾತನೇ ಗಾಯಗೊಂಡ ಬಾಲಕ. ಮನೆಯ ಪಕ್ಕದಲ್ಲಿ ಕಾರ್ತಿಕ್ ಆಟವಾಡುತ್ತಿದ್ದ. ಈ ವೇಳೆಯಲ್ಲಿ ಮೊಬೈಲ್ ಬ್ಯಾಟರಿಯೊಂದು ಸಿಕ್ಕಿದೆ. ಬಾಲಕ ಬ್ಯಾಟರಿಯನ್ನು ಕೈ ಹಿಡಿದು ಆಟವಾಡಲು ಶುರುಮಾಡಿದ್ದಾನೆ. ಈ ವೇಳೆಯಲ್ಲಿ ಬ್ಯಾಟರಿ ಸ್ಪೋಟಗೊಂಡಿದೆ.
ಇದನ್ನೂ ಓದಿ : ಕೊರೊನಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ ..?
ಘಟನೆಯಲ್ಲಿ ಕಾರ್ತಿಕ ಮುಖ ಹಾಗೂ ಕೈಗೆ ಗಾಯವಾಗಿದೆ. ಕೂಡಲೇ ಬಾಲಕನನ್ನು ಸವಣೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಇನ್ನು ಹಳೆಯ ಬ್ಯಾಟರಿ ಆಗಿದ್ದರಿಂದ ಸ್ಪೋಟಗೊಂಡಿದೆ ಎನ್ನಲಾಗುತ್ತಿದೆ.