ಸೋಮವಾರ, ಜೂನ್ 16, 2025
Homekarnatakaದಾಖಲೆಯ ಡಿಜಿಲಾಕರ್‌, ನಕಲು ಪ್ರತಿ ತೋರಿಸಿದ್ರೂ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ

ದಾಖಲೆಯ ಡಿಜಿಲಾಕರ್‌, ನಕಲು ಪ್ರತಿ ತೋರಿಸಿದ್ರೂ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ

- Advertisement -

ಬೆಂಗಳೂರು : Shakti Scheme : ರಾಜ್ಯದಲ್ಲಿನ ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯ ಮೊದಲ ದಿನವೇ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಆದರೆ ಬಸ್ಸಿನಲ್ಲ ಉಚಿತವಾಗಿ ಪ್ರಯಾಣಿಸಲು ಮಹಿಳೆಯರು ಸರಕಾರಿ ದಾಖಲೆಗಳನ್ನು ನೀಡುವುದು ಕಡ್ಡಾಯ. ಆದರೆ ಮೂಲ ಗುರುತಿನ ಚೀಟಿ ನೀಡದ ಹಿನ್ನೆಲೆಯಲ್ಲಿ ಉಚಿತ ಪ್ರಯಾಣವನ್ನು ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು, ಮೂಲ ಗುರುತಿನ ಚೀಟಿ, ಡಿಜಿಲಾಕರ್‌ ಮೂಲಕ ದಾಖಲೆ ಹಾಜರು ಪಡಿಸುವುದರ ಜೊತೆಗೆ ದಾಖಲೆಗಳ ನಕಲು ಪ್ರತಿಗಳನ್ನು ಮಾನ್ಯ ಮಾಡಲು ತೀರ್ಮಾನಿಸಿದೆ.

ಕರ್ನಾಟಕದ ರಾಜ್ಯದ ಮಹಿಳೆಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ಸಾರಿಗೆ ನಿಗಮ ಹಾಗೂ ಬಿಬಿಎಂಪಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲಕ ಕಲ್ಪಿಸಲಾಗಿದೆ. ಮಹಿಳೆಯರು ಸರಕಾರ ನೀಡಿರುವ ಯಾವುದೇ ಮೂಲ ಗುರುತಿನ ಚೀಟಿ ಅಥವಾ ಡಿಜಿಲಾಕರ್‌ ಮೂಲಕ ತೋರಿಸಬೇಕು ಎಂದು ತಿಳಿಸಲಾಗಿತ್ತು. ಆದರೆ ಮೊಬೈಲ್‌ ಮೂಲಕ ದಾಖಲೆಗಳನ್ನು ತೋರಿಸಿದ್ದರೂ ಕೂಡ ಬಹುತೇಕರಿಗೆ ಉಚಿತ ಪ್ರಯಾಣವನ್ನು ನಿರಾಕರಿಸಲಾಗಿತ್ತು. ಇದನ್ನು ಮನಗಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದೀಗ ಮಹಿಳೆಯರ ಅನುಕೂಲಕ್ಕಾಗಿ ಗುರುತಿನ ಚೀಟಿಗಳ ನಕಲು ಪ್ರತಿಯನ್ನು ಸಹ ಮಾನ್ಯ ಮಾಡಲು ನಿರ್ಧರಿಸಿದೆ.

ಹೀಗಾಗಿ ಮಹಿಳೆಯರು ತಮ್ಮ ಪ್ರಯಾಣದ ಸಮಯದಲ್ಲಿ ಗುರುತಿನ ಚೀಟಿಗಳ ಮೂಲ/ ನಕಲು/ ಡಿಜಿಲಾಕರ್‌ ( ಹಾರ್ಡ್‌ ಮತ್ತು ಸಾಫ್ಟ್‌ ಕಾಪಿ ) ಮಾದರಿಯಲ್ಲಿ ಹಾಜರುಪಡಿಸಿ ಪ್ರಯಾಣಿಸಲು ಅನುಮತಿಯನ್ನು ನೀಡಲಾಗಿದೆ. ಉಳಿದಂತೆ ಹಿಂದಿನ ಆದೇಶದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Shakti Scheme ಮೊದಲ ದಿನವೇ 5 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣ

ಇನ್ನು ಶಕ್ತಿ ಯೋಜನೆ ಜಾರಿಗೆ ಬಂದ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗಿದೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳ ವಾಹನಗಳಲ್ಲಿ ಜೂನ್‌ 11 ರಂದು ಮಧ್ಯಾಹ್ನ 1 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯ ವರೆಗೆ 5,21,023 ಮಹಿಳೆಯರು ಪ್ರಯಾಣ ಬೆಳೆಸಿದ್ದಾರೆ. ಇದರಿಂದಾಗಿ ಸಾರಿಗೆ ಇಲಾಖೆ 1,40,22,878 ಮೌಲ್ಯದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ 1,93,831, ಬಿಎಂಟಿಸಿ ಬಸ್ಸುಗಳಲ್ಲಿ 2,01,215 ಮಹಿಳೆಯರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 1,22,354 ಮಹಿಳೆಯರು ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಒಟ್ಟು 53,623 ಮಂದಿ ಮಹಿಳೆಯರು ಪ್ರಯಾಣಿಸಿದ್ದಾರೆ.

ಇದನ್ನೂ ಓದಿ : State Congress Govt : ಶಕ್ತಿ ಯೋಜನೆಯಿಂದ 2.5ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣ

ಇದನ್ನೂ ಓದಿ : Indira Canteens : ಬೆಂಗಳೂರಲ್ಲಿ 250 ಇಂದಿರಾ ಕ್ಯಾಂಟೀನ್‌ : ಸಿಎಂ ಸಿದ್ದರಾಮಯ್ಯ

Shakti Scheme Free bus travel for women on presentation of Digilocker photocopy of any record

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular