ಭಾನುವಾರ, ಏಪ್ರಿಲ್ 27, 2025
HomekarnatakaAgumbe Accident : ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

Agumbe Accident : ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

- Advertisement -

ಆಗುಂಬೆ : ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಂತಿರುವ ಆಗುಂಬೆ ಘಾಟಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕ್ಯಾಂಟರ್‌ ವಾಹನವೊಂದು ಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಉರುಳಿದ ಪರಿಣಾಮ ವಾಹನದಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.

ಹೆಬ್ರಿ ಸಮೀಪದ ಆಗುಂಬೆ ಘಾಟಿಯ ಐದನೇ ತಿರುವಿನಲ್ಲಿ ಕ್ಯಾಂಟರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ವಾಹನದಲ್ಲಿದ್ದ ನಾಲ್ವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ. ಹಾಗೂ 5 ಜನ ಗಂಭೀರ ಗಾಯಗೊಂಡಿದ್ದಾರೆ. ಅಫಘಾತಕ್ಕೀಡಾದ ವಾಹನ ಕೊಪ್ಪಕ್ಕೆ ಇಂಟರ್ ಲಾಕ್ ಬ್ರಿಕ್ಸ್ ಗಳನ್ನು ಸರಬರಾಜು ಮಾಡಲು ತೆರಳಿ ಹಿಂತಿರುಗುತ್ತಿತ್ತು ಎನ್ನಲಾಗುತ್ತಿದೆ.

ಇದನ್ನೂ ಓದಿ: Boat Tragedy : ಮೀನುಗಾರಿಕಾ ಬೋಟ್‌ ಬಂಡೆಗೆ ಢಿಕ್ಕಿ : 6 ಮಂದಿ ಮೀನುಗಾರರ ರಕ್ಷಣೆ

ಕೊಪ್ಪಕ್ಕೆ ಇಂಟರ್ ಲಾಕ್ ಬ್ರಿಕ್ಸ್ ಗಳನ್ನು ಹಾಕಿ ಮರಳಿ ಹೆಬ್ರಿಯತ್ತ ಬರುವಾಗ ಆಗುಂಬೆ ಘಾಟಿಯ ಕಡಿದಾದ ಏಳನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದು ಈ ದುರ್ಘಟನೆಯಲ್ಲಿ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತದ್ದಾರೆ.

ಆಗುಂಬೆ ಘಾಟಿಯ ದಾರಿ ಎಷ್ಟು ರೋಮಾಂಚನವೂ ಅಷ್ಟೇ ಅಪಾಯಕಾರಿ ಸ್ವಪ್ಪ ಆಯ ತಪ್ಪಿದರು ಪ್ರಪಾತದಲ್ಲಿ ಇರಬೇಕಾಗುತ್ತದೆ. ಇಂತ ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ ಒಂದು ಇಂದು ಸಂಭವಿಸಿದೆ.

ಇದನ್ನೂ ಓದಿ: IT Raid : ಉಪ್ಪುಂದ ಮೂಲದ ಗುತ್ತಿಗೆದಾರ ಯು.ಬಿ. ಶೆಟ್ಟಿಗೆ ಐಟಿ ಶಾಕ್‌

(Four Died on the spot in fatal road accident at Agumbe Ghati)

RELATED ARTICLES

Most Popular