ಸೋಮವಾರ, ಏಪ್ರಿಲ್ 28, 2025
Homekarnatakaಅಮುಲ್‌ ವಿರುದ್ದ ಆಕ್ರೋಶ : ಕನ್ನಡಿಗರಿಂದ ನಂದಿನಿ ಉಳಿಸಿ ಅಭಿಯಾನ

ಅಮುಲ್‌ ವಿರುದ್ದ ಆಕ್ರೋಶ : ಕನ್ನಡಿಗರಿಂದ ನಂದಿನಿ ಉಳಿಸಿ ಅಭಿಯಾನ

- Advertisement -

ಬೆಂಗಳೂರು : (Save Nandini campaign) ಗುಜರಾತ್‌ ಮೂಲದ ಅಮುಲ್‌ ಹಾಲು ಉತ್ಪಾದನಾ ಮಂಡಳಿ ಇದೀಗ ಕರ್ನಾಟಕದಲ್ಲೂ ಹಾಲು ಮಾರಾಟ ಮಾಡಲು ಮುಂದಾಗಿದೆ. ಕ್ವಿಕ್‌ ಕಾಮರ್ಸ್‌ ಫ್ಲಾಟ್‌ ಫಾರ್ಮ್‌ ಮೂಲಕ ಮನೆ ಬಾಗಿಲಿಗೆ ಹಾಲು, ಮೊಸರು ಪೂರೈಕೆಯನ್ನು ಮಾಡಲು ಪ್ಲ್ಯಾನ್‌ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಅಮುಲ್‌ ವಿರುದ್ದ ಕನ್ನಡಿಗರ ಆಕ್ರೋಶ ಮುಗಿಲು ಮುಟ್ಟಿದ್ದು, ನಂದಿನಿ ಉಳಿಸಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳ ಅಭಾವದ ಬೆನ್ನಲ್ಲೇ ಅಮುಲ್‌ ಕರ್ನಾಟಕದಲ್ಲಿ ಹಾಲು ಮಾರಾಟ ಮಾಡಲು ಮುಂದಾಗಿದೆ. ನಂದಿನಿಯ ಜಾಗವನ್ನು ಇಂದು ಅಮುಲ್‌ ಆಕ್ರಮಿಸಲು ಮುಂದಾಗಿದೆ. ಈ ಹಿಂದೆಯೇ ಅಮುಲ್‌ ಜೊತೆ ಕೆಎಂಎಫ್‌ ಅನ್ನು ವಿಲೀನ ಮಾಡಲು ಸರಕಾರ ಮುಂದಾಗಿತ್ತು. ಇದಕ್ಕೆ ಕನ್ನಡಿಗರ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ವಿಲೀನದ ನಿರ್ಧಾರವನ್ನು ಕೈಬಿಡಲಾಗಿತ್ತು. ಇದಾದ ಬಳಿಕ ನಂದಿನಿ ಪ್ಯಾಕೆಟ್‌ ಮೇಲೆ ದಹಿ ಎಂಬ ಹೊಂದಿ ಪದವನ್ನು ಮುದ್ರಿಸಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯ ಕುತಂತ್ರವು ನಡೆದಿತ್ತು. ಇದಕ್ಕೂ ಕೂಡ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಕೂಡ ಸರಕಾರ ಹಿಂದಕ್ಕೆ ಪಡೆದುಕೊಂಡಿತ್ತು.

ಈ ಎಲ್ಲಾ ಸಂಗತಿಗಳ ಬಳಿಕ ಇದೀಗ ಅಮುಲ್‌ ಕರ್ನಾಟಕದಲ್ಲಿ ತನ್ನ ಉತ್ಪನ್ನಗಳ ಮಾರಾಟಕ್ಕೆ ಇಳಿದಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನ ಮನೆ ಬಾಗಿಲಿಗೆ ಹಾಲು, ಮೊಸರು ಪೂರೈಸುವ ಸಂಚು ನಡೆಸುತ್ತಿದ್ದು, ಕ್ವಿಕ್‌ ಕಾಮರ್ಸ್‌ ಎನ್ನುವ ಫ್ಲಾಟ್‌ ಫಾರ್ಮ್‌ ಮೂಲಕವಾಗಿ ಮನೆ ಮನೆಗೆ ಉತ್ಪನ್ನಗಳನ್ನು ತಲುಪಿಸಲು ಮುಂದಾಗಿದೆ. ಇದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಕನ್ನಡಿಗರು ನಂದಿನಿ ಬ್ರಾಂಡ್‌ ಅಂಬಾಸಿಡರ್‌ ಅಗಿದ್ದ ದಿವಂಗತ ಪುನೀತ್‌ ರಾಜ್‌ ಕುಮಾರ್‌ ಅವರ ಜಾಹೀರಾತುವಿನ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನಂದಿನಿ ಉಳಿಸಿ ಅಭಿಯಾನದ ಜೊತೆಗೆ ಗೋ ಅಮುಲ್‌ ಎನ್ನುವ ಕೂಗು ಸಹ ಜೋರಾಗಿಯೇ ಕೇಳುತ್ತಿದೆ.

ಇದನ್ನೂ ಓದಿ : ತಂದೆ ತಾಯಿಯನ್ನು ಕಳೆದುಕೊಂಡ ನೋವಿನಲ್ಲೇ ಚುನಾವಣಾ ಪ್ರಚಾರಕ್ಕಿಳಿದ ದರ್ಶನ್‌ ಧ್ರುವನಾರಾಯಣ್‌

ಇದನ್ನೂ ಓದಿ : Congress third list : ಇಂದು ಕಾಂಗ್ರೆಸ್‌ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಸಾಧ್ಯತೆ

Save Nandini campaign : Outrage against Amul : Save Nandini campaign by Kannadigas

RELATED ARTICLES

Most Popular