Shirur Hill Collapse Bharath Benz Truck Found : ಅಂಕೋಲ : ಶಿರೂರಿನಲ್ಲಿ ನಡೆದಿರುವ ಗುಡ್ಡ ಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾರ್ಯಾಚರಣೆಗೆ ಭಾರತೀಯ ಸೇನೆ ಹಾಗೂ ಭಾರತೀಯ ನೌಕಾಪಡೆ ಎಂಟ್ರಿ ಕೊಟ್ಟಿದೆ. ಇಂದು ಬೆಳಗಿನಿಂದಲೇ ಡ್ರೋನ್ ಬಳಸಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಇನ್ನೊಂದೆಡೆ ಅರ್ಜುನ್ ನಡೆದಾಡಿದ ವಿಡಿಯೋ ವೈರಲ್ ಆಗಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಸಮೀಪದ ಶಿರೂರಿನಲ್ಲಿ ನಡೆದಿದ್ದ ಗುಡ್ಡ ಕುಸಿತ ದುರಂತ ನಡೆದು ಇಂದಿಗೆ ಹತ್ತು ದಿನಗಳೇ ಕಳೆದು ಹೋಗಿದೆ. ಇಂದು ಅರ್ಜುನ್ ಸೇರಿದಂತೆ ಮೂವರ ಪತ್ತೆಗಾಗಿ ಇಂದು ಭಾರತೀಯ ಸೇನೆ ಹಾಗೂ ನೌಕಾಪಡೆಗಳು ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿವೆ. ಅರ್ಜುನ್ ಲಾರಿ ಪತ್ತೆ ಹಚ್ಚುವ ಸಲುವಾಗಿ ಡ್ರೋನ್ ಬಳಕೆ ಮಾಡಲಾಗುತ್ತಿದೆ.
ಭಾರತೀಯ ಸೇನೆ ಇಂದು ಮುಂಜಾನೆಯಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದು, ದುರಂತ ಸ್ಥಳಕ್ಕೆ ಜಿಲ್ಲಾಡಳಿತ ಹಾಗೂ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿದೆ. ಇಸ್ರೋ ಹಾಗೂ ರಾಡಾರ್ ಈಗಾಗಲೇ ಗಂಗಾವಳಿ ನದಿಯಲ್ಲಿ ಅರ್ಜುನ್ ಬಳಕೆ ಚಲಾಯಿಸುತ್ತಿದ್ದ ಟಿಂಬರ್ ಲಾರಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಲಾರಿಯನ್ನು ಮೇಲಕ್ಕೆ ಎತ್ತುವ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಬಿಡುಗಡೆ ಆಗುತ್ತೆ ? ಇಲ್ಲಿದೆ ಮಹತ್ವದ ಸುದ್ದಿ
ನದಿಯಲ್ಲಿ ಲಾರಿ ಇರುವ ಬಗ್ಗೆ ಸೇನೆ ಕೂಡ ಖಚಿತ ಪಡಿಸಿದೆ. ಬೃಹತ್ ಕಬ್ಬಿಣ ವಸ್ತು ಇರುವುದು ಪತ್ತೆಯಾಗಿದೆ. ಇದು ಲಾರಿ ಅನ್ನೋದು ಇನ್ನೂ ಖಚಿತವಾಗಿಲ್ಲ. ಆದರೆ ಅದರ ಗಾತ್ರವನ್ನು ನೋಡಿದ್ರೆ ಲಾರಿ ಇರಬಹುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಅರ್ಜುನ್ ಸೇರಿ ಮೂವರಿಗೆ ಹುಡುಕಾಟ
ಗುಡ್ಡ ದುರಂತ ಪ್ರಕರಣದಲ್ಲಿ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ನಾಪತ್ತೆಯಾಗಿದ್ದು, ಗಂಗಾವತಿ ನದಿಯಲ್ಲಿ ಲಾರಿಗಾಗಿ ಹುಡುಕಾಟ ನಡೆಯುತ್ತಿದೆ. ದುರಂತರದಲ್ಲಿ ಕೇರಳ ಮೂಲಕ ಅರ್ಜುನ್ ಜೊತೆಗೆ ಸ್ಥಳೀಯರಾಗಿರುವ ಲೋಕೇಶ್ ನಾಯ್ಕ, ಜಗನ್ನಾಥ್ ನಾಯ್ಕ ಅವರ ಪತ್ತೆ ಇನ್ನಷ್ಟೇ ಆಗಬೇಕಾಗಿದೆ. ಎನ್‌ಡಿಆರ್‌ಎಫ್ ತಂಡಗಳು ಇಂದು ಶಿರೂರಿನಿಂದ ಗೋಕರ್ಣದ ವರೆಗೂ ನಾಪತ್ತೆಯಾದವರಿಗಾಗಿ ಶೋಧ ಕಾರ್ಯವನ್ನು ನಡೆಸಿ ವಾಪಾಸಾಗಿದೆ.
ಅರ್ಜುನ್ ನಡೆದಾಡಿದ ವಿಡಿಯೋ ವೈರಲ್
ಒಂದೆಡೆಯಲ್ಲಿ ಚಾಲಕ ಅರ್ಜುನ್ ಹಾಗೂ ಲಾರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ರೆ, ಇನ್ನೊಂದೆಡೆಯಲ್ಲಿ ಅರ್ಜುನ್ ಓಡಾಡಿರುವ ಕೊನೆಯ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಜುನ್ ತನ್ನ ಸ್ನೇಹಿತರ ಜೊತೆ ಕಾಡಿನ ಪ್ರದೇಶದಲ್ಲಿ ಅಡುಗೆ ಮಾಡಿರುವುದು ವಿಡಿಯೋದಲ್ಲಿದೆ.
ಇದನ್ನೂ ಓದಿ : ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ ವಿವಾದ : ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಅಮಾನತ್ತು
ಇನ್ನು ದುರಂತ ನಡೆಯುವ ಮೊದಲ ದಿನ ರಾತ್ರಿ ಟಿಂಬರ್ ತುಂಬಿದ್ದ ಅರ್ಜುನ್ ಲಾರಿ ಜೋಡಿಯಾದಿಂದ ಅಂಕೋಲ ಕಡೆಗೆ ಸಾಗುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೇ ತನ್ನ ಸ್ನೇಹಿತನಿಗೆ ರಾತ್ರಿ ೩ ಗಂಟೆಗೆ ಕರೆ ಮಾಡಿ ತಾನು ನಿದ್ರೆ ಮಾಡುವುದಾಗಿಯೂ ಅರ್ಜುನ್ ತಿಳಿಸಿದ್ದಾನೆ ಎನ್ನಲಾಗುತ್ತಿದೆ. ಅರ್ಜುನ್ ಶಿರೂರು ದುರಂತದ ಸ್ಥಳದಲ್ಲಿಯೇ ನಿದ್ರೆ ಜಾರಿದ್ದು, ಬೆಳಗ್ಗೆ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.
Shirur Hill Collapse Bharath Benz Truck Found Drone Operation, Timber Truck Driver Arjun’s Walking Video Goes Viral