PUC student Suicide : ಕೋಟ : ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಮಕ್ಕಳಿಗೆ ಮೊಬೈಲ್ ನೀಡುವುದು ಕಷ್ಟ, ನೀಡದಿದ್ರೂ ಕಷ್ಟ ಅನ್ನೋ ಪರಿಸ್ಥಿತಿ ಪೋಷಕರಿಗೆ ಎದುರಾಗಿದೆ. ತಾಯಿ ತನಗೆ ಮೊಬೈಲ್ (Mobile Phone) ನೀಡಲಿಲ್ಲ ಅನ್ನೋ ಕಾರಣಕ್ಕೆ ಕೋಪಗೊಂಡು ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ (Udupi) ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ (Sasthana) ದಲ್ಲಿ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಾಸ್ತಾನದ ಕುಂಬಾರಬೆಟ್ಟು ನಿವಾಸಿ ದಿನೇಶ್ ಮೊಗವೀರ ಅವರ ಪುತ್ರಿ ದಿಶಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡವಳು ಎಂದು ಗುರುತಿಸಲಾಗಿದೆ. ದಿಶಾ ಮನೆಯಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದಳು. ಈ ವೇಳೆ ತಾಯಿ ಮಗಳಿಗೆ ಬೈದು ಮಗಳಿಗೆ ಬುದ್ದಿ ಮಾತು ಹೇಳಿದ್ದಾರೆ. ಅಲ್ಲದೇ ಮಗಳ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡಿದ್ದರು.
Also Read : Dhootha sameer md : ಯಾರು ಈ ದೂತ ಸಮೀರ್ ಎಂಡಿ ? ಸೌಜನ್ಯಗೆ ಸಿಗುತ್ತಾ ನ್ಯಾಯ
ಇಷ್ಟಕ್ಕೆ ಕೋಪಗೊಂಡ ದಿಶಾ ಮನೆಯ ಕೋಣೆಗೆ ಬಾಗಿಲು ಹಾಕಿಕೊಂಡಿದ್ದಾಳೆ. ತಾಯಿ ಎಷ್ಟೇ ಕೇಳಿದ್ರೂ ಕೂಡ ಮಗಳು ಬಾಗಿಲು ತೆರೆಯಲೇ ಇಲ್ಲ. ಎಷ್ಟು ಹೊತ್ತಾದ್ರೂ ಬಾಗಿಲು ತೆಗೆಯದೇ ಇರುವುದರಿಂದ ಅನುಮಾನಗೊಂಡ ತಾಯಿ ಕಿಟಕಿಯಲ್ಲಿ ಪರಿಶೀಲಿಸಿದಾಗ ಕಿಟಕಿಯ ಕಂಬಿಗೆ ಹಗ್ಗ ಬಿಗಿದು ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿತ್ತು,
ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಬಾಲಕಿಯನ್ನು ರಕ್ಷಿಸಿದ್ದಾರೆ. ಜೀವನ್ ಮಿತ್ರಾ ನಾಗರಾಜ್ ಪುತ್ರನ್ ಹಾಗೂ ಕಿಶೋರ್ ಶೆಟ್ಟಿ ಅವರ ಸಹಕಾರದೊಂದಿಗೆ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗಮಧ್ಯದಲ್ಲಿ ಬಾಲಕಿ ಸಾವನ್ನಪ್ಪಿದ್ದಾಳ ಎಂದು ತಿಳಿದು ಬಂದಿದೆ.
Also Read : ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ -IPPB : ಪರೀಕ್ಷೆ ಇಲ್ಲದೇ ಉದ್ಯೋಗ, 30000 ರೂ. ವೇತನ
ಸ್ಥಳಕ್ಕೆ ಕೋಟ ಠಾಣೆ (Kota Police Station) ಯ ಪಿಎಸ್ಐ ಸುಧಾ ಪ್ರಭು, ಎಎಸ್‌ಐ ರವಿ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇವಲ ಮೊಬೈಲ್ ವಿಚಾರಕ್ಕೆ ವಿದ್ಯಾರ್ಥಿನಿಯೋರ್ವಳ ಪ್ರಾಣಪಕ್ಷಿ ಹಾರಿ ಹೋಗಿದ್ದು ಮಾತ್ರ ದುರಂತವೇ ಸರಿ.
PUC student commits suicide after not being given a mobile phone In Udupi Kota Kannada News