ಬೆಂಗಳೂರು: (Resolution to save BISF) ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿ ವೇಳೆ ಶಿವಮೊಗ್ಗದ ಭದ್ರಾವತಿಯಲ್ಲಿ ಆರಂಭಿಸಲಾದ ನಾಡಿನ ಹೆಮ್ಮೆಯ ಕಾರ್ಖಾನೆಯಾದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ವಿಚಾರ ಈಗ ವಿಧಾನಸಭಾ ಅಧಿವೇಶನದಲ್ಲಿ ಮತ್ತೆ ಚರ್ಚೆಗೆ ಬಂದಿದ್ದು, ಈ ಕಾರ್ಖಾನೆಯನ್ನು ಉಳಿಸುವ ಕೆಲವ ಮಾಡಬೇಕು ಎಂದು ಬಿಎಸ್ ಯಡಿಯೂರಪ್ಪ ಮನವಿ ಮಾಡಿದರು.
ಬಿಜೆಪಿಯ ಹಿರಿಯ ನಾಯಕ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಈ ಬಗ್ಗೆ ಅಧಿವೇಶನದಲ್ಲಿ ಮಾತನಾಡಿದ್ದು, ಸರಕಾರದ ಗಮನ ಸೆಳೆದಿದ್ದಾರೆ. “ರಾಜ್ಯದ ಬಿಐಎಸ್‌ಎಫ್ ಕಾರ್ಖಾನೆ ಇತಿಹಾಸದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಇಲ್ಲೇ ಇದ್ದಾರೆ. ಈ ಕಾರ್ಖಾನೆ ಉಳಿಸುವ ಕೆಲಸ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.
ಇನ್ನೂ ಇದಕ್ಕೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ ಬಿಐಎಸ್‌ಎಫ್ ಕಾರ್ಖಾನೆ ದಕ್ಷಿಣ ಕನ್ನಡ ಭಾರತದ ಪ್ರಸಿದ್ದ ಉಕ್ಕಿನ ಕಾರ್ಖಾನೆ. ಉತ್ತಮ ಗುಣಮಟ್ಟದ ಉಕ್ಕು ಇಲ್ಲಿ ತಯಾರಾಗುತ್ತಿತ್ತು. ಈ ಹಿಂದೆ ರಾಜ್ಯ ಸರಕಾರ ತನಗೆ ಆಗುವುದಿಲ್ಲ ಎಂದು ಖಾಸಗಿಯವರಿಗೆ ನೀಡಿತ್ತು. ಈಗ ಅವರು ನಡೆಸಲು ಆಗುವುದಿಲ್ಲ ಎಂದು ಕಾರ್ಖಾನೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ನಾನು ಈಗಾಗಲೇ ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಕಾರ್ಖಾನೆ ಉಳಿಸಿಕೊಳ್ಳಲು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನಷ್ಟದಲ್ಲಿರುವ ಕಾರ್ಖಾನೆಯನ್ನು ಸರಕಾರ ಖಾಸಗೀಕರಣಗೊಳಿಸಲು ಯೋಜಿಸಿತ್ತು. ಅದರಂತೆ ೨೦೧೯ ರ ಜುಲೈನಲ್ಲಿ ಕಾರ್ಖಾನೆಯ ಎಲ್ಲಾ ಪಾಲನ್ನು ಮಾರಾಟ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ ನಷ್ಟದಲ್ಲಿರುವ ಘಟಕವನ್ನು ಮುನ್ನಡೆಸಲು ಯಾರೂ ಮುಂದೆ ಬರಲಿಲ್ಲ. ತೀರಾ ಹಳೆಯದಾದ ಕಾರ್ಖಾನೆಯ ಪುರುಜ್ಜೀವನಕ್ಕೆ ಹಲವಾರು ಪ್ರಯತ್ನಗಳು ನಡೆದರು ಕೂಡ ಇದನ್ನು ಮುನ್ನಡೆಸಲು ಯಾರೂ ಸಿದ್ದರಿಲ್ಲ. ಈ ಕಾರಣದಿಂದಾಗಿ ಈ ಘಟಕವನ್ನು ಮುಚ್ಚಲಾಗುವುದು ಎಂದು ತಿಳಿಸಿದ್ದರು.
ಇದರಲ್ಲಿರುವ ಹಳೆಯ ಯಂತ್ರೋಪಕರಣಗಳು, ನಿರಂತರ ನಷ್ಟಮ ದೀರ್ಘಕಾಲದವರೆಗೆ ಇಲ್ಲಿಮ ಯಂತ್ರಗಳು ಸ್ಥಗಿತಗೊಂಡ ಕಾರಣ ಈ ಘಟಕವು ಅನುತ್ಪಾದಿತವಾಗಿದೆ. ಆದ್ದರಿಂದ ಇದನ್ನು ಮುಚ್ಚುವುದೊಂದೆ ದಾರಿ ಎಂದು ಸಚಿವರು ತಿಳಿಸಿದ್ದಾರೆ. ಅಲ್ಲದೇ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲಿದೆ ಎಂದು ಒಪ್ಪಿಕೊಂಡಿದ್ದು, ಕಾರ್ಖಾನೆಗೆ ಕಬ್ಬಿಣದ ಅದಿರಿನ ಮೂಲ ಇಲ್ಲ ಎಂಬ ಕಾರಣ ನೀಡಿ ಮುಚ್ಚಲು ಮುಂದಾಗಿತ್ತು.
Resolution to save BISF: BJP resolution to save Bhadravati iron and steel factory