ಬೆಂಗಳೂರು : ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ಬಾರಿ ವಿದ್ಯುತ್ ಸಮಸ್ಯೆ ಎದುರಾಗೋದಿಲ್ಲಾ ಅಂತ ಜನರು ಬಾವಿಸಿಕೊಂಡಿದ್ದರು. ಆದರೆ ಕರ್ನಾಟಕದಲ್ಲೀಗ ಕತ್ತಲು ಆವರಿಸುವ ಭೀತಿ ಎದುರಾಗಿದೆ. ಇನ್ನೆರಡು ದಿನಗಳಲ್ಲಿ ರಾಜ್ಯದಲ್ಲಿನ ವಿದ್ಯುತ್ ಸ್ಥಾವರಗಳಲ್ಲಿ ಸಂಗ್ರಹಿಸಿರುವ ಕಲ್ಲಿದ್ದಲು ಖಾಲಿಯಾಗಲಿದ್ದು, ಪ್ರಮುಖ ನಗರಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಲ್ಲಿದ್ದಲು ಕೊರತೆಯಿಂದ ರಾಜ್ಯದ ಮೂರೂ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕುಸಿತ ಕಂಡಿದೆ. ಇದರಿಂದ ರಾಜ್ಯಾದ್ಯಂತ ಕತ್ತಲು ಆವರಿಸುವ ಪರಿಸ್ಥಿತಿ ಎದುರಾಗಿದೆ. ಮಳೆಯಿಂದಾಗಿ ರೈತರು ಈಗ ನೀರಾವರಿ ಪಂಪ್‍ಸೆಟ್‍ಗಳನ್ನು ಬಳಸುತ್ತಿಲ್ಲ. ಆದರೆ ಒಮ್ಮೆ ಮಳೆ ನಿಂತರೆ, ಐಪಿ ಸೆಟ್‍ಗಳು ಉತ್ಪಾದಿಸುವ ಸಾಮಥ್ರ್ಯ ಸುಮಾರು 20-30 ಪ್ರತಿಶತ ಬಳಸುವುದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಹಗಲಿನಲ್ಲಿ ವಿದ್ಯುತ್ ಬೇಡಿಕೆಯನ್ನು ಸೌರ ಮತ್ತು ಪವನ ಶಕ್ತಿ ಮೂಲಗಳಿಂದ ಪೂರೈಸಲಾಗುತ್ತಿದೆ. ರಾತ್ರಿಯಲ್ಲಿ ಜಲವಿದ್ಯುತ್ ಮೂಲಕ ನಿರ್ವಹಿಸಲಾಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಕೇವಲ ಎರಡು ಪರಿಹಾರಗಳಿವೆ. ಮುಕ್ತ ಮಾರುಕಟ್ಟೆ ಗ್ರಿಡ್‍ಗಳಿಂದ ವಿದ್ಯುತ್ ಖರೀದಿಸಿ ಅಥವಾ ಮುಕ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಕಲ್ಲಿದ್ದಲನ್ನು ಖರೀದಿ- ಇವೆರಡೂ ದುಬಾರಿಯಾಗಿದೆ. ಆದರೆ ಕಲ್ಲಿದ್ದಲು ಕೊರತೆ ಹೊಸ ಸಮಸ್ಯೆ ಏನಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Good News : ಮುಜರಾಯಿ ಇಲಾಖೆ ಅರ್ಚಕ ಹಾಗೂ ನೌಕರರಿಗೆ ಭರ್ಜರಿ ಕೊಡುಗೆ ಘೋಷಿಸಿದ ರಾಜ್ಯ ಸರ್ಕಾರ
ಮುಖ್ಯಮಂತ್ರಿಗಳಿಗೆ ಕೇಂದ್ರ ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಇತ್ತ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಕಲ್ಲಿದ್ದಲು ಪೂರೈಕೆ ಸ್ಥಿತಿಗತಿ ಬಗ್ಗೆ ನಿಗಾ ವಹಿಸಿದ್ದಾರೆ.
ಉಷ್ಣಸ್ಥಾವರಗಳಿಗೆ ಪೂರೈಕೆಯಾಗುತ್ತಿರುವ ಕಲ್ಲಿದ್ದಲು: ಬಳ್ಳಾರಿ ಉಷ್ಣ ಸ್ಥಾವರಕ್ಕೆ ನಿತ್ಯ 25 ಸಾವಿರ ಟನ್ ಕಲ್ಲಿದಲು ಅವಶ್ಯಕತೆ ಇದೆ. ಮೂರು ವಿದ್ಯುತ್ ಘಟಕ ಹೊಂದಿರುವ ಬಳ್ಳಾರಿ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ಕೊರತೆಯಿಂದ ಎರಡು ಘಟಕ ಸ್ಥಗಿತವಾಗಿದೆ. ಬಳ್ಳಾರಿ ಶಾಖೋತ್ಪನ್ನ ಸ್ಥಾವರದಲ್ಲಿ ದಾಸ್ತಾನು ಬರಿದಾದ ಹಿನ್ನೆಲೆ 15 ದಿನಗಳ ಹಿಂದೆ ಮೂರನೇ ಘಟಕ (700 ಮೆ.ವಾ), ಅ.2ರಂದು ಎರಡನೇ ಘಟಕ (500 ಮೆ.ವಾ.) ಸ್ಥಗಿತಗೊಳಿಸಲಾಗಿದೆ.
ಸದ್ಯಕ್ಕೆ ಪ್ರತಿದಿನ 8,000 ಮೆಟ್ರಿಕ್ ಲಭ್ಯವಾಗುತ್ತಿದೆ. 500 ಮೆಗಾ ವ್ಯಾಟ್ ಸಾಮಥ್ರ್ಯದ ಒಂದನೇ ಘಟಕ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದಿಸುತ್ತಿದೆ. ಬಳ್ಳಾರಿಗೆ ಸೋಮವಾರ ಮೂರು ರ್ಯಾಕ್ ಕಲ್ಲಿದ್ದಲು ಬಂದಿದೆ. ಅಂದರೆ ಸುಮಾರು 12 ಸಾವಿರ ಟನ್‍ನಷ್ಟು ಕಲ್ಲಿದ್ದಲು ಪೂರೈಕೆಯಾಗಿದೆ.
ರಾಯಚೂರು ಉಷ್ಣಸ್ಥಾವರಕ್ಕೂ ಪ್ರತಿನಿತ್ಯ 25 ಸಾವಿರ ಟನ್ ಕಲ್ಲಿದ್ದಲು ಬೇಕು. ರಾಯಚೂರು ಉಷ್ಣ ಸ್ಥಾವರಕ್ಕೆ ಸುಮಾರು 8 ಸಾವಿರ ಟನ್‍ನಷ್ಟು ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಕಲ್ಲಿದ್ದಲು ಕೊರತೆಯಿಂದ ರಾಯಚೂರು ಸ್ಥಾವರದಲ್ಲಿ ಮೂರು ಘಟಕ ಸ್ಥಗಿತಗೊಳಿಸಲಾಗಿದೆ.
ಇದರಿಂದ ಕೇವಲ ಅರ್ಧ ಯರಮರಸ್ ಉಷ್ಣ ಸ್ಥಾವರಕ್ಕೆ ನಿತ್ಯ 24 ಸಾವಿರ ಟನ್ ಕಲ್ಲಿದ್ದಲು ಬೇಕು.ಆದ್ರೆ, ಸೋಮವಾರ ಸುಮಾರು 8 ಟನ್‍ನಷ್ಟು ಕಲ್ಲಿದ್ದಲು ಬಂದಿದೆ. ಪ್ರತಿನಿತ್ಯ ಈ ಮೂರು ಉಷ್ಣ ಸ್ಥಾವರಗಳಿಗೂ ಸುಮಾರು 20 ರಿಂದ 24ರಷ್ಟು ರ್ಯಾಕ್‍ಗಳು ಬರುತ್ತಿತ್ತು. ಆದರೆ, ಈಗ ಮೂರು ಸ್ಥಾವರಗಳಿಂದ ಪ್ರತಿನಿತ್ಯ ಸುಮಾರು 7 ರಿಂದ 10ರಷ್ಟು ರ್ಯಾಕ್‍ಗಳು ಮಾತ್ರ ಬರುತ್ತಿದೆ.
ಬರಿದಾದ ಕಲ್ಲಿದ್ದಲು ದಾಸ್ತಾನು : ಸಾಮಾನ್ಯವಾಗಿ ಮಳೆಗಾಲದಲ್ಲಿ ಕಲ್ಲಿದ್ದಲು ಗಣಿಗಾರಿಕೆ, ಪೂರೈಕೆಗೆ ಸಮಸ್ಯೆಯಾಗುತ್ತದೆ. ತೋಯ್ದ ಕಲ್ಲಿದ್ದಲು ಬಳಕೆ ಅಸಾಧ್ಯ. ಈ ಹಿಂದೆ ಶಾಖೋತ್ಪನ್ನ ಸ್ಥಾವರಗಳಲ್ಲಿ 10 ರಿಂದ 15 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿರುತ್ತಿತ್ತು.
ಇದನ್ನೂ ಓದಿ: ಅಧಿಕಾರಿಗಳು, ಜನಪ್ರತಿನಿಧಿಗಳು ಸಾರ್ವಜನಿಕರ ಕರೆ ಸ್ವೀಕರಿಸಲೇ ಬೇಕು : ರಾಜ್ಯ ಸರಕಾರದ ಆದೇಶ
ಸಂಕಷ್ಟ ಪರಿಹಾರ ಸೂತ್ರದ ಅನ್ವಯ ತುರ್ತು ಅಗತ್ಯವಿರುವಷ್ಟು ದಾಸ್ತಾನು ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಪ್ರಸ್ತುತ ರಾಜ್ಯದ ವಿದ್ಯುತ್ ಬೇಡಿಕೆ 153.669 ಮಿ.ಯೂನಿಟ್ ನಷ್ಟಿದೆ. ಆದರೆ, ಕಲ್ಲಿದ್ದಲು ದಾಸ್ತಾನು ಕಡಿಮೆ ಇರುವ ಹಿನ್ನೆಲೆ ರಾಯಚೂರು, ಬಳ್ಳಾರಿ ಮತ್ತು ಯರಮರಸ್‍ನ 13 ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳ ಪೈಕಿ 6 ಘಟಕಗಳನ್ನು ಮಾತ್ರ ಚಾಲನೆಯಲ್ಲಿಡಲಾಗಿದೆ. ಈ ಘಟಕಗಳಿಂದ 37.89 ಮಿ.ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಮತ್ತೊಂದು ಕಡೆ ಜಲ ವಿದ್ಯುತ್ ಸ್ಥಾವರಗಳಿಂದ 37.10 ಮಿ.ಯೂನಿಟ್, ಸೋಲಾರ್, ಪವನ, ಅನಿಲ ವಿದ್ಯುದಾಗಾರಗಳಿಂದ 0.1160 ಮಿ.ಯೂ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಖಾಸಗಿ ವಿದ್ಯುದಾಗರಗಳು ಮತ್ತು ಕೇಂದ್ರದ ಗ್ರಿಡ್‍ನಿಂದ ಸುಮಾರು 81.58 ಮಿ.ಯೂ. ವಿದ್ಯುತ್ ಪೂರೈಕೆಯಾಗುತ್ತಿದೆ. ರಾಜ್ಯದ ಈ ವಿದ್ಯುತ್ ಸಮಸ್ಯೆಯನ್ನು ಸರಕಾರ ಯಾವ ರೀತಿ ಪರಿಹರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
(Darkness engulfing Karnataka: Coal in power plants empty in two days)