ಸೋಮವಾರ, ಏಪ್ರಿಲ್ 28, 2025
HomekarnatakaRamya Campaign : ಪ್ರಿಯಾಂಕಾ ಗಾಂಧಿ ಜೊತೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕ್ಯಾಂಪೇನ್ :...

Ramya Campaign : ಪ್ರಿಯಾಂಕಾ ಗಾಂಧಿ ಜೊತೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕ್ಯಾಂಪೇನ್ : ಮಂಡ್ಯ ರಣಕಣದಲ್ಲಿ ಸ್ಟಾರ್ ಹವಾ

- Advertisement -

ಮಂಡ್ಯ : ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ರಾಜ್ಯದಲ್ಲಿ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳ ಪರ ಘಟಾನುಘಟಿ ನಾಯಕರು ಮತಬೇಟೆ ನಡೆಸುತ್ತಿದ್ದಾರೆ. ಈ ಮಧ್ಯೆ ಈಗಾಗಲೇ ಸ್ಯಾಂಡಲ್ ವುಡ್ ನಟ-ನಟಿಯರಿಂದ ರಂಗೇರಿರುವ ಚುನಾವಣಾ ಕಣಕ್ಕೆ ಚಂದನವನದ ನಂಬರ್ ಒನ್ ನಾಯಕಿ ಹಾಗೂ ಮಾಜಿ ಸಂಸದೆ ರಮ್ಯ (Ramya Campaign) ಕೂಡ ಎಂಟ್ರಿ ಕೊಡ್ತಿದ್ದಾರೆ. ಮಂಡ್ಯದಿಂದಲೇ ಲೋಕಸಭೆ ಚುನಾವಣೆ ಕಣಕ್ಕಿಳಿದು ಗೆದ್ದು ಸಂಸದೆಯಾಗಿದ್ದ ನಟಿ ರಮ್ಯ ಕಾಂಗ್ರೆಸ್ ನ ನಾಯಕಿಯಾಗಿ ಕೆಲಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದರು. ಎಐಸಿಸಿ ಮಾಧ್ಯಮದ ಜವಾಬ್ದಾರಿಯನ್ನು ಹೊತ್ತಿದ್ದ ನಟಿ ರಮ್ಯ ಕೆಲಕಾಲದ ಹಿಂದೆ ಅನಾರೋಗ್ಯದ ಕಾರಣದಿಂದ ಎಲ್ಲವನ್ನು ಬಿಟ್ಟು ಅಜ್ಞಾತರಾಗಿದ್ದರು.

ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದರೂ ನಟಿ ರಮ್ಯ ಮೋದಿ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸುವ ಮೂಲಕ ಆಕ್ಟಿವ್ ಆಗಿದ್ದರು. ರಾಜ್ಯದಲ್ಲಿ ಚುನಾವಣೆ ಪೋಷಣೆಯಾದಾಗ ರಮ್ಯ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬ ಸುದ್ದಿಯೂ ಹರಡಿತ್ತು. ಆದರೆ ಇದ್ಯಾವುದು ಸತ್ಯವಾಗಲಿಲ್ಲ. ಆದರೆ ಈಗ ಚುನಾವಣೆ ಕಣ ರಂಗೇರಿರುವ ಬೆನ್ನಲ್ಲೇ ನಟಿ ರಮ್ಯ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಮುನ್ಸೂಚನೆ ನೀಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಟಿ ರಮ್ಯ ಮಂಗಳವಾರ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕ್ಯಾಂಪೇನ್ ನಡೆಸಲಿದ್ದಾರೆ.

ಈ ಬಗ್ಗೆ ಸ್ವತಃ ನಟಿ ರಮ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ನಾನು ಕಾಂಗ್ರೆಸ್ಸಿನ ವಿಧಾನಸಭಾ ಅಭ್ಯರ್ಥಿಗಳ ಪರವಾಗಿ ಪ್ರಿಯಾಂಕಾ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರ ಜೊತೆ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ನಿಮ್ಮೆಲ್ಲರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದು ರಮ್ಯ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ರಮ್ಯ ಸಕ್ರಿಯವಾಗಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು ಕೇವಲ ಮಂಡ್ಯ ಮಾತ್ರವಲ್ಲ ವರುಣಾ ಹಾಗೂ ಚಾಮರಾಜನಗರದಲ್ಲೂ ಕೂಡ ನಟಿ ರಮ್ಯ ಕ್ಯಾಂಪೇನ್ ಮಾಡಲಿದ್ದಾರಂತೆ.

ಮೇ 4 ರಂದು ರಮ್ಯ ನಟ ಶಿವರಾಜ್ ಕುಮಾರ್ ಜೊತೆ ಚಾಮರಾಜನಗರದಲ್ಲೂ ಕ್ಯಾಂಪೇನ್ ನಡೆಸಲಿದ್ದಾರೆ ಎನ್ನಲಾಗ್ತಿದೆ. ಕೇವಲ ನಟಿ ರಮ್ಯ (Ramya Campaign) ಮಾತ್ರವಲ್ಲ ಆಕ್ಷ್ಯನ್ ಪ್ರಿನ್ಸ್ ಧ್ರುವ, ಬಹುಭಾಷಾ ನಟ ಸುದೀಪ್ , ನಟಿಯರಾದ ಹರ್ಷಿಕಾ ಪೂಣಚ್ಚ, ಶ್ರುತಿ, ಪ್ರಥಮ್ ಸೇರಿದಂತೆ ಹಲವರು ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಈಗ ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಭರ್ಜರಿ ಎಂಟ್ರಿ ನೀಡಿದ್ದಾರೆ.

ಇದನ್ನೂ ಓದಿ : ಕರ್ನಾಟಕದ ಮುಂದಿನ ಸಿಎಂ ಹೆಸರು ಘೋಷಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ

ಇದನ್ನೂ ಓದಿ : ಬಿಪಿಎಲ್‌ ಕಾರ್ಡುದಾರರಿಗೆ ಅರ್ಧ ಲೀಟರ್‌ ಹಾಲು, ವರ್ಷಕ್ಕೆ 3 ಗ್ಯಾಸ್‌ ಸಿಲಿಂಡರ್‌ ಉಚಿತ: ಬಿಜೆಪಿ ಪ್ರನಾಳಿಕೆಯಲ್ಲಿ ಏನೇನಿದೆ ?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular