Prajwal Revanna Pen Drive Case : ಮಹಿಳೆಗೆ ಲೈಂಗಿಕ ಕಿರುಕುಳ ಹಾಗೂ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧದ ಪೆನ್ ಡ್ರೈವ್ ಪ್ರಕರಣದ ಹಿನ್ನೆಲೆಯಲ್ಲಿ ವಕೀಲ ದೇವರಾಜೇಗೌಡ ಸದ್ಯ ಎಸ್ಐಟಿ ಕಸ್ಟಡಿಯಲ್ಲಿ ಇದ್ದಾರೆ. ಹೀಗೆ ಕಸ್ಟಡಿಯಲ್ಲಿ ಇದ್ದಾಗಲೇ ತಮ್ಮ ಮೇಲೆ ಡಿಸಿಎಂ ಡಿ.ಕೆ.ಶಿವಕುಮಾರ್ ದ್ವೇಷ ಸಾಗಿಸುತ್ತಿದ್ದು, ಅವರು ನೀಡಿದ ಹಣ ಹಾಗೂ ಆಫರ್ ಸ್ವೀಕರಿಸದಿರೋದಕ್ಕೆ ಡಿಸಿಎಂ ನನ್ನ ಮೇಲೆ ದ್ವೇಷ ಸಾಧಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ನನ್ನ ಮೇಲೆ ಲೈಂಗಿಕ ಕಿರುಕುಳ ಕೇಸ್ ಹಾಕ್ಸಿದ್ರು ಅದರಲ್ಲಿ ಎವಿಡೆನ್ಸ್ ಸಿಗಲಿಲ್ಲ. ಇದಾದ ಮೇಲೆ ರೇಪ್ ಕೇಸ್ ಹಾಕ್ಸಿದ್ರು,ಅದರಲ್ಲೂ ಸಾಕ್ಷ್ಯಿ ಸಿಗಲಿಲ್ಲ. ಈಗ ಏನಾದರೂ ಮಾಡಿ ದೇವರಾಜೇಗೌಡರನ್ನ ಮಟ್ಟಹಾಕು ಬೇಕು ಅಂತ ಹೇಳಿ ಈಗ ಪೆನ್‌ಡ್ರೈವ್ ಕೇಸ್‌ನಲ್ಲಿ ಲಾಕ್ ಮಾಡಿಸಿದ್ದಾರೆ. ಇದೆಲ್ಲಾಡಿ.ಕೆ.ಶಿವಕುಮಾರ್ ಕೈವಾಡ. ಮುಂದೆ ನನ್ನ ಕಾನೂನು ಹೋರಾಟ ಡಿ.ಕೆ.ಶಿವಕುಮಾರ್ ಜೈಲಿಗೆ ಕಳ್ಸೋದೆ. ಇದೆರೆಲ್ಲದರ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡ ಇದೆ ಎಂದುಬವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಪರಶುರಾಮ ಥೀಮ್ ಪಾರ್ಕ್ ಸುನಿಲ್ ಕುಮಾರ್ ಆಸ್ತಿಯಲ್ಲ, ಕಾರ್ಕಳದ ಆಸ್ತಿ, ಜನರೇ ತೀರ್ಮಾನ ಕೈಗೊಳ್ಳಿ : ಶಾಸಕ ಸುನಿಲ್ ಕುಮಾರ್
ಈ ಹಿಂದೆ ಸರ್ಕಾರದ ನಾಲ್ಕು ಸಚಿವರು ಈ ನನ್ನನ್ನು ಕರೆಸಿ ಮಾತನಾಡಿಸಿದ್ದರು. ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ, ಇನ್ನೊಬ್ಬ ಸಚಿವರು ನನಗೆ ಆಫರ್ ಕೊಟ್ರು.ನನಗೆ ನೂರು ಕೋಟಿ ಹಣದ ಆಫರ್ ನೀಡಿದ್ರು, ಅಡ್ವಾನ್ಸ್ ಆಗಿ 5 ಕೋಟಿ ಹಣವನ್ನ ಬೌರಿಂಗ್ ಕ್ಲಬ್ ಕಳಿಸಿದ್ದರು. ಆದರೆ ಅದನ್ನು ನಾನು ಒಪ್ಪಲಿಲ್ಲ ಅದಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ.
ಕುಮಾರಸ್ವಾಮಿ ಯನ್ನ ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿದ್ದಾರೆ. ಕಾರ್ತಿಕ್ ಹತ್ರಾ ಪೆನ್ ಡ್ರೈವ್ ತರಿಸಿಕೊಂಡು ಎಲ್ಲಾ ರೆಡಿ ಮಾಡಿದ್ದು ಡಿ.ಕೆ.ಶಿವಕುಮಾರ್. ನಾಲ್ಕು ಜನ ಮಂತ್ರಿಗಳ ಕಮಿಟಿ ಅಂತಾ ಹೇಳಿದ್ನಲ್ಲ, ಅದರಲ್ಲಿ ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಇನ್ನೊಬ್ಬ ಸಚಿವರನ್ನು ಹ್ಯಾಂಡಲ್ ಮಾಡೋದಕ್ಕೆ ಬಿಟ್ಟಿದ್ದಾರೆ. ಈಗ ನಿರಂತರವಾಗಿ ನನ್ನನ್ನು ಟಾರ್ಗೆಟ್ ಮಾಡಿದ್ರು, ನಾನು ಒಪ್ಪದೇ ಇದ್ದಾಗ ನನ್ನ ಮೇಲೆ ಪೊಲೀಸ್ ಬಳಸಿಕೊಂಡು ಟಾರ್ಗೆಟ್ ಮಾಡಿದ್ದಾರೆ ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.
ಇದನ್ನೂ ಓದಿ : Red Lipstick Ban : ಕೆಂಪು ಲಿಪ್ ಸ್ಟಿಕ್ ಬಳಸೋ ಮುನ್ನ ಎಚ್ಚರ: ನೀವು ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತೀರಿ ಹುಷಾರ್ !
ಇದೆಲ್ಲವೂ ಪ್ಲ್ಯಾನ್ ಮಾಡಿರೋದು. ಇಷ್ಟೆಲ್ಲಾ ದೊಡ್ಡ ಹಗರಣವಾಗಿರೋದ್ರಿಂದ ಮೋದಿಯವರಿಗೆ, ಬಿಜೆಪಿಗೆ ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರೋದಕ್ಕೆ ಮಾಡಿದ್ರು.ನಮಗೆ ಸುಮಾರು 100 ಕೋಟಿ ಆಫರ್ ಕೊಟ್ಟಿದ್ರು.ಅದ್ರಲ್ಲಿ 5 ಕೋಟಿ ಅಡ್ವಾನ್ಸ್ ಅನ್ನ ಬೋರಿಂಗ್ ಕ್ಲಬ್ ನ ರೂಂ ನಂಬರ್ 110 ಕ್ಕೆ ಕಳಿಸಿದ್ರು.

ಆ ಮೀಟಿಂಗ್ ಗೆ ಎಂಎ ಗೋಪಾಲಸ್ವಾಮಿ ಇದನ್ನಲ್ಲಾ, ಚನ್ನರಾಯಪಟ್ಟಣ ಗೋಪಾಲಸ್ವಾಮಿನ ಸಂಧಾನಕ್ಕೆ ಕಳಿಸಿದ್ರು ಐದು ಕೋಟಿ ಕ್ಯಾಶನ್ನೂ ಕೊಟ್ಟು ಕಳಿಸಿದ್ರು.100 ಕೋಟಿ ಆಫರ್ ಮಾಡಿದ್ದು ಡಿಕೆ ಶಿವಕುಮಾರ್ ಮೋದಿವರಿಗೆ ಕಳಂಕ ತರಬೇಕು, ಬಿಜೆಪಿಗೆ ಕೆಟ್ಟ ಹೆಸರು ತರಬೇಕು ಅನ್ನೋದು ಇವರೆಲ್ಲರ ಪ್ಲ್ಯಾನ್ ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.
ಇದನ್ನೂ ಓದಿ : HSRP Deadline: ಮೊದಲ ಸಲ 500, ಎರಡನೇ ಸಲ 1 ಸಾವಿರ ದಂಡ: ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಇಲ್ಲದವರಿಗೆ ಕಾದಿದೆ ಸಂಕಷ್ಟ
ಈ ಮೊದಲೇ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಟಿ ನಡೆಸಿದ್ದ ದೇವರಾಜೇ ಗೌಡ ಡಿ.ಕೆ.ಶಿ ವಿರುದ್ಧ ನೇರವಾಗಿ ಆರೋಪಿಸಿದ್ದರು. ಈಗ ಮತ್ತೊಮ್ಮೆ ಎಸ್ ಐ ಟಿ ಕಸ್ಟಡಿಯಲ್ಲಿ ಇದ್ದಾಗಲೇ ದೇವರಾಜೇಗೌಡ ಡಿಕೆಶಿಯತ್ತ ಬೆರಳು ತೋರಿದ್ದಾರೆ. ಮಾತ್ರವಲ್ಲ ಸಿದ್ಧರಾಮಯ್ಯ ಸಚಿವ ಸಂಪುಟದಲ್ಲಿರೋ ಹಲವು ಸಚಿವರ ಮೇಲೆ ಆರೋಪ ಮಾಡಿದ್ದಾರೆ. ದೇವರಾಜೇಗೌಡ ಈ ಆರೋಪ ಸರ್ಕಾರಕ್ಕೆ ತೀವ್ರ ಮುಜುಗರ ತರಲಿದ್ದು, ಬಿಜೆಪಿ ಇದನ್ನು ಅಸ್ತ್ರ ಮಾಡಿಕೊಳ್ಳಲು ಸಿದ್ಧವಾಗಿದೆ.
Prajwal Revanna Pen Drive Case DK Shivakumar Plan Devaraje Gowda Exclusive Statement