ರಾಮನಗರ: ನಿಮ್ಮ ಹೆಸರು ಗಣೇಶ್, ವಿಘ್ನೇಶ್, ಗಜಾನನ ಅಂತಾನಾ? ಅಥವಾ ಗಣೇಶ್ ಅಂತ ಅರ್ಥ ಬರೋ ಹೆಸರು ನಿಮ್ಮದಾ ? ಹಾಗಿದ್ದರೇ ನೀವು ವಂಡರ್ ಲಾದಲ್ಲಿ ಫ್ರೀಯಾಗಿ ಆಟ ಆಡಿ ಎಂಜಾಯ್ ಮಾಡಬಹುದು.
ಹೌದು, ಗೌರಿಗಣೇಶ ಹಬ್ಬದ ಅಂಗವಾಗಿ ರಾಮನಗರದಲ್ಲಿರೋ ಅಮ್ಯೂಸ್ ಮೆಂಟ್ ಪಾರ್ಕ್ ವಂಡರ್ ಲಾ ಇಂತಹದೊಂದು ಸೂಪರ್ ಆಫರ್ ನೀಡಿದೆ. ಗಣೇಶ್ ಅಥವಾ ಗಣೇಶ ಅನ್ನೋ ಅರ್ಥ ಬರುವ ಹೆಸರಿನವರಿಗೆ ಒಂದಿಡಿ ದಿನ ಎಲ್ಲ ಆಟವನ್ನು ಉಚಿತವಾಗಿ ಎಂಜಾಯ್ ಮಾಡೋ ಅವಕಾಶ ನೀಡಿದೆ.
ಇದನ್ನೂ ಓದಿ: ಬೋಡು ತಲೆ ಇರುವವರಿಗೆ ಮಾತ್ರ ಬಾಲ್ಡ್ ಫೆಸ್ಟ್‌ಗೆ ಅವಕಾಶ !
ಮೊದಲು ಬರುವ 1೦೦ ಜನರಿಗೆ ಈ ಅವಕಾಶವಿದ್ದು ಇದಕ್ಕಾಗಿ ಗಣೇಶ ಹೆಸರಿನವರು ತಮ್ಮ ಒಂದು ಯಾವುದಾದರೂ ದಾಖಲೆಯನ್ನು ತಮ್ಮೊಂದಿಗೆ ತರೋದು ಕಡ್ಡಾಯ.
ಈ ಹಿಂದೆಯೂ ವಂಡರ್ ಲಾ ಇಂತಹುದೇ ಆಫರ್ ನೀಡಿ ಗಮನ ಸೆಳೆದಿತ್ತು. ಅಮೇರಿಕಾದಲ್ಲಿ ಕಮಲಾ ಹ್ಯಾರೀಸ್ ಉನ್ನತ ಹುದ್ದೆಗೇರಿದಾಗ ಕಮಲಾ ಎಂಬ ಹೆಸರಿನವರಿಗೆ ಹೈದ್ರಾಬಾದ್ ಮತ್ತು ರಾಮಾನಗರದ ವಂಡರ್ ಲಾದಲ್ಲಿ ಉಚಿತ ಪ್ರವೇಶ ನೀಡಲಾಗಿತ್ತು.
ಇದನ್ನೂ ಓದಿ: ಗೌರಿಕುಂಡದಲ್ಲಿರುವ ಬಿಸಿನೀರಿಗೂ, ಗೌರಿ ಹಬ್ಬಕ್ಕೂ ಇರುವ ನಂಟು ನಿಮಗೆ ಗೊತ್ತಾ ?
ಗಣೇಶನ ಸಹಸ್ರನಾಮದಲ್ಲಿ ಬರೋ ಯಾವುದೇ ಹೆಸರು ನಿಮ್ಮದು ಆಗಿದ್ದರೂ ಈ ಅವಕಾಶ ಸಿಗಲಿದ್ದು ಹೆಚ್ಚಿನ ಮಾಹಿತಿಗೆ 080-372 30333, 080-35073966 ಸಂಪರ್ಕಿಸ ಬಹುದಾಗಿದೆ.
(Is the meaning of your name Ganesh? Then you will get free entry ticket in wonderla)