ಸೋಮವಾರ, ಏಪ್ರಿಲ್ 28, 2025
HomekarnatakaGood News : ಹೊಸ ವಾಹನ ಖರೀದಿಸುವವರಿಗೆ; ಗುಡ್ ನ್ಯೂಸ್ ಕೊಟ್ಟ ಸರಕಾರ

Good News : ಹೊಸ ವಾಹನ ಖರೀದಿಸುವವರಿಗೆ; ಗುಡ್ ನ್ಯೂಸ್ ಕೊಟ್ಟ ಸರಕಾರ

- Advertisement -

ಬೆಂಗಳೂರು : ಹೊಸದಾಗಿ ವಾಹನ ಖರಿದೀಸಲು ಬಯಸುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದರೆ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಗೆ ತೆರಳಿ ನೋಂದಣಿ ಮಾಡಿಸಬೇಕಾಗಿತ್ತು. ವಾಹನ ಮಾಲೀಕರಿಗೆ ಇದು ಸವಾಲಿನ ಕೆಲಸವಾಗಿತ್ತು. ಆದ್ರೀಗ ಸರಕಾತ ಈ ಪದ್ಧತಿಯನ್ನು ಬದಲಾಯಿಸಿ ʼಆನ್‌ ಲೈನ್‌ʼ ಮೂಲಕ ಹೊಸ ವಾಹನ ನೋಂದಣಿಗೆ ಅವಕಾಶ ಮಾಡಿಕೊಟ್ಟಿದೆ.

ಹೊಸ ವಾಹನವನ್ನು ಖರೀದಿಸಿದ ಮೇಲೆ ಪ್ರಥಮ ಬಾರಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಕೊಂಡೊಯ್ದು ನೋಂದಣಿ ಮಾಡುವ ಅಗತ್ಯವಿಲ್ಲ. ವಾಹನದ ವಿವರವನ್ನು ವಾಹನ-4 ಪೋರ್ಟಲ್ ನಲ್ಲಿ ಮಾರಾಟಗಾಗರು (Dealers) ನಮೂದಿಸಿ ನಂತರ ನೋಂದಣಿಗೆ ತಗುಲುವ ತೆರಿಗೆ ಮತ್ತು ಶುಲ್ಕವನ್ನು ಆನ್‌ ಲೈನ್‌ ನಲ್ಲಿ ಪಾವತಿಸಿದರೆ ಅರ್ಜಿ ನೋಂದಣಿ ಯಾಗುತ್ತದೆ.

ಇದನ್ನೂ ಓದಿ: GOOD NEWS ಕೊಟ್ಟ ರಾಜ್ಯ ಸರ್ಕಾರ : 30 ಲಕ್ಷ ರೈತರಿಗೆ ಸಿಗಲಿದೆ 20,810 ಕೋಟಿ ಕೃಷಿ ಸಾಲ

ಆನ್‌ ಲೈನ್‌ ಸ್ವೀಕರಿಸಿದ ಅರ್ಜಿಯನ್ನು ಆನ್‌ ಲೈನ್‌ ನಲ್ಲಿಯೇ ಪರಿಶೀಲಿಸಿ, ನೊಂದಣಿ ಪ್ರಾಧಿಕಾರದಿಂದ ಅನುಮೋಧನೆಗೊಳ್ಳುತ್ತದೆ. ನೋಂದಾಯಿಸಿದ ನಂಬರ್‌ ಅನ್ನು ನೀಡಲಾಗುತ್ತದೆ.  ಜನರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಬೆಂಗಳೂರಿನ ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಪತ್ರಿಕಾ ಪ್ರಕಣೆಯನ್ನು ನೀಡಿದ್ದಾರೆ.

ಈ ಹಿಂದೆ ಹೊಸ ವಾಹನ ಖರೀದಿಸಿದರೆ ರೀಜಿನಲ್‌ ಟ್ರಾನ್ಸ್ ಫ್ರೋರ್ಟ್‌ ಆಫಿಸಿಗೆ ತೆರಳಿ ವಾಹನವನ್ನು ನೊಂದಣಿ ಮಾಡುವುದೇ ತಲೆ ನೋವಿನ ಕೆಲಸವಾಗಿತ್ತು ಆದರೆ ರಾಜ್ಯ ಸರ್ಕಾರ ಹೊಸ ವಾಹನವನ್ನು ಖರೀದಿಸಿದ ಬಳಿಕ ಪ್ರಥಮ ಭಾರಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಕೊಂಡೊಯ್ದು ನೋಂದಣಿ ಮಾಡುವ ಅಗತ್ಯವಿಲ್ಲ ಆನ್‌ ಲೈನ್‌ ನಲ್ಲಿ ಹೊಸ ವಾಹನ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದು ಜನರಿಗೂ ಸಹಾಯಕವಾಗಿದೆ.

ಇದನ್ನೂ ಓದಿ: ಅಕ್ಟೋಬರ್‌ 30 ರಂದು ಸರಕಾರಿ ನೌಕರರಿಗೆ ವೇತನ ಸಹಿತ ರಜೆ : ರಾಜ್ಯ ಸರಕಾರದ ಮಹತ್ವದ ಘೋಷಣೆ

( Government gives good news to new vehicle buyers  )

RELATED ARTICLES

Most Popular