SM Krishna Death Holiday : ಬೆಂಗಳೂರು : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರು ನಿಧನರಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಅಲ್ಲದೇ ಡಿಸೆಂಬರ್ 11 ರಂದು ಬುಧವಾರ ಕರ್ನಾಟಕ ರಾಜ್ಯದಾದ್ಯಂತ ಸರಕಾರಿ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೇ ಎಸ್‌ಎಂಕೆ ಅವರ ಅಂತ್ಯಕ್ರೀಯೆ ನಾಳೆ ನಡೆಯಲಿದ್ದು, ನಾಳೆ ಮಧ್ಯಾಹ್ನದ ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಇಂದಿನಿಂದ ಮೂರು ದಿನಗಳ ಕಾಲ ಶೋಕಾಚರಣೆಯ ಹಿನ್ನೆಲೆಯಲ್ಲಿ ಎಲ್ಲಾ ಸರಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜನವನ್ನು ಅರ್ಧಕ್ಕೆ ಹಾರಿಸುವ ಮೂಲಕ ಹಿರಿಯ ನಾಯಕನಿಗೆ ಗೌರವ ಸಲ್ಲಿಸಲಾಗುತ್ತದೆ. ಅಲ್ಲದೇ ಸಕಲ ಸರಕಾರಿ ಗೌರವದೊಂದಿಗೆ ನಾಳೆ ಅಂತ್ಯಕ್ರೀಯೆ ನಡೆಸಲು ಸರಕಾರ ಸಿದ್ದತೆ ಮಾಡಿಕೊಂಡಿದೆ.
ಇದನ್ನೂ ಓದಿ : SM Krishna Death : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ವಿಧಿವಶ
ಎಸ್‌ಎಂ ಕೃಷ್ಣ ಅವರು ಹುಟ್ಟೂರು ಮಂಡ್ಯ ಜಿಲ್ಲೆಯ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರೀಯೆ ನಾಳೆ ಸಂಜೆ ನಡೆಯಲಿದೆ. ಇಂದು ಸದಾಶಿವ ನಗರದ ಸ್ವಗೃಹ ಹಾಗೂ ನಾಳೆ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಳೆ ಮಧ್ಯಾಹ್ನ 3 ಗಂಟೆಯ ವರೆಗೂ ಅಂತಿಮ ದರ್ಶನ ನಡೆಯಲಿದ್ದು, ನಂತರ ಸರಕಾರಿ ಗೌರವದೊಂದಿಗೆ ಅಂತ್ಯಕ್ರೀಯೆ ನೆರವೇರಲಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ಇದನ್ನೂ ಓದಿ : Tirupati Tirumala Photo shoot Contravecy : ತಿರುಪತಿ ತಿರುಮಲದಲ್ಲಿ ಫೋಟೋ ಶೂಟ್ : ವಂಶಿನಾಥ್ ವಿರುದ್ದ ಕ್ರಮ
SM Krishna Death Holiday Declared Tomorrow december 11th Karnataka Government