ಬೆಂಗಳೂರು : ಮನೆ, ಕಟ್ಟಡ ನಿರ್ಮಾಣಕ್ಕೆ ಮರಳು ಸಿಗದೆ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಮರಳು ಸಿಕ್ಕಿದರೂ ಮರಳಿನ ಬೆಲೆ ಮಾತ್ರ ಗಗನಕ್ಕೆ ಏರಿದೆ. ಇದರ ನಡುವೆಯೂ ಗಣಿ ಸಚಿವರಾಗಿದ್ದಂತ ಮುರುಗೇಶ್ ನಿರಾಣಿಯವರು ಶೀಘ್ರವೇ ನೂತನ ಮರಳು ನೀತಿ ಜಾರಿಗೆ ತರೋದಾಗಿ ಈ ಮೂಲಕ ಬಡವರಿಗೆ ಹಾಗೂ ಜನಸಾಮಾನ್ಯರಿಗೆ ಉಚಿತ ಮರಳು ನೀಡೋದಾಗಿ ಹೇಳಿದ್ದರು.
ಗಣಿ ಸಚಿವರಾದ ಮುರುಗೇಶ್ ನಿರಾಣಿಯವರು ಮಾತನ್ನು ಜನರು ನಂಬಿದರು. ಆದರೆ ಹಾಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ನೂತನ ಮರಳು ನೀತಿಯಲ್ಲಿ ಉಚಿತ ಮರಳು ಪ್ರಸ್ತಾವನೆಯೇ ಇಲ್ಲವೆನ್ನುವ ಮೂಲಕ, ಉಚಿತ ಮರಳು ನಿರೀಕ್ಷೆಯಲ್ಲಿದ್ದವರಿಗೆ ಉಚಿತ ಮರಳು ಪ್ರಸ್ತಾವನೆಯೇ ಇಲ್ಲ ಎಂದು ಶಾಕ್ ನೀಡಿದ್ದಾರೆ.
ಇದನ್ನೂ ಓದಿ: Namma Metro ಕಾಮಗಾರಿ ವೇಳೆ ಅನಾಹುತ : ಮುಚ್ಚಿದ ಬಾವಿಯಿಂದ 30 ಅಡಿ ಮಣ್ಣು ಕುಸಿತ
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಹಾಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಹಿಂದಿನ ಸಚಿವರು ಉಚಿತ ಮರಳಿನ ನೀಡೋ ಬಗ್ಗೆ ಅದೇಗೆ ಹೇಳಿದ್ದರೋ ಗೊತ್ತಲ್ಲ. ಆದ್ರೇ ನೂತನ ಮರಳು ನೀತಿಯಲ್ಲಿ ಉಚಿತವಾಗಿ ಮರಳು ಕೊಡೋ ಕುರಿತಂತೆ ಯಾವುದೇ ಪ್ರಸ್ತಾಪವೇ ಇಲ್ಲ ಎಂದಿದ್ದಾರೆ. ಈ ಮಾತನ್ನು ಹೇಳುವ ಮೂಲಕ ಉಚಿತ ಮರಳು ನಿರೀಕ್ಷೆಯಲ್ಲಿದ್ದಂತ ಬಡವರಿಗೆ ನಿರಾಸೆ ಮಾಡಿದ್ದಾರೆ.
ಇದನ್ನೂ ಓದಿ: Crime News : ನ್ಯಾಯಾಲಯದಲ್ಲೇ ಮಚ್ಚಿನಿಂದ ಪತ್ನಿಯ ಕಾಲು ಕತ್ತರಿಸಿದ ನಿವೃತ ಯೋಧ
(Ministers assured and handed over free sand)