ಬೆಂಗಳೂರು : psi recruitment scam : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಗೆದಷ್ಟು ರಹಸ್ಯಗಳು ಹೊರ ಬರುತ್ತಲೇ ಇದೆ. ಸಿಐಡಿ ಅಧಿಕಾರಿಗಳು ಈ ಪ್ರಕರಣವನ್ನು ಭೇದಿಸುವತ್ತ ಗಮನ ನೆಟ್ಟಿದ್ದು ದಿನಕ್ಕೊಬ್ಬರು ಆರೋಪಿಗಳನ್ನು ಖೆಡ್ಡಾಗೆ ಕೆಡವುತ್ತಲೇ ಇದ್ದಾರೆ. ರಾಜಕೀಯ ಆರೋಪ – ಪ್ರತ್ಯಾರೋಪ, ಚುರುಕುಗೊಂಡ ತನಿಖೆ , ಅಭ್ಯರ್ಥಿಗಳ ಅಳಲು ಈ ಎಲ್ಲದರ ನಡುವೆ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಮೊದಲ ತಲೆದಂಡ ತೆತ್ತಿದ್ದಾರೆ. 1995ರ ಬ್ಯಾಚ್ನ ಅಮೃತ್ ಪೌಲ್ರನ್ನು ನೇಮಕಾತಿ ವಿಭಾಗದಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಆದೇಶದ ಬಳಿಕ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಇದೀಗ ಭದ್ರತಾ ದಳದ ಎಡಿಜಿಪಿಯಾಗಿ ವರ್ಗಾವಣೆಯಾಗಿದ್ದಾರೆ. ಹಾಗೂ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಆರ್. ಹಿತೇಂದ್ರರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಹೆಚ್ಚುವರಿ ಅಧಿಕಾರ ವಹಿಸಿಕೊಂಡಿರುವ ಆರ್.ಹಿತೇಂದ್ರ ಪ್ರಸ್ತುತ ಅಪರಾಧ ಹಾಗೂ ತಾಂತ್ರಿಕ ಸೇವೆ ವಿಭಾಗದ ಎಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈಗ ಅಮೃತ್ ಪೌಲ್ ನೇಮಕಾತಿ ವಿಭಾಗದಿಂದ ಭದ್ರತಾ ವಿಭಾಗಕ್ಕೆ ವರ್ಗಾವಣೆ ಹೊಂದಿರುವ ಹಿನ್ನೆಲೆಯಲ್ಲಿ ಹಿತೇಂದ್ರರಿಗೆ ಹೆಚ್ಚುವರಿ ಹೊಣೆಯೊಂದು ಹೆಗಲೇರಿದೆ.
ಪಿಎಸ್ಐ ನೇಮಕಾತಿ ಅಕ್ರಮದ ವಿಚಾರದಲ್ಲಿ ಆರೋಪಗಳ ಸುರಿಮಳೆಯನ್ನೇಗೈಯುತ್ತಿರುವ ಕಾಂಗ್ರೆಸ್ ನಾಯಕರು ಎಡಿಜಿಪಿ ಅಮೃತ್ ಪೌಲ್ ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡುತ್ತಲೇ ಬಂದಿದ್ದರು. ಅಮೃತ್ ಪೌಲ್ ವಿರುದ್ಧ ಕಾಂಗ್ರೆಸ್ ಆರೋಪದ ಬಳಿಕ ಇದೀಗ ಸರ್ಕಾರ ಈ ಕ್ರಮ ಕೈಗೊಂಡಿದೆ.
ಇದನ್ನು ಓದಿ : Graeme Smith : ಜನಾಂಗೀಯ ನಿಂದನೆ ಆರೋಪ ಮುಕ್ತರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್
ಇದನ್ನೂ ಓದಿ : SSLC Marks Card : ಎಸ್‌ಎಸ್‌ಎಲ್ ಸಿ ಅಂಕಪಟ್ಟಿಯಲ್ಲಿ ಶಾಲೆಗಳ ಹೆಸರು ನಮೂದಿಸಿ : ಹೈಕೋರ್ಟ್ ಆದೇಶ
psi recruitment scam karnataka government transfers ips officer amrit paul