ಚಿತ್ರದುರ್ಗ : (Raped by CPI) ಚಿತ್ರದುರ್ಗದ ಚಳ್ಳಕೆರೆ ಠಾಣೆಯ ಸಿಪಿಐ ಉಮೇಶ್ ವಿರುದ್ಧ ಅತ್ಯಾಚಾರ ಪ್ರಕರಣ(Raped by CPI) ದಾಖಲಾಗಿದೆ. ಸಹಾಯ ನೆಪದಲ್ಲಿ ಯುವತಿಯನ್ನು ನಂಬಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆಯಲ್ಲಿ ಚಳ್ಳಕೆರೆ ಠಾಣೆಯ ಸಿಪಿಐ ಉಮೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸಿಪಿಐ ಉಮೇಶ್ ಕಳೆದ ಐದು ವರ್ಷದ ಹಿಂದೆ ದಾವಣಗೆರೆ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಿವೇಶನಕ್ಕೆ ಸಂಬಂಧಿಸಿದಂತೆ ಯುವತಿಗೆ ಉಮೇಶ್ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ(Raped by CPI) ಎಸಗಿದ್ದ. ಅಲ್ಲದೇ ತಾನು ಕರೆದಲ್ಲಿಗೆ ಬರಬೇಕು ಎಂದು ಆತ ಬೆದರಿಕೆಯೊಡ್ಡಿದ್ದ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಇನ್ನು ಸಿಪಿಐ ಉಮೇಶ್ ಯುವತಿಗೆ ಸಹೋದರ ಮಾವನ ಮಗನಾಗಬೇಕು.
ಇದನ್ನೂ ಓದಿ : Kantara America : ಅಮೇರಿಕಾದಲ್ಲೂ ದೈವಗಗ್ಗರದ ಅಬ್ಬರ : ಎಂಟೂವರೆ ಕೋಟಿ ಗಳಿಸಿದ ಕಾಂತಾರ
ಅತ್ಯಾಚಾರಕ್ಕೊಳಗಾದ ಯುವತಿ ಶಿವಮೊಗ್ಗದಲ್ಲಿ ಬಿಎಡ್ ವ್ಯಾಸಾಂಗ ಮಾಡುತ್ತಿದ್ದು, ಈ ವೇಳೆಯು ಉಮೇಶ್ ಶಿವಮೊಗ್ಗಕ್ಕೆ ಬಂದು ಅತ್ಯಾಚಾರವೆಸಗಿದ್ದಾರೆ. ಇದರಿಂದ ಯುವತಿಗೆ ಐದು ಭಾರಿ ಗರ್ಭಪಾತ ಮಾಡಿಸಿದ್ದಾನೆ. ಇನ್ನು ಸಿಪಿಐ ಉಮೇಶ್ ಗೆ ಈಗಾಗಲೆ ಎರಡು ಮದುವೆಯಾಗಿದ್ದು, ಈಕೆಯನ್ನು ತನ್ನ ಮೂರನೆ ಹೆಂಡತಿಯಾಗಿರುವಂತೆ ಹೇಳಿದ್ದರು. ಒಂದು ವೇಳೆ ತಾನು ಹೇಳಿದ ರೀತಿ ಕೇಳದೆ ಇದ್ದಲ್ಲಿ ನಿಮ್ಮ ನಿವೇಶನ ನಿಮಗೆ ಸಿಗದಿರುವ ಹಾಗೆ ಮಾಡುತ್ತೇನೆ. ನಿಮ್ಮ ತಂದೆ, ತಾಯಿ ಹಾಗೂ ಕುಟುಂಬವನ್ನು ಬೀದಿಗೆ ತರತ್ತೇನೆಂದು ಜೀವ ಬೆದರಿಕೆ ಒಡ್ಡಿರುವುದಾಗಿ ಯುವತಿಯು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇದನ್ನೂ ಓದಿ : Modi in Ayodhya: ರಾಮನ ಜನ್ಮಭೂಮಿಯಲ್ಲಿ ದೀಪಗಳದ್ದೇ ಚಿತ್ತಾರ;ಸರಯೂ ನದಿತೀರದಲ್ಲಿ ‘ನಮೋ’ ಪೂಜೆ .!
ಈ ಘಟನೆ ಕುರಿತಾಗಿ ಉಮೇಶ್ ವಿರುದ್ಧ ಐಪಿಸಿ ಸೆಕ್ಷನ್ 323, 504, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಉಮೇಶ್ ನಾಪತ್ತೆಯಾಗಿದ್ದು, ಚೆಳ್ಳಕೆರೆ ಠಾಣೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನ್ಯಾಯ ಕೇಳಲು ಠಾಣೆಗೆ ಹೋದವರ ಮೇಲೆಯೇ ಇದೀಗ ಪೊಲೀಸ್ ಅಧಿಕಾರಿ ಅತ್ಯಾಚಾರ ಎಸಗಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Raped by CPI : A police officer who raped a young woman on pretext