ಭಾನುವಾರ, ಏಪ್ರಿಲ್ 27, 2025
HomekarnatakaRatan Tata News: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನ

Ratan Tata News: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನ

Ratan Tata : ರತನ್ ಟಾಟಾ ಅವರು 1991 ರಲ್ಲಿ 'ಟಾಟಾ ಸನ್ಸ್' ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ರತನ್‌ ಟಾಟಾ ಅವರ ಮುತ್ತಜ್ಜ ಸ್ಥಾಪನೆ ಮಾಡಿದ ಸಾಮ್ರಾಜ್ಯವನ್ನು ಯಶಸ್ವಿ ಆಗಿ ಮುನ್ನೆಡೆಸಿದ್ದರು. 1996 ರಲ್ಲಿ ಟೆಲಿಕಾಂ ಕಂಪನಿಯಾದ ಟಾಟಾ ಟೆಲಿಸರ್ವಿಸಸ್ ಮತ್ತು 2004 ರಲ್ಲಿ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅನ್ನು ರತನ್‌ ಟಾಟಾ ಆರಂಭಿಸಿದ್ದರು.

- Advertisement -

Ratan Tata News : ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರತನ್ ಟಾಟಾ ಬುಧವಾರ (ಅಕ್ಟೋಬರ್ 09) ಕೊನೆಯುಸಿರೆಳೆದಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

Ratan Tata Chairman tata Groups passes away at 86
Image Credit to Original Source

ರತನ್ ಟಾಟಾ ಅವರು 1991 ರಲ್ಲಿ ‘ಟಾಟಾ ಸನ್ಸ್’ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ರತನ್‌ ಟಾಟಾ ಅವರ ಮುತ್ತಜ್ಜ ಸ್ಥಾಪನೆ ಮಾಡಿದ ಸಾಮ್ರಾಜ್ಯವನ್ನು ಯಶಸ್ವಿ ಆಗಿ ಮುನ್ನೆಡೆಸಿದ್ದರು. 1996 ರಲ್ಲಿ ಟೆಲಿಕಾಂ ಕಂಪನಿಯಾದ ಟಾಟಾ ಟೆಲಿಸರ್ವಿಸಸ್ ಮತ್ತು 2004 ರಲ್ಲಿ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅನ್ನು ರತನ್‌ ಟಾಟಾ ಆರಂಭಿಸಿದ್ದರು. ಕೈಗಾರಿಕಾ ವಲಯದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನು ಇರಿಸಿದ್ದಾರೆ. ಟಾಟಾ ಸಮೂಹವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ರತನ್ ಟಾಟಾ ಪ್ರಮುಖ ಪಾತ್ರ ವಹಿಸಿದ್ದರು. ರತನ್ ಟಾಟಾ ಅವರ ನಾಯಕತ್ವದಲ್ಲಿ ಟಾಟಾ ಗ್ರೂಪ್ $100 ಬಿಲಿಯನ್ ಜಾಗತಿಕ ವ್ಯಾಪಾರ ಸಾಮ್ರಾಜ್ಯವಾಗಿ ಬೆಳೆದಿದೆ. ತನ್ನ ಎಲ್ಲಾ ವ್ಯವಹಾರಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು.. ರತನ್ ಟಾಟಾ ದೇಶದ ಶ್ರೇಷ್ಠ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರೆಂದು ಹೆಸರು ಗಳಿಸಿದರು.

ಒಬ್ಬ ಶ್ರೇಷ್ಠ ಕೈಗಾರಿಕೋದ್ಯಮಿ ಮಾತ್ರವಲ್ಲದೆ, ರತನ್ ಟಾಟಾ ಮಹಾನ್ ಮಾನವತಾವಾದಿಯೂ ಹೌದು. ರತನ್ ಟಾಟಾ ಅವರು ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಅನ್ನು ಸ್ಥಾಪಿಸಿದರು. ರತನ್ ಟಾಟಾ ಅವರು ತಮ್ಮ ಲಾಭದ ಸುಮಾರು 60 ರಿಂದ 65 ಪ್ರತಿಶತವನ್ನು ಲೋಕೋಪಕಾರಿ ಉದ್ದೇಶಗಳಿಗೆ ದಾನ ಮಾಡುತ್ತಾರೆ. 86 ವರ್ಷದ ರತನ್ ಟಾಟಾ ಅವರು ಕೊನೆಯ ಹಂತದಲ್ಲಿ ಗೌರವಾಧ್ಯಕ್ಷರಾಗಿ ಮುಂದುವರಿದರು. ಅವರು ಟಾಟಾ ಗ್ರೂಪ್ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್‌ನ ಅಧ್ಯಕ್ಷರೂ ಆಗಿದ್ದರು.

ಇದನ್ನೂ ಓದಿ : ಮಾಜಿ ಸಿಎಂಗೆ ಮುನಿರತ್ನ ಹನಿಟ್ರ್ಯಾಪ್! ಬಂಧಿತ ಶಾಸಕನ ವಿರುದ್ಧ ಸಂತ್ರಸ್ಥೆ ಆರೋಪ

Ratan Tata Chairman tata Groups passes away at 86
Image Credit to Original Source

ಟಾಟಾ ಗ್ರೂಪ್ ಚಾರಿಟೇಬಲ್ ಟ್ರಸ್ಟ್‌ಗಳು ರತನ್ ಟಾಟಾ ಅವರ ನೇತೃತ್ವದಲ್ಲಿದೆ. ಉದ್ಯಮಿ ಎಂದೇ ಗುರುತಿಸಿಕೊಂಡಿದ್ದ ರತನ್ ಟಾಟಾ ಅವರಿಗೆ 2008ರಲ್ಲಿ ಅಂದಿನ ಕೇಂದ್ರ ಸರ್ಕಾರ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ನೀಡಿ ಗೌರವಿಸಿತ್ತು. ಅದಕ್ಕೂ ಮುನ್ನ.. 2000ರಲ್ಲಿ ರತನ್ ಟಾಟಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಓಹಿಯೋ ಸ್ಟೇಟ್ ಯೂನಿವರ್ಸಿಟಿ, ಐಐಟಿ ಬಾಂಬೆ, ಐಐಟಿ ಮದ್ರಾಸ್ ಐಐಟಿ ಖರಗ್‌ಪುರ ಸೇರಿದಂತೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳಿಂದ ರತನ್ ಟಾಟಾ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಇದನ್ನೂ ಓದಿ : ಖ್ಯಾತ ಜನಪದ ಗಾಯಕ ಗುರುರಾಜ್‌ ಹೊಸಕೋಟೆ ಕಾರು ಅಪಘಾತ

Ratan Tata Chairman tata Groups passes away at 86

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular