ಸೋಮವಾರ, ಏಪ್ರಿಲ್ 28, 2025
Homekarnatakaಸಿಎಂ ಬೊಮ್ಮಾಯಿ ಬಜೆಟ್ ಗೆ ಸಿದ್ದರಾಮಯ್ಯ ವಿಭಿನ್ನ ಪ್ರತಿಭಟನೆ: ಕಿವಿ ಮೇಲೆ ಕೇಸರಿ ಹೂವಿಟ್ಟುಕೊಂಡು ಬಂದ ವಿಪಕ್ಷ ನಾಯಕ

ಸಿಎಂ ಬೊಮ್ಮಾಯಿ ಬಜೆಟ್ ಗೆ ಸಿದ್ದರಾಮಯ್ಯ ವಿಭಿನ್ನ ಪ್ರತಿಭಟನೆ: ಕಿವಿ ಮೇಲೆ ಕೇಸರಿ ಹೂವಿಟ್ಟುಕೊಂಡು ಬಂದ ವಿಪಕ್ಷ ನಾಯಕ

- Advertisement -

ಬೆಂಗಳೂರು : ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಮಂಡನೆಯಾಗುತ್ತಿರುವ ಬಜೆಟ್ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಸಿಎಂ ಬೊಮ್ಮಾಯಿ ತಮ್ಮ ಎರಡನೇ ಬಜೆಟ್ ಮಂಡಿಸಿದ್ದು, ಬಜೆಟ್ ಮಂಡನೆ ಆರಂಭದಲ್ಲೇ ಕಾಂಗ್ರೆಸ್ ತೀವ್ರ ಟೀಕೆಯೊಂದಿಗೆ (CM Bommai – Siddaramaiah) ಬಜೆಟ್ ಅಧಿವೇಶನಕ್ಕೆ ಕಿವಿ ಮೇಲೆ ಹೂವಿಟ್ಟುಕೊಂಡು ಬರುವ ಮೂಲಕ ವ್ಯಂಗ್ಯವಾಡಿದೆ. ಬಜೆಟ್ ಅಧಿವೇಶನದ ಬಜೆಟ್ ಮಂಡನೆ ಹೊತ್ತಿನಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯನವರು ಕಿವಿ ಮೇಲೆ ಹೂವಿಟ್ಟುಕೊಂಡು ಆಗಮಿಸುವ ಮೂಲಕ ಸರ್ಕಾರದ ವಿರುದ್ದ ಹಾಗೂ ಬಜೆಟ್ ವಿರುದ್ಧ ತಮ್ಮ ಸಮರ ಆರಂಭಿಸಿದರು.

ಬಜೆಟ್ ಭಾಷಣ ಆರಂಭಿಸಿದ ಸಿಎಂ ರಾಜ್ಯದ ಜನತೆಯ ಅಭಿವೃದ್ಧಿಗೆ ಪೂರಕವಾದ ಬಜೆಟ್ ಎಂದು ಹೇಳುತ್ತಿದ್ದಂತೇ ಆಕ್ಷೇಪ ವ್ಯಕ್ತಪಡಿಸಿದ ಸಿದ್ಧರಾಮಯ್ಯನವರು ಡಬ್ಬಲ್ ಇಂಜಿನ್ ಸರ್ಕಾರ ಜನರಿಗಾಗಿ ಏನು ಮಾಡಿಲ್ಲ. ಇಷ್ಟು ದಿನಗಳ ಕಾಲ ವಿಪಕ್ಷಗಳ ಕಿವಿಗೆ ಹೂವಿಡುತ್ತಿದ್ದ ಸರ್ಕಾರ ಈಗ ಜನರ‌ಮೇಲೆ ಹೂವಿಡುವಂತಹ ಬಜೆಟ್ ಮಂಡಿಸುತ್ತಿದೆ ಎಂದು ಹರಿಹಾಯ್ದರು. ಇದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತ್ಯುತ್ತರ ನೀಡಿದ್ದು ಕೆಲಕಾಲ ಸದನದಲ್ಲಿ ಕಾವೇರಿದ ವಾತಾವರಣ ಸೃಷ್ಟಿಸಿತು.

ಪರಸ್ಪರ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ವಾಗ್ವಾದಕ್ಕಿಳಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಂಗ್ರೆಸ್ ಸದಸ್ಯರು ಹಾಗೂ ಸಿದ್ಧರಾಮಯ್ಯ ಅವರಿಗೆ ಸಿಎಂ ಬಜೆಟ್ ಮಂಡನೆಗೆ ಅವಕಾಶ ಕಲ್ಪಿಸಿಕೊಡುವಂತೆ ಸೂಚಿಸಿದರು. ಅಷ್ಟೇ ಅಲ್ಲ ಸದಾ ಕಾಲ ಬಿಜೆಪಿಯವರು ಕೇಸರೀಕರಣ ಮಾಡುತ್ತಾರೆ ಎಂದು ಆರೋಪಿಸುವ ಸಿದ್ಧರಾಮಯ್ಯನವರೇ ಸ್ವತಃ ಕಿವಿಗೆ ಕೇಸರಿ ಬಣ್ಣದ ಹೂವು ಇಟ್ಟುಕೊಂಡಿದ್ದಾರೆ ಎಂದು ಕಾಲೆಳೆದರು.

ಬಳಿಕ ಸ್ಪೀಕರ್ ಮನವೊಲಿಕೆಯಿಂದ ಕಾಂಗ್ರೆಸ್ ಸದಸ್ಯರು ತಣ್ಣಗಾದರು. ಆದರೂ ಬಿಜೆಪಿ ಸರ್ಕಾರದ ವಿರುದ್ಧ ಮೌನವಾಗಿ ತಮ್ಮ ಸಮರ ಮುಂದುವರೆಸಿರುವ ಮಾಜಿಸಿಎಂ ಸಿದ್ಧರಾಮಯ್ಯನವರು ಬಜೆಟ್ ಅಧಿವೇಶನದ ಉದ್ದಕ್ಕೂ ಕಿವಿ ಮೇಲೆ ಕೇಸರಿ ಹೂವಿಟ್ಟುಕೊಂಡು ಕೂತಿದ್ದು ಎಲ್ಲರ ಗಮನ ಸೆಳೆದಿದೆ. ಸದ್ಯ ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸುತ್ತಿದ್ದು ಒಟ್ಟು ಮೂರು ಲಕ್ಷಕೋಟಿ ಗಾತ್ರದ ಬಜೆಟ್ ಮಂಡನೆಯಾಗುತ್ತಿದೆ. ಬೊಮ್ಮಾಯಿ ರೈತರಿಗೆ ಸಿಹಿಸುದ್ದಿ ನೀಡಿದ್ದು ರೈತರಿಗೆ ನೀಡುತ್ತಿದ್ದ ಬಡ್ಡಿ ರಹಿತ ಸಾಲದ ಮೊತ್ತವನ್ನು ಮೂರು ಲಕ್ಷದಿಂದ ಐದು ಲಕ್ಷಕ್ಕೆ ಏರಿಸಿದೆ. ಅಲ್ಲದೇ , ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ ಹೆಸರಿನಲ್ಲಿ 10000 ರುಪಯಿಗಳ ಹೆಚ್ಚುವರಿ ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ : Karnataka budget 2023 : ಬಜೆಟ್ ಮಂಡನೆಗೂ ಮೊದಲೇ ದೇವರ ದರ್ಶನ ಪಡೆದ ಸಿಎಂ ಬೊಮ್ಮಾಯಿ

ಇದನ್ನೂ ಓದಿ : ಇದನ್ನೂ ಓದಿ : Karnataka budget 2023 expectations: ಬಿಜೆಪಿ ಸರಕಾರದ ಕೊನೆಯ ಬಜೆಟ್‌ ನ ನಿರೀಕ್ಷೆಗಳೇನು?

Siddaramaiah’s different protest to CM Bommai’s budget: Opposition leader came with saffron flower on his ear

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular