ಬೆಂಗಳೂರು : ನಗರದಲ್ಲಿ ಈಗ ಬಿಎಂಟಿಸಿ, ಮೆಟ್ರೋದಷ್ಟೇ ಜನಬಳಕೆಗೆ ಸಿಗ್ತಿರೋ ಇನ್ನೊಂದು ಸಂಚಾರಿ ವ್ಯವಸ್ಥೆ ಅಂದ್ರೇ ಅದು ಓಲಾ ಮತ್ತು ಊಬರ್. ಆದರೆ ಬರ್ತಾ ಬರ್ತಾ ಓಲಾ ಮತ್ತು ಊಬರ್ ಗ್ರಾಹಕರ ಬಳಿ ಸುಲಿಗೆಗೆ ಇಳಿಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆರ್ ಟಿ ಓ (RTO) ಅಧಿಕಾರಿಗಳು ಓಲಾ (OLA) ಮತ್ತು ಊಬರ್ (Uber) ಸುಲಿಗೆಗೆ ಕಡಿವಾಣ ಹಾಕೋದಾಗಿ ಭರವಸೆ ನೀಡಿದ್ದಾರೆ.
ನಗರದಲ್ಲಿ ಬೆರಳಂಚಿನಲ್ಲಿ ಸಂಚಾರ ಸೌಲಭ್ಯ ಒದಗಿಸುವ ಓಲಾ ಮತ್ತು ಊಬರ್ ವ್ಯವಸ್ಥೆ ಇದೆ. ಆದರೆ ಈಗ ಓಲಾ ಮತ್ತು ಚಾಲಕರು ಸುಲಿಗೆ ಮಾಡ್ತಿದ್ದಾರೆ ಎಂಬ ಆರೋಪ ಕೇಳಿಬರ್ತಿದೆ. ಜೊತೆಗೆ ದೂರದ ಏರಿಯಾಗಳಿಗೆ ಮಾತ್ರ ಅಟೋ ಮತ್ತು ಕಾರು ಚಾಲಕರು ಬರ್ತಾರೆ. ಹತ್ತಿರದ ಲೊಕೇಶನ್ ಗಳಿಗೆ ಬುಕ್ಕಿಂಗ್ ಆದರೇ ಕ್ಯಾನ್ಸಲ್ ಮಾಡ್ತಾರೆ. ಅಲ್ಲದೇ ಆರ್ ಟಿ ಓ ನಿಗಧಿ ಮಾಡಿರುವ ದರಕ್ಕಿಂತ ಹೆಚ್ಚಿನ ದರ ಫಿಕ್ಸ್ ಮಾಡುತ್ತಿವೆ. ಓಲಾ ಮತ್ತು ಊಬರ್ ಗಳು ಗ್ರಾಹಕರ ಬಳಿ ಹೆಚ್ಚಿನ ಹಣ ಡಿಮ್ಯಾಂಡ್ ಮಾಡೋ ಮೂಲಕ ಗಲಾಟೆ ಮಾಡ್ತಿರೋ ಘಟನೆಗಳು ವರದಿಯಾಗ್ತಿವೆ.

ಇದಲ್ಲದೇ ಓಲಾ ಊಬರ್ ನ ಪ್ರಯಾಣದ ದರದಲ್ಲಿ ಶೇಕಡಾ 20% ರಷ್ಟು ಹಣ ಕಂಪನಿಗೆ ಹೋಗುತ್ತದೆ. ಹೀಗಾಗಿ ಬುಕಿಂಗ್ ಕ್ಯಾನ್ಸಲ್ ಮಾಡುವುದರ ಜೊತೆಗೆ ಆನ್ ಲೈನ್ ಬದಲು ನಗದು ಹಣಕ್ಕೆ ಡಿಮ್ಯಾಂಡ್ ಮಾಡುವ ಚಾಲಕರು. ಏರ್ ಪೋರ್ಟ್ ಮಾರ್ಗ, ಪೀಕ್ ಅವರ್, ವೀಕೆಂಡ್, ಮಳೆಗಾಲದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಆರೋಪ ಕೇಳಿಬಂದಿದೆ. ಹಾಗಿದ್ದರೇ ಈ ಓಲಾ ಮತ್ತು ಊಬರ್ ಗಳಿಗೆ ಆರ್ ಟಿ ಓ ನಿಗದಿ ಪಡಿಸಿರೋ ದರ ಎಷ್ಟು ಅನ್ನೋದನ್ನು ಗಮನಿಸೋದಾದರೇ,

5 ಲಕ್ಷದ ವಾಹನಗಳಿಗೆ
ಮೊದಲ ನಾಲ್ಕು ಕಿಲೋಮೀಟರ್ 75 ರೂ.
ಹೆಚ್ಚುವರಿ ಕಿಲೋಗೆ ಕನಿಷ್ಠ 18 ರೂ. ಗರಿಷ್ಠ – 36 ರೂ
5-10 ಲಕ್ಷದ ವಾಹನಗಳಿಗೆ
ಮೊದಲ ನಾಲ್ಕು ಕಿಲೋಮೀಟರ್ 100 ರೂ.
ಹೆಚ್ಚುವರಿ ಕಿಲೋಮೀಟರ್ ಕನಿಷ್ಠ 21 ರೂ, ಗರಿಷ್ಠ – 42 ರೂ.
10-16 ಲಕ್ಷದ ವಾಹನಗಳಿಗೆ
ಮೊದಲ ನಾಲ್ಕು ಕಿಲೋಮೀಟರ್ ಗೆ 120 ರೂಹೆಚ್ಚುವರಿ ಕಿಲೋಮೀಟರ್ ಗೆ ಕನಿಷ್ಠ 24 ರೂ, ಗರಿಷ್ಠ 48 ರೂ
16 ಲಕ್ಷ ಮೇಲ್ಪಟ್ಟ ವಾಹನಗಳಿಗೆ
ಮೊದಲ ನಾಲ್ಕು ಕಿಲೋಮೀಟರ್ 150 ರೂ.
ಹೆಚ್ಚುವರಿ ಕಿಲೋಮೀಟರ್ ಗೆ ಕನಿಷ್ಠ 27 ರೂ, ಗರಿಷ್ಠ 54 ರೂ ಆದರೆ ಸಾರಿಗೆ ಇಲಾಖೆಯ ಈ ನಿಯಮಗಳು ಕೇವಲ ದಾಖಲೆಯಲ್ಲಿ ಮಾತ್ರ ಉಳಿದಿದ್ದು, ಓಲಾ ಊಬರ್ ಮನಸೋ ಇಚ್ಛೇ ದರ ನಿಗದಿ ಪಡಿಸಿದೆ. ಈ ಮಧ್ಯೆ ಆರ್ ಟಿಓ ಸುಲಿಗೆ ಬಗ್ಗೆ ಮಾಹಿತಿ ನೀಡಿದ ಆರ್.ಟಿ.ಓ ಅಧಿಕಾರಿ ವಿ.ಸಿ ಮೂಸಾ ಇಂಥಹ ದೂರುಗಳು ಸಾಕಷ್ಟು ಕೇಳಿ ಬರ್ತಾ ಇದೆ. ಇನ್ನು ಕೆಲವರು ಆರ್.ಟಿ.ಓ.ಗೆ ಆನ್ ಲೈನ್ ಮುಖಾಂತರ ದೂರು ಸಲ್ಲಿಸಿದ್ದಾರೆ, ಇದರ ಬಗ್ಗೆ ಗಮನ ಹರಿಸಲಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ಓಲಾ ಊಬರ್ ವಿರುದ್ದ ನ್ಯಾಯಲಯದಲ್ಲಿ ದಾವೆ ಕೂಡ ಹೂಡಲಾಗಿದೆ. ಜೊತೆಗೆ ಉನ್ನತ್ತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : 10 ಮಂದಿ ಬಂಧನ
RTO announcing the war against OLA Uber