ಸಿದ್ದಕಟ್ಟೆ : ಮುಂಗಾರು, ನವಭಾರತ ಪತ್ರಿಕೆ ಸೇರಿದಂತೆ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದ ಖ್ಯಾತ ಹಿರಿಯ ಪತ್ರಕರ್ತರಾದ ಸಿದ್ದಕಟ್ಟೆ ಹಿಂಗಾಣಿಯ ಚಂದ್ರಶೇಖರ್ ಎರ್ಮಾಳ್ (Senior Journalist Hingani Chandrashekar Yermal) ವಿಧಿವಶರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು, ಸಿದ್ದಕಟ್ಟೆಯಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
70 ರ ದಶಕದಲ್ಲಿಯೇ ಕರಾವಳಿ ಭಾಗದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದವರು ಪತ್ರಕರ್ತ ಹಿಂಗಾಣಿ ಚಂದ್ರಶೇಖರ್ ಎರ್ಮಾಳ್ ಅವರು. ಮುಂಬೈನಲ್ಲಿ ಟೈಮ್ಸ್ ಆಫ್ ಇಂಡಿಯಾ (Times of India) ಪತ್ರಿಕೆಯ ಮೂಲಕ ಪತ್ರಕರ್ತರಾಗಿ ವೃತ್ತಿ ಬದುಕನ್ನು ಕಟ್ಟಿಕೊಂಡಿದ್ದ ಚಂದ್ರಶೇಖರ್ ಅವರು ನಂತರದಲ್ಲಿ ವಡ್ಡರ್ಸೆ ಅವರ ಮುಂಗಾರು ಪತ್ರಿಕೆಯಲ್ಲಿ ಹಲವು ವರ್ಷಗಳ ಕಾಲ ದುಡಿದಿದ್ದಾರೆ.
ಇದನ್ನೂ ಓದಿ : ಕೋಟ ಉದ್ಯಮಿ ಮನೆಗೆ ನಕಲಿ ಐಟಿ ದಾಳಿ ಪ್ರಕರಣ : ಇಬ್ಬರು ಆರೋಪಿಗಳ ಬಂಧನ
ಮುಂಗಾರು (Mugaru Paper) ಪತ್ರಿಕೆಯನ್ನು ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಆರಂಭಿಸುವ ಹೊತ್ತಿನಲ್ಲೇ ಅವರ ಜೊತೆಗಿದ್ದವರ ಪೈಕಿ ಹಿಂಗಾಣಿ ಚಂದ್ರಶೇಖರ್ ಎರ್ಮಾಳ್ ಕೂಡ ಒಬ್ಬರು. ವಡ್ಡರ್ಸೆ ಅವರ ಜೊತೆಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ಮುಂಗಾರು ಪತ್ರಿಕೆ ಮುಚ್ಚಿದ ಬಳಿಕ ಮಂಗಳೂರಿನ ನವಭಾರತ (Nava Bharatha) ಪತ್ರಿಕೆಯಲ್ಲಿಯೂ ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ : ನಟ ದರ್ಶನ್ ತೂಗುದೀಪ್ ಪ್ರಕರಣ : ನಟ ಚಿಕ್ಕಣ್ಣಗೆ ಎದುರಾಯ್ತು ಸಂಕಷ್ಟ
ನಂತರದಲ್ಲಿ ಉದಯವಾಣಿ ಪತ್ರಿಕೆಯನ್ನು ಸೇರಿಕೊಂಡ ಹಿಂಗಾಣಿ ಚಂದ್ರಶೇಖರ್ ಎರ್ಮಾಳ್ ಅವರು ನಾಲ್ಕೈದು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಪತ್ರಿಕೋದ್ಯಮದಿಂದ ದೂರ ಉಳಿದಿದ್ದರು. ಮೂಲತಃ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಎರ್ಮಾಳ್ ಕುಟುಂಬದಲ್ಲಿ ಜನಿಸಿದ್ದ ಹಿಂಗಾಣಿ ಚಂದ್ರಶೇಖರ್ ಅವರು ಎರ್ಮಾಳ್ ಬ್ರಹ್ಮಬೈದರ್ಕಳ ಕೋಟಿ ಚೆನ್ನಯ್ಯ ಗರಡಿಯ ಟ್ರಸ್ಟಿ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಸಾಲಿಗ್ರಾಮ : ಕ್ಷುಲಕ ಕಾರಣಕ್ಕೆ ಜಗಳ : ಪತ್ನಿ ಕೊಲೆ, ಪತಿ ಅರೆಸ್ಟ್
ದಿವಂಗತರು ಪತ್ನಿ ಡಿ. ಲಲಿತಾ, ಪುತ್ರ ಚುನಾವಣಾ ತಜ್ಞ, ಐಪಿ ನ್ಯಾಯವಾದಿ ನವನೀತ್ ಡಿ ಹಿಂಗಾಣಿ, ಪುತ್ರಿ ಬಂಟ್ವಾಳ ಸಿಡಿಪಿಯು ಇಲಾಖೆಯ ನೀತಾ.ಡಿ. ಹಿಂಗಾಣಿ, ಜರ್ಮನಿಯ ಬಾಷ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ನಿಶೀತ್. ಡಿ ಹಿಂಗಾಣಿ , ಅಳಿಯ ಬಂಟ್ವಾಳ ವಿಭಾಗದ ಪಶುಸಂಗೋಪಾನಾಧಿಕಾರಿ ಬಾಲಕೃಷ್ಣ ಆರ್ ಪೂಜಾರಿ, ಸೊಸೆಯಂದಿರಾದ ಸ್ವಪ್ನ , ಹರ್ಷ ಹಾಗೂ ಮೊಮ್ಮಕ್ಕಳನ್ನು ಅಗಲಿರುತ್ತಾರೆ.
senior journalist of Mungaru Navbharatha newspaper Siddakatte Hingani Chandrasekhar yermal passed away